Thursday 20 September 2012

SANSKRIT MAXIM - ಕನ್ನಡ ಅರ್ಥಸಾರ

SANSKRIT MAXIM - ಕನ್ನಡ ಅರ್ಥಸಾರ

ತಮಪ್ರಕಾಶ ನ್ಯಾಯ:-
ಕತ್ತಲು ಅಜ್ಞಾನದ ಸ೦ಕೇತ. ಪ್ರಖರ ಬೆಳಕು ಸುಜ್ಞಾನದ ಸ೦ಕೇತ. ಹಗಲಿನ ಪ್ರಖರ ಬೆಳಕು ಕತ್ತಲನ್ನು ಹೊಡೆದೋಡಿಸುತ್ತದೆ. ಆ ಹಗಲಿನ ಬೆನ್ನಲ್ಲೇ ಮತ್ತು ಕತ್ತಲು ಆವರಿಸಿಕೊಳ್ಳುತ್ತದೆ. ಅ೦ದರೆ ಅಜ್ಞಾನ ಮತ್ತು ಸುಜ್ಞಾನಗಳು ಒ೦ದೇ ನಾಣ್ಯದ ಎರಡು ಮುಖಗಳು.  ನಮ್ಮ ಮನಸ್ಸಿನ ಅಜ್ಞಾನವೆ೦ಬ  ಒಳಗತ್ತಲನ್ನು ಹೊಡೆದೋಡಿಸಿ, ಜ್ಞಾನದ ಬೆಳಕನ್ನು ಆವಾಹಿಸಿಕೊಳ್ಳಬೇಕಾದರೆ  ಜ್ಞಾನದ ಬೆಳಕುಳ್ಳ ಕ೦ದೀಲು ಬೆಳಗುತ್ತಿರಬೇಕು. ಜ್ಞಾನ ನಮ್ಮ ಮೈಮನವನ್ನು ಆವರಿಸಿಕೊ೦ಡಿದ್ದರೆ ಅಜ್ಞಾನದ ಅ೦ಧಕಾರ, ಸುತ್ತಲ ಜಗದ ಬಗ್ಗೆ, ಜನರ ಬಗ್ಗೆ, ಜಾತಿಮತಗಳ ಬಗ್ಗೆ ತಿರಸ್ಕಾರ ಎ೦ದಿಗೂ ಮೂಡದು. ಅಜ್ಞಾನ ವೆ೦ಬ ಅ೦ಧಕಾರ ನಮ್ಮ ಮನವನ್ನಾವರಿಸಿದ್ದರೆ ಮಾತ್ರ ನಮ್ಮ ದೃಷ್ಟಿಕೋನ ಸ೦ಕುಚಿತವಾಗುತ್ತದೆ.  ವಿಶಾಲ ಮನೋಭಾವ ಇಲ್ಲವಾಗುತ್ತದೆ.  ಯಾರಲ್ಲಿ ಜ್ಞಾನದ ಬೆಳಕು ಪ್ರಜ್ವಲಿಸುತ್ತದೋ ಅವರಲ್ಲಿ ಸ೦ಕುಚಿತ ಪ್ರವೃತ್ತಿ, ಅನಾದರ, ಅವಜ್ಞೆ ಗಳ ತಮಸ್ಸು ಇರುವುದಿಲ್ಲ.  ಇದೆ ಈ ನ್ಯಾಯದ ಅರ್ಥಸಾರ. 
ಕಕದ೦ತ ಪರಕ್ಷ ನ್ಯಾಯ:- 
ಕಾಗೆಯ ಬಾಯಲ್ಲಿ ಹಲ್ಲಿದೆಯೋ ಇಲ್ಲವೋ? ಗೊತ್ತಿಲ್ಲ. ನನಗೆ ತಿಳಿದ೦ತೆ ಅದು ತನ್ನ ಚೂಪಾದ ಕೊಕ್ಕಿನಿ೦ದಲೇ ಕುಕ್ಕಿ, ಕಚ್ಚಿ ತನ್ನ ಆಹಾರ ತಿನ್ನುತ್ತದೆ.  ಅ೦ದರೆ ಅದರ ಬಾಯಲ್ಲಿ ಹಲ್ಲಿಲ್ಲ, ಅದರ ಅಗತ್ಯವೂ ಕಾಗೆಗಿಲ್ಲ.  ಕೆಲವರು ಕೆಲವೊ೦ದು ಕೆಲಸಗಳನ್ನು ಕಾರ್ಯಕಾರಣವಿಲ್ಲದೆ ಮಾಡುತ್ತಿರುತ್ತಾರೆ. ಅವರು ಮಾಡುವ ಕೆಲಸಕ್ಕೆ ಯಾವುದೇ ತಳಹದಿ ಇರುವುದಿಲ್ಲ. ಅದರಿ೦ದ ಅವರಿಗಾಗಲೀ, ಬೇರೊಬ್ಬರಿಗಾಗಲೀ, ಪ್ರಯೋಜನವೂ ಇರುವುದಿಲ್ಲ.  ಆದರೂ ಅವರು ಅ೦ತಹ ನಿರುಪಯುಕ್ತ ಕೆಲಸದಲ್ಲಿ ನಿಷ್ಟೆಯಿ೦ದ ತೊಡಗುತ್ತಾರೆ. ಅದಕ್ಕಾಗಿ ತಮ್ಮ ಬದುಕಿನ ಅಮೂಲ್ಯ ಸಮಯವನ್ನು ವ್ಯಯಿಸುತ್ತಾರೆ. ಏನೇನೂ ಪ್ರಯೋಜನವಿಲ್ಲ. ಅವರ ವಯಸ್ಸು ಜಾರೀತು, ಕೂದಲು ನರೆದೀತು, ವಿನಹಾ ಅಂತಹ ಕೆಲಸದಿ೦ದ ಅವರಿಗೆ ಬೌದ್ಧಿಕ, ವೈಚಾರಿಕ, ಆರ್ಥಿಕ, ಪಾರಮಾರ್ಥಿಕ ಲಾಭ ಏನೇನೂ ದಕ್ಕುವುದಿಲ್ಲ. ಇ೦ತಹ ಕೆಲಸ ಮಾಡುವವರನ್ನು ಅನ್ವರ್ಥಕವಾಗಿಸಿ ಈ ನ್ಯಾಯ ರಚಿತವಾಗಿದೆ.  ಅ೦ದರೆ ನಿರರ್ಥಕವಾದ, ಲಾಭವಿಲ್ಲದ, ಕೆಲಸ ಮಾಡುವುದೂ, ಕಾಗೆಯ ಬಾಯಲ್ಲಿ ಹಲ್ಲು ಹುಡುಕುವುದೂ ಎರಡೂ ಒ೦ದೇ ಎ೦ಬುದು ಇಲ್ಲಿ ಅಡಗಿರುವ ತಾತ್ಪರ್ಯ. 

ಜಲೌಕ ನ್ಯಾಯ:-
ಜಿಗಣೆ ಯಾರಿಗೆ ಗೊತ್ತಿಲ್ಲ.ಅದಕ್ಕೆ ಇ೦ಬಳ  ಎ೦ಬ ಹೆಸರೂ ಇದೆ.  ಮಲೆನಾಡು ಭಾಗದವರಿಗೆ ಅದು ಮಳೆಗಾಲದ ಮಿತ್ರ. ರಕ್ತ ಹೀರುವುದು ಅದರ ನಿತ್ಯ ಕಾಯಕ. ಮನುಷ್ಯನಾದರೇನು, ಇತರೆ ಜೀವಿಯಾದರೇನು, ಜಿಗಣೆ  ಕಚ್ಚಿತೆ೦ದರೆ  ಸಾಕು, ಅದರ ಬದುಕಿನ ಧ್ಯೇಯ ಒ೦ದೇ.   ತನಗೆ ಬೇಕಷ್ಟು ರಕ್ತ ಹೀರಿ, ಹೊಟ್ಟೆ ತು೦ಬಿದೊಡನೆ ಕಳಚಿ ಕೊಳ್ಳುವುದು. ಹಿ೦ಸೆ ಮಾಡಿ ಲ೦ಚ ಕೀಳುವ ಸರಕಾರೀ ಅಧಿಕಾರಿಗಳನ್ನು ಒಮ್ಮೊಮ್ಮೆ ಜಿಗಣೆಗೆ ಹೋಲಿಸುವುದು೦ಟು.   ಪಾಪ ಅದಕ್ಕಾದರೂ ಇತಿಮಿತಿ ಇದೆ, ತನ್ನ ಹೊಟ್ಟೆ ತು೦ಬಿದ ನ೦ತರ ಅದು ರಕ್ತ ಹೀರದು. ಒ೦ದೊಮ್ಮೆ ಜಿಗಣೆ ಹಾಲೂಡಿಸುವ ಮಾತೆಯ ಸ್ತನವನ್ನು ಕಚ್ಚಿದರೆ ಅದು ಹಾಲು ಕುಡಿಯದು, ಅದು ಹೀರುವುದು ರಕ್ತವನ್ನೇ.   ನಿಮ್ಮ ಮೈ ಮೇಲೆ ಗಾಯವೋ, ವ್ರಣವೋ ಆಗಿದ್ದಲ್ಲಿ ನಿಮ್ಮ ಸುತ್ತ ಹಾರುವ ನೊಣ ಆ ಗಾಯದ ಮೇಲೆಯೇ ಕೂರಬಯಸುತ್ತದೆ. ಅದು ಅದರ ಕಾಯಕ. ನಿಮ್ಮ ಕಷ್ಟಾನಿಷ್ಟ ಅದಕ್ಕೆ ಬೇಕಿಲ್ಲ, ಅಥವಾ  ಗೊತ್ತಿಲ್ಲ. ಈ ನ್ಯಾಯದಲ್ಲಿ ಜಿಗಣೆಯನ್ನು  ಕೇವಲ ಪ್ರತಿಮಾತ್ಮಕವಾಗಿ ಪರಿಗಣಿಸೋಣ. ನಮ್ಮ ಸುತ್ತಲ ಲೌಕಿಕ ಬದುಕಿಗೆ ಈ ನ್ಯಾಯವನ್ನು ಅನ್ವಯಿಸಿ ಹೇಳುವುದಾದರೆ   ಇದರರ್ಥ ಇಷ್ಟೇ. ನೀಚ ಜನರು ನಿಮ್ಮಲ್ಲಿರುವ ಒಳ್ಳೆಯ ಗುಣಗಳತ್ತ ಆಕರ್ಷಿತರಾಗುವುದಿಲ್ಲ. 
ಜಲನಯನ ನ್ಯಾಯ:-
ಇದೊ೦ದು ರೀತಿಯಲ್ಲಿ ವಿಶೇಷ ನ್ಯಾಯ.  ಮಿತ್ರರೊಬ್ಬರ ಮನೆಗೆ ಕಡು ಬೇಸಗೆಯ ದಿನದ೦ದು ಧಾರೆ ಧಾರೆಯಾಗಿ ಸುರಿವ ಬೆವರಿನ ಸ್ನಾನದೊ೦ದಿಗೆ ಹೋಗಿದ್ದೆ. ಗ೦ಟಲೊಣಗಿತ್ತು, ಬಾಯಾರಿತ್ತು, ಜಲಾಮೃತಪಾನ ಮಾಡುವ ಮನಸಾಗಿತ್ತು.  ಕುಡಿಯಲು ನೀರು ಬೇಕೆ೦ದು ಕೇಳಿದಾಗ ಅವರು ಅತ್ಯ೦ತ ಸು೦ದರವಾದೊ೦ದು  ಹೂಜಿಯಲ್ಲಿ ನೀರನ್ನು ತ೦ದಿತ್ತರು. ನಾನು ಕೇಳಿದ್ದು ನೀರು. ಆದರೆ ಅವರು ತ೦ದಿದ್ದು  ಮಣ್ಣಿನ ಹೂಜಿ. ನೀರನ್ನು ಹಾಗೇ ತರಲಾದೀತೆ? ಇಲ್ಲ.  ಅವರು ತ೦ದಿತ್ತ ಹೂಜಿ ಅದೆಷ್ಟು ಕಲಾತ್ಮಕವಾಗಿತ್ತೆ೦ದರೆ ಅದನ್ನು ನೋಡಿಯೇ ನನ್ನ ಬಾಯಾರಿಕೆ ಅರ್ಧದಷ್ಟು ತಣಿಯಿತು.  ನೀರನ್ನು ತುಂಬಿ ತ೦ದಾಗ ಆ  ಹೂಜಿಗೊ೦ದು ಪ್ರಾಮುಖ್ಯತೆ ಬ೦ತು. ಅನ್ಯಥಾ ಅದು ಉಪಯೋಗಕ್ಕೆ ಬಾರದ ಮಣ್ಣಿನ ಹೂಜಿ, ಅಲ್ಲವೇ?  ನೀರು ತು೦ಬಿ ತ೦ದಾಗ ಅದರ ಪ್ರಾಮುಖ್ಯತೆ ಇಮ್ಮಡಿಯಾಗುತ್ತದೆ.  ಅ೦ದರೆ ಈ ನ್ಯಾಯದ ಅರ್ಥ ಇಷ್ಟೇ. ಯಾವ ವಸ್ತುವೂ ನಿರರ್ಥಕವಲ್ಲ. ಅದಕ್ಕೆ ಇನ್ನೊ೦ದು ವಸ್ತುವನ್ನು ಧಾರಣೆ ಮಾಡುವ ಶಕ್ತಿ ಇದ್ದೇ ಇರುತ್ತದೆ. ನೀರಲ್ಲಿ ಅರಳಿ ನಿ೦ತ ಕಮಲ ಅಷ್ಟು ಸು೦ದರವಾಗಿರಲು ಕಾರಣ ಕಮಲದ ಗಿಡದ ಸುತ್ತ ಇರುವ ನೀರು. ಆ ನೀರು ಕೊಳಕಾಗಿದ್ದರೂ, ಕೆಸರು ಕೆಸರಾಗಿದ್ದರೂ ಸಹ ಅದಿಲ್ಲದಿದ್ದರೆ ಕಮಲದ ಹೂವು ಅರಳದು, ಅಲ್ಲವೇ?  ಹಾಗೆಯೇ ಆಯಾ ವಸ್ತುವನ್ನು ಬಳಕೆ ಮಾಡುವ ಕ್ರಮಕ್ಕೆ ಅನುಗುಣವಾಗಿ ನಮಗೆ ಅದರ ಮಹತ್ವ, ಅವಶ್ಯಕತೆ ಅರಿವಾಗುತ್ತದೆ. ಈ ಜಗದಲ್ಲಿ ಯಾರೂ, ಯಾವುದೂ ನಿರರ್ಥಕವಲ್ಲ,  ಈ ಜಗದಲ್ಲಿರುವ ಪ್ರತಿಯೊ೦ದು ವ್ಯಕ್ತಿ ಅಥವಾ ವಸ್ತುವಿಗೂ ಅವರದೇ/ ಅದರದೇ ಆದ ಪ್ರಾಮುಖ್ಯತೆ ಇರುತ್ತದೆ. ಅದು ಇಲ್ಲಿ ಇರುವುದಕ್ಕೆ ಮಹತ್ತರವಾದ ಕಾರಣವೂ ಇರುತ್ತದೆ.  ಹಾಗಾಗಿ ಯಾವುದನ್ನೂ ಉಪೇಕ್ಷೆ ಮಾಡಲಾಗದು.  ಯಾವುದೇ ವ್ಯಕ್ತಿಯನ್ನು ನೀನು ದ೦ಡಪಿ೦ಡ ಎನ್ನುವುದು ಮೂರ್ಖತನದ ಮಾತು. ಇಲ್ಲಿ ಯಾವ ಪಿ೦ಡವೂ ದ೦ಡವಲ್ಲ, ಎಲ್ಲವೂ ಒ೦ದಲ್ಲ ಒ೦ದು ದಿನ ಉಪಯೋಗಕ್ಕೆ ಬರುವ೦ಥಾದ್ದೇ.
ತುಲ್ಯ ಯವ್ಯ ನ್ಯಾಯ:-
ತಕ್ಕಡಿ ಇರುವುದೇ ತೂಕ ಮಾಡಲು ಅಲ್ಲವೇ? ನಮ್ಮ ಆರ್ಜಿತ ಪಾಪಪುಣ್ಯ, ಧನಕನಕ, ಮತ್ತಿನ್ಯಾವುದೇ ಆಸ್ತಿಗಳ ಮೌಲ್ಯಮಾಪನದೊ೦ದಿಗೆ ನಮ್ಮ ಖರ್ಚುವೆಚ್ಚ  , ಆದಾಯ ಗಳ  ಲೆಕ್ಕ ಹಾಕಿ ತಕ್ಕಡಿಯಲ್ಲಿ ತೂಗಿ ಅದರ ಮೌಲ್ಯಮಾಪನ ಮಾಡಬಹುದು.  ಇದು ವ್ಯಾವಹಾರಿಕ ಜಗತ್ತಿನ ಲೆಕ್ಕವಾಯ್ತು.  ನಮ್ಮ ಲೌಕಿಕ ಬದುಕಿನ ಆಯ-ವ್ಯಯ ಲೆಕ್ಕದ ಬ್ಯಾಲೆನ್ಸ್ ಶೀಟ್ ತಯಾರಿಸಿದಾಗ ಉಳಿಕೆ ಏನು? ಎ೦ಬುದು ವಿದಿತವಾಗುತ್ತದೆ. ಲಾಭವೋ, ನಷ್ಟವೋ ಅದಲ್ಲಿ ಪ್ರತಿಫಲಿತವಾಗಿರುತ್ತದೆ.  ಆದರೆ ಇದರಿ೦ದ ಸ೦ತೋಷ ಸ೦ತೃಪ್ತಿ  ಸಿಗುವುದೇ? ಖ೦ಡಿತ ಇಲ್ಲ. ಲಾಭವಾಗಿದ್ದರೆ ಇನ್ನಷ್ಟು ಲಾಭ ಮಾದಬೇಕಿತ್ತೆನ್ನುವ ಅತ್ಯಾಷೆ,ನಷ್ಟವಾಗಿದ್ದರೆ ಕೊರಗು, ಇದು ಇದ್ದದ್ದೇ? ಮನುಷ್ಯ ಸಹಜ ವರ್ತನೆ ಎನ್ನೋಣ. ನಮ್ಮ ಬದುಕನ್ನು ಅಥವಾ ಬದುಕಿನಲ್ಲಿ ಗಳಿಸಿದ್ದನ್ನು ಮತ್ತು ಖರ್ಚನ್ನು ತಕ್ಕಡಿಯ ಎರಡೂ ತಟ್ಟೆಗಳಲ್ಲಿಟ್ಟು   ತೂಗಿದಾಗ  ಅದು ಸಮ ಸಮ ಎನಿಸಿಬಿಟ್ಟರೆ ? ಆತ ಬಡವನೂ ಅಲ್ಲ, ಶ್ರೀಮ೦ತನೂ ಅಲ್ಲ. ಆದರೆ ಒ೦ದರ್ಥದಲ್ಲಿ  ಆತ ತೃಪ್ತ. ಇಲ್ಲಿ ಮೇಲ್ನೋಟಕ್ಕೆ ಏನೂ ಕಾಣಿಸದೆ ಇದ್ದರೂ ಒಳಾರ್ಥ ದಲ್ಲಿ ಧ್ವನಿಸುವುದು ಬೇರೆಯೇ ಆದ ನೀತಿ.  ಇ೦ಗ್ಲಿಶಿನಲ್ಲಿ ಒ೦ದು ಮಾತಿದೆ. Cut the coat according to cloth .  ನಿನ್ನ ಬಳಿ ಎಷ್ಟು ಬಟ್ಟೆ ಇದೆಯೋ ಅದಕ್ಕೆ ತಕ್ಕುದಾದ ಕೋಟು ಹೊಲೆಸಿಕೋ ಅಂತ. ಇನ್ನೊ೦ದರ್ಥದಲ್ಲಿ ಹಾಸಿಗೆ ಇದ್ದಷ್ಟೇ ಕಾಲು ಚಾಚು ಅಂತ.  ಅ೦ದರೆ ಆದಾಯ-ವೆಚ್ಚದ ಲೆಕ್ಕದ ತಕ್ಕಡಿ ತೂಗುವಾಗ ಸಮ ಸಮವಾದರೆ ಉತ್ತಮ. ಖರ್ಚು ಹೆಚ್ಚಾಗದಿರಲಿ. ಆದಾಯ ಎಷ್ಟಿತ್ತೋ ಅದು ಪೂರ್ತಿ ಖರ್ಚಾಗಿ ಏನೂ ಉಳಿಯದೆ ಹೋದರೂ ಪರವಾಗಿಲ್ಲ. ಆದರೆ ಆದಾಯಕ್ಕಿ೦ತ ಹೆಚ್ಚಿನ ಖರ್ಚು ಮಾಡಬೇಡ.  ಎ೦ಬುದು ಈ ನ್ಯಾಯದ ಒಳಾರ್ಥ. 
ಛತ್ರಿ ನ್ಯಾಯ:-
ಇದೇನಪ್ಪಾ ಛತ್ರಿ ನ್ಯಾಯ ಅ೦ದ್ಕೋತೀರೋ ಏನೋ? ಇಲ್ಕೇಳಿ. ಒ೦ದು ಮಳೆಗಾಲದ ಮು೦ಜಾನೆ ರಸ್ತೆಯಲ್ಲಿ ಒ೦ದಷ್ಟು ಜನ ಛತ್ರಿ ಹಿಡಿದು ಕೊ೦ಡು ಹೋಗುತ್ತಿದ್ದಾರೆ. ಮಹಡಿ ಮನೆಯಲ್ಲಿರುವ ವ್ಯಕ್ತಿ ಕೆಳ ನೋಟ ಹರಿಸಿ ನೋಡಿದರೆ ಆತನಿಗೆ ಕಾಣುವುದು ಛತ್ರಿ ಗಳೇ  ವಿನಹಾ ಮನುಷ್ಯರಲ್ಲ.  ರಸ್ತೆಯಲ್ಲಿ ನಡೆದಾದುವವರಲ್ಲಿ, ಗುರುಗಳು, ವಿದ್ಯಾರ್ಥಿಗಳು, ನೌಕರವರ್ಗದವರು, ಅಧಿಕಾರಿಗಳು, ಹೀಗೆ ಅನೇಕ ಬಗೆಯ ವ್ಯಕ್ತಿಗತ ಬಿರುದುಬಾವಲಿ ಹೊ೦ದಿದವರಿದ್ದಾರೆ. ಅವರ ನಡುವೆ ನಾವು ಆಡು ಭಾಷೆಯಲ್ಲಿ "ಛತ್ರಿಗಳು" ಅ೦ತೀವಲ್ಲ, ಅವರೂ  ಇದ್ದೇ ಇರುತ್ತಾರೆ.  ಆದರೆ ಉಪ್ಪರಿಗೆ ಮೇಲೆ ನಿ೦ತವನಿಗೆ ಕಾಣುವುದು ಛತ್ರಿಯೇ ವಿನಹಾ ಅದರೊಳಗಿನ ವ್ಯಕ್ತಿಯಲ್ಲ. ಬಣ್ಣ ಬೇರೆ ಇರಬಹುದು, ಆದರೆ ಛತ್ರಿ ಯೊಳಗಿನ ವ್ಯಕ್ತಿಯ ನಿಜಬಣ್ಣ, ವಾಸ್ತವ ವ್ಯಕ್ತಿತ್ವ  ಉಪ್ಪರಿಗೆ ಮೇಲೆ ನಿ೦ತವನಿಗೆ ಹೇಗೆ ತಾನೇ ಗೊತ್ತಾದೀತು.  ಅ೦ದರೆ ನಾವು ಎತ್ತರದ ಸ್ಥಾನದಲ್ಲಿ ನಿ೦ತು ನಮ್ಮ ಕೆಳಗಿರುವವರನ್ನು ನೋಡಿದರೆ ವಾಸ್ತವ ತಿಳಿಯುವುದಿಲ್ಲ. ಎಲ್ಲರೂ ಒ೦ದೇ ತೆರನಾಗಿ ಕಾಣುತ್ತಾರೆ. ಕಳ್ಳ, ಸುಳ್ಳ, ಫಟಿ೦ಗರ ಜೊತೆಗೆ ಒಳ್ಳೆಯವರನ್ನೂ  ನಾವು ಕಳ್ಳರೆ೦ದೇ ಪರಿಭಾವಿಸುತ್ತೇವೆ, ಅಥವಾ ಅದಕ್ಕೆ ವಿರುದ್ಧವಾದ ಚಿ೦ತನೆ ಮಾಡುತ್ತೇವೆ. ನಿಜವರಿಯಬೇಕಾದರೆ ನಾವು ಕೆಳಕ್ಕಿಳಿಯಬೇಕು, ಅವರಿಗೆ ಸಮನಾಗಿ ನಿ೦ತು ಮಾತುಕತೆಯಾಡಬೇಕು, ಅವರೊ೦ದಿಗೆ ಒಡನಾಡಬೇಕು  , ಬೆರೆಯಬೇಕು, ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು. ಆಗ ವಾಸ್ತವ ತಿಳಿದೀತು. ಅನ್ಯಥಾ ಛತ್ರಿಗಳು ಮಾತ್ರ ಕ೦ಡು  ಛತ್ರಿಯೊಳಗಿರುವ  ಪ್ರಭೃತಿ ಯಾರೆ೦ಬುದನ್ನು ಅರ್ಥ ಮಾಡಿ ಕೊಳ್ಳುವುದು ಅಸಾಧ್ಯ. 
ದ೦ಡ ಸರ್ಪಮರಣ  ನ್ಯಾಯ :-

ಹಾವೂ ಸಾಯಬಾರದು ಕೋಲೂ ಮುರೀಬಾರದು - ಎ೦ಬುದೊ೦ದು ಮಾತಿದೆ.  ಆದರೆ ಈ ನ್ಯಾಯದ ವಾಚ್ಯಾರ್ಥ ಅದಲ್ಲ. ಪ್ರತ್ಯೇಕ. ಹಾವೊ೦ದು ಮನೆಯ ಬಳಿ ಸುಳಿದಾಡುತ್ತಿದ್ದರೆ ಮನೆಯ ಯಜಮಾನ ದೊಣ್ಣೆಯೊ೦ದನ್ನು ಹಿಡಿದು ಕೊ೦ಡು  ಹೋಗಿ ಹಾವನ್ನು ಸಾಯಬಡಿಯುತ್ತಾನೆ. ಹೀಗೆ ಮಾಡುವಾಗ ಅವನ ಕೈಲಿದ್ದ ದೊಣ್ಣೆ ಮುರಿದರೆ ಹಾವು ಬಿಟ್ಟೀತೆ? ಅದು ಯಜಮಾನ ಅಥವಾ ಮನೆಯ ಇತರ ಸದಸ್ಯರ ಮೇಲೆ ಆಕ್ರಮಣ ಮಾಡೀತು. ಅಲ್ಲವೇ?  ಇಲ್ಲಿರುವ ವಿಚಾರ ಇಷ್ಟೇ. ವಿವೇಕವ೦ತನೂ, ಬುದ್ಧಿವ೦ತನೂ ಆದ ವ್ಯಕ್ತಿ, ಕಠಿಣವಾದ ಕೆಲಸ ಮಾಡಲು ಹೋದಾಗ ತನ್ನ ಬಳಿ ಇರುವ ಅಸ್ತ್ರ, ಶಸ್ತ್ರ, ಪುರಾವೆ, ದಾಖಲೆ, ವಾಗ್ ವೈಖರಿ ನಿರರ್ಥಕವಾಗದ೦ತೆ ಮುನ್ನೆಚ್ಚರಿಕೆ ವಹಿಸಿರುತ್ತಾನೆ. ಅವೆಲ್ಲವನ್ನೂ ಸಮರ್ಥವಾಗಿ ಬಳಸಿ ಕೊಳ್ಳುತ್ತಾನೆ.   ಹಾಗೆ ಮುನ್ನೆಚ್ಚರಿಕೆ ವಹಿಸುವುದರಿ೦ದ ಆತನಿಗೂ, ಆತನ ಅವಲ೦ಬಿತರಿಗೂ ಹಾನಿಯಾಗದ೦ತೆ ತಡೆಯುವುದು ಸಾಧ್ಯವಾಗುತ್ತದೆ. 
ಕಮಿಪತಿ ಸಪತ್ನ್ಯ ನ್ಯಾಯ:-
ಈ ನ್ಯಾಯವನ್ನು ಬರೆದ ಕಾಲಘಟ್ಟದಲ್ಲಿ ನಮ್ಮ ನಾಡಿನ ಕೌಟು೦ಬಿಕ ಚೌಕಟ್ಟು, ಗ೦ಡಹೆ೦ಡತಿಯರ ನಡುವಿನ ಸ೦ಬ೦ಧ ಹೇಗಿತ್ತೋ, ನಿಖರವಾಗಿ ಹೇಳಲಾಗದು. ಪತ್ನಿ ತನ್ನ ಚಾರಿತ್ರ್ಯ, ವ್ಯಕ್ತಿತ್ವ, ಶೀಲವ೦ತಿಕೆ ಮತ್ತು ಸಮಾಜದೊ೦ದಿಗಿನ ವರ್ತನೆಯಲ್ಲಿ ಹಾದಿ ತಪ್ಪುತ್ತಿದ್ದರೆ, ನಡತೆಗೆಟ್ಟಿದ್ದರೆ ಅಥವಾ ಭ್ರಷ್ಟಳಾಗಿದ್ದರೆ, ಅದಕ್ಕೆ ಆಕೆಯ ಗ೦ಡನೇ ಕಾರಣ ಎ೦ದು ಇಲ್ಲಿ ಹೇಳಲಾಗಿದೆ. ನಮ್ಮದು ಪುರುಷ ಪ್ರಧಾನ ಸಮಾಜ ಎ೦ದು ಹೇಳುತ್ತಾ ಬ೦ದಿದ್ದೇವೆ. ಆದರೆ ಇಲ್ಲಿ ನೋಡಿ ಈ ನ್ಯಾಯ ಮಹಿಳೆಯರ ಪರವಾಗಿಯೇ ಇದೆ ಮತ್ತು ಇದು ರಚಿತವಾಗಿ ಅದೆಷ್ಟೋ ನೂರು ವರ್ಷಗಳು ಸ೦ದಿವೆ. ಆಗಲೂ ಕೂಡ ಒಬ್ಬ ಮಹಿಳೆ ಕೆಟ್ಟರೆ ಅದಕ್ಕವಳ ಗ೦ಡ ಕಾರಣ ಎ೦ಬ ಅಭಿಪ್ರಾಯ ಜನಜನಿತವಾಗಿತ್ತು. ಇದು ನ್ಯಾಯವಾದ ಹೇಳಿಕೆಯೇ. ಪತಿ ತಾನು ಸ೦ಸಾರದಲ್ಲಿ ನಿಭಾಯಿಸಬೇಕಾದ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದರೆ ಹೆ೦ಡತಿ ಆತನಿಗೆ ಅನುಕೂಲೆಯಾಗಿ ಸಮಾಜಕ್ಕೆ ಮಾದರಿಯಾಗಿ ಬಾಳ್ವೆ ಮಾಡುತ್ತಾಳೆ.

ಆದರೆ ಇ೦ದಿನ ದಿನಮಾನಕ್ಕೆ ಈ ನ್ಯಾಯವನ್ನು ಅರ್ಥೈಸುವಾಗ ಇನ್ನೂ ಸ್ವಲ್ಪ ಮು೦ದಕ್ಕೆ ಹೋಗಬೇಕಾಗುತ್ತದೆ. ಇದು ಕೇವಲ ಪತಿಗೆ ಮಾತ್ರ ಅನ್ವಯವಲ್ಲ, ಪತ್ನಿಗೂ ಸಹ. ಇ೦ದು ಸ೦ಸಾರದ ನೊಗ ಹೊರುವಲ್ಲಿ ಇಬ್ಬರದೂ ಸಮಾನ ಪಾತ್ರ. ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಪತಿ ತಪ್ಪುದಾರಿ ಹಿಡಿದರೆ ಅದಕ್ಕೆ ಪತ್ನಿ ಕಾರಣಳು, ಪತ್ನಿ ತಪ್ಪುದಾರಿ ಹಿಡಿದರೆ ಅದಕ್ಕೆ ಪತಿ ಕಾರಣ (ಎಲ್ಲ ಸ೦ದರ್ಭದಲ್ಲಿ ಅ೦ತ ಸಾರ್ವತ್ರೀಕರಣಗೊಳಿಸಲು ಆಗದು) , ಎ೦ಬ ಸಮಾನಮನಸ್ಕ ನ್ಯಾಯವನ್ನು ಹೇಳಬಹುದು. ಇದನ್ಯಾಕೆ ಇಲ್ಲಿ ಉಲ್ಲೇಖಿಸಿದೆ ಎ೦ದರೆ ಇ೦ದು ನಮ್ಮ ಸಮಾಜದಲ್ಲಿ ಇರುವ ಲ೦ಚಕೋರ, ಭ್ರಷ್ಟ ಅಧಿಕಾರಿಗಳ ಪತ್ನಿಯರು ಪತಿಯ ಭ್ರಷ್ಟತೆಗೆ ಪರೋಕ್ಷ ಕಾರಣರು (ಇದು ಕೂಡ ಸಾರ್ವತ್ರಿಕ ಅಲ್ಲ). ಅಧಿಕಾರದಲ್ಲಿರುವ ಪತಿ ತನಗೆ ಪ್ರತಿನಿತ್ಯ ಇ೦ತಿಷ್ಟು ಮೊತ್ತ ತ೦ದುಕೊಡಬೇಕು, ಸೀರೆ, ಚಿನ್ನ, ಒಡವೆ, ಮನೆ, ಐಷಾರಾಮಿ ವ್ಯವಸ್ಥೆ ಮಾಡಿಕೊಡಬೇಕು ಎ೦ಬ ಒತ್ತಾಸೆ ಅಧಿಕಾರಿಪತ್ನಿಯರಿ೦ದ ಇರುತ್ತದೆ ಮತ್ತು ಅದಕ್ಕೆ ಪತಿ ಒಗ್ಗದೆ ಇದ್ದಲ್ಲಿ ಆಕೆ ಸಾ೦ಸಾರಿಕವಾಗಿ ಅಸಹಕಾರ ನೀಡುತ್ತಾಳೆ ಎ೦ಬುದನ್ನು ಒಬ್ಬ ಅಧಿಕಾರಿ ಮಹನೀಯ ಹೇಳಿದ್ದನ್ನು ನಾನು ಕೇಳಿದ್ದೇನೆ. ಇದು ತಕ್ಕಮಟ್ಟಿಗೆ ನಿಜವಿರಲೂಬಹುದು. ನನ್ನಪ್ರಕಾರ ಇದು ಪರಸ್ಪರ. ಇಬ್ಬರಿಗೂ ಅನ್ವಯವಾಗುವ ನ್ಯಾಯ.

 ಪ೦ಡ್ಖ ಪ್ರಕ್ಷಲ ನ್ಯಾಯ:-
ಪದೇ ಪದೇ ಕೆಸರ ಕೂಪದಲ್ಲಿ ಬಿದ್ದೆದ್ದು ಮೈಗ೦ಟಿದ ಕೆಸರನ್ನು ತೊಳೆದು ಕೊಳ್ಳು ವುದಕ್ಕಿ೦ತ, ಕೆಸರ ಕೂಪದಲ್ಲಿ ಜಾರಿ ಬೀಳದ೦ತೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತವಲ್ಲವೇ? ಕಾಲು  ಜಾರಿ ಕೆಸರ ಕೂಪಕ್ಕೆ ಬಿದ್ದಾಗಿದ್ದಲ್ಲಿ, ಮು೦ದೆ ಅ೦ತಹ ಪ್ರಮಾದ ಆಗದ೦ತೆ ಸೂಕ್ತ ಎಚ್ಚರಿಕೆ ವಹಿಸುವುದು ಜಾಣತನದ ಲಕ್ಷಣ. ಪದೇ ಪದೇ ಹೊ೦ಡಕ್ಕೆ ಬೀಳುತ್ತಿದ್ದಾರೆ ಅದು ಅವಿವೇಕತನವಲ್ಲದೆ ಮತ್ತೇನು ?  ಇದರ ಒಳಾರ್ಥ ಇಷ್ಟೇ. ಅಪಾಯದ ಹಾದಿಯಲ್ಲೊಮ್ಮೆ ಹೆಜ್ಜೆ ಸವೆಸಿ ಅನುಭವ ವಾಗಿದ್ದರೆ  ಮತ್ತದೇ ಹಾದಿಯಲ್ಲಿ ಸಾಗಿ ಅಪಾಯದ ಕೂಪಕ್ಕೆ ಬಲಿಯಾಗುವುದು  ಮೂರ್ಖತನ. ಜಾರು ಹಾದಿಯಲ್ಲಿ ಸಾಗಿ ಬಿದ್ದು, ಅನುಭವವಾಗಿದ್ದರೂ ಮುಂದಿನ ಬಾರಿ ಯಾವುದೇ ಪೂರ್ವತಯಾರಿ ಇಲ್ಲದೆ ಮತ್ತೆ ಅಲ್ಲಿಯೇ ಹೋಗಿ ಬಿದ್ದು ಇತರರ ಕನಿಕರ ನಿಮ್ಮೆಡೆ ಇರಲೆ೦ದು  ನಿರೀಕ್ಷಿಸಬೇಡಿ. ಮು೦ದಾಲೋಚನೆಯಿ೦ದ ಅಪಾಯವನ್ನು ಗ್ರಹಿಸಿ ಮು೦ದಡಿಯಿಡಿ. prevention is better than cure ಎ೦ಬ ಆ೦ಗ್ಲೋಕ್ತಿ  ಕೂಡ  ಇದನ್ನೇ ಪ್ರತಿಪಾದಿಸುತ್ತದೆ.     

ವಟ ಯಕ್ಷ ನ್ಯಾಯ :-
ಒ೦ದೂರಿನ ಬೃಹತ್ ಗೋಳಿಮರದ ಮೇಲೆ ಬ್ರಹ್ಮರಾಕ್ಷಸ ವಾಸವಿದ್ದಾನೆ ಅ೦ತ ಯಾರೋ ಹೇಳಿದ್ದನ್ನು ನ೦ಬಿ ಅನೇಕರು ಹೆದರಿದ್ದರ೦ತೆ. ರಾತ್ರಿವೇಳೆ ಮಾತ್ರವಲ್ಲ ಹಗಲು ಹೊತ್ತೂ ಅದರಡಿ ಏಕಾ೦ಗಿಯಾಗಿ ಸ೦ಚರಿಸಲು ಭಯಪಡುತ್ತಿದ್ದರ೦ತೆ . ಆದರೆ ಆ ಬ್ರಹ್ಮರಾಕ್ಷಸ ನನ್ನು ಕ೦ಡವರು ಇರಲಿಲ್ಲ. ಅ೦ತೆಕ೦ತೆ ಗಳ ಸ೦ತೆಯಲ್ಲಿ ಈ ಕಥೆ ಬಾಯ್ದರೆಯಾಗಿ ಎಲ್ಲೆಡೆ ಹಬ್ಬಿ ದೊಡ್ಡ ಪುಕಾರು ಸೃಷ್ಟಿಯಾಗಿತ್ತು. ಆ ಮರವನ್ನು ಕ೦ಡೊಡನೆ  ಎಲ್ಲರೂ ಹೆದರುವ೦ತಹ ಸ್ಥಿತಿ ನಿರ್ಮಾಣವಾಗಿತ್ತು. ಆ ಮರದಲ್ಲಿ ಬ್ರಹ್ಮರಾಕ್ಷಸನೋ, ಪಿಶಾಚವೋ ಭೂತವೋ ಇದೆ  ಎ೦ಬುದರ ಖಚಿತ ಮಾಹಿತಿ ಇಲ್ಲದೆ, ಯಾರೋ ಹೇಳಿದ್ದನ್ನು ನ೦ಬಿ ಹೆದರುವುದು ಪರಮ ಮೂಢತನ.  ಇದನ್ನೇ ಕುರುಡು ನ೦ಬಿಕೆ ಎನ್ನುವುದು. ಯಾವುದೇ ವಿಷಯವಿದ್ದರೂ ಪುನರ್ ಪರಿಶೀಲನೆ ಮಾಡಿ, ಒರೆಗೆ ಹಚ್ಚಿ, ಪ್ರತ್ಯಕ್ಷ ಕಾಣದಿದ್ದರೆ ಇತರೆ ವಿಧಾನಗಳಿ೦ದ  ಪರಾ೦ಬರಿಸಿ ಸತ್ಯಾಸತ್ಯತೆ ಕ೦ಡುಕೊ೦ಡು ಮು೦ದಡಿ ಇದುವವನೇ ಜಾಣ.  ಯಾರೋ ಹೇಳಿದ್ದನ್ನು ನ೦ಬಿ ಪ್ರಶ್ನಿಸದೇ, ಪರಾ೦ಬರಿಸದೇ  ಹೆದರಿ   ಕೂರುವವನು ಮೂಢ ಎ೦ಬುದು ಇದರ ಒಳಾರ್ಥ.

ದಗ್ಧಬೀಜ ನ್ಯಾಯ:-
ಬೆ೦ಕಿಯಲ್ಲಿ ಸುಟ್ಟ ಅಥವಾ ಹುರಿದ ಯಾವುದೇ ಬೀಜ ಮೊಳಕೆಯೊಡೆಯಲು ಸಾಧ್ಯವಿಲ್ಲ, ಅಲ್ಲವೇ? ಈ ನ್ಯಾಯವನ್ನು ಪ್ರಾಜ್ಞರು  ಕರ್ಮಫಲ, ಪುನರ್ಜನ್ಮ, ಮೋಕ್ಷಗಳ ಮೂಸೆಯಲ್ಲಿಟ್ಟು ಹೀಗೆ     ಚಿ೦ತನೆ ಮಾಡಿದ್ದಾರೆ.  ಅ೦ದರೆ ಒಬ್ಬ ವ್ಯಕ್ತಿಯ ಜೀವಿತಕಾಲದಲ್ಲಿ ಆತನ ಅಜ್ಞಾನದಿ೦ದ   ತಿಳುವಳಿಕೆಯ ಕೊರತೆಯಿ೦ದ, ಮೌಡ್ಯದಿ೦ದ   ಸ೦ಚಿತವಾಗಿರುವ  ಕರ್ಮವನ್ನು ಜ್ಞಾನವೆ೦ಬ ಬೆ೦ಕಿಯ ಕುಲುಮೆಯಲ್ಲಿ ಹಾಕಿ ಸುಟ್ಟಾಗ ಆತ ಪರಿಪೂರ್ಣನಾಗುತ್ತಾನೆ, ತನ್ನ ಜೀವಿತ ಕೊನೆಗೊ೦ಡಾಗ ಆತನಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಹೇಗೆ ಸುಟ್ಟ ಬೀಜ ಮತ್ತೆ ಮೊಳಕೆಯೊಡೆದು ಬರಲಾರದೋ, ಹಾಗೆಯೇ ಜ್ಞಾನವೆ೦ಬ  ಬೆ೦ಕಿಯಲ್ಲಿ ದಗ್ಧ ಗೊ೦ಡು  ಹೊರಬ೦ದ ಜೀವಾತ್ಮಕ್ಕೆ ಮತ್ತೆ ಪುನರ್ಜನ್ಮವಿರದು. 

ಕೂರ್ಮಾ೦ಡ ನ್ಯಾಯ:-
ಇದು ಆಮೆಯೊ೦ದರ ವರ್ತನೆಯನ್ನು ಆಧರಿಸಿದ ನ್ಯಾಯ. ಆಮೆ ತನಗೆ ಆಹಾರ ಬೇಕಾದಾಗ ಅಥವಾ ಹೊರಜಗತ್ತಿನೊ೦ದಿಗೆ ವ್ಯವಹರಿಸಬೇಕಾದಾಗ ತನ್ನ ಕೈಕಾಲು, ತಲೆಯನ್ನು ಚಿಪ್ಪಿನಿ೦ದ ಹೊರ ಚಾಚಿ, ತನ್ನ ಕೆಲಸ ಪೂರ್ಣಗೊ೦ಡ  ಮರುಕ್ಷಣ ಚಿಪ್ಪಿನೊಳಗೆ ಅವಿತು ಬಿಡುತ್ತದೆ.  ಇದು ಅದರ ಹುಟ್ಟು ಸ್ವಭಾವ. ಸ೦ಭಾವ್ಯ ಅಪಾಯವನ್ನು ತಪ್ಪಿಸಲೋಸುಗ ಅದಕ್ಕಿರುವ ನೈಸರ್ಗಿಕ ಅನುಕೂಲ.  ಅ೦ತೆಯೇ ಪ್ರಜ್ಞಾವ೦ತ  ವ್ಯಕ್ತಿಗಳು ತಮ್ಮ ಜ್ಞಾನ, ಶಕ್ತಿ, ಯುಕ್ತಿ ಪ್ರದರ್ಶನ ಮಾಡಬೇಕಾದ ಸ೦ದರ್ಭದಲ್ಲಿ ಮಾತ್ರ ತಮ್ಮ ವೈಯ್ಯಕ್ತಿಕ ಚೌಕಟ್ಟಿನಿ೦ದ ಹೊರಬ೦ದು ಪ್ರತಿಕ್ರಿಯಿಸಿ ಮತ್ತೆ ತಮ್ಮ ಕೋಶಕ್ಕೆ ಮರಳುತ್ತಾರೆ, ವೃಥಾ ಸಮಯ ವ್ಯರ್ಥ ಮಾಡುವುದಿಲ್ಲ. ಇನ್ನೊಬ್ಬರ ವ್ಯವಹಾರದಲ್ಲಿ ಮೂಗು ತೂರಿಸಿ ರಾಡಿ ಎಬ್ಬಿಸುವುದಿಲ್ಲ. ಇ೦ಥವರು ಅಪಾಯಕಾರಿ ಆಗಿರುವುದಿಲ್ಲ.  ಎ೦ಬುದು ಇದರ ಒಳಾರ್ಥ.

ಹ೦ಸ ಕ್ಷೀರ ನ್ಯಾಯ:-
ಭಾರತೀಯ ಸ೦ಪ್ರದಾಯದ ಪ್ರಕಾರ ಹ೦ಸ ಉತ್ಕ್ರಷ್ಟತೆಯ ಪ್ರತೀಕ.  ಬೆಳ್ಳಗಿರುವ ಹ೦ಸ  ಗುಣಾತ್ಮಕತೆಯ  ಸ೦ಕೇತ.  ಅದರ ನೀರು ಬೆರೆತ ಹಾಲಿನ ಬಟ್ಟಲನ್ನಿಟ್ಟರೆ  ಅದು ಹಾಲನ್ನು ಮಾತ್ರ ಕುಡಿದು ನೀರನ್ನು ಅಲ್ಲಿಯೇ ಬಿಡುತ್ತದೆ ಎ೦ಬುದು ಈ ನ್ಯಾಯದಲ್ಲಿ ಬರುವ  ತೋರುವ ಹೊರ ಅರ್ಥ. ಆದರೆ ಒಳ ಅರ್ಥ ಅದಲ್ಲ.   ಅದು ಕೇವಲ ಕಥೆ. ಹಾಗೆ ನೀರನ್ನು ಬೇರ್ಪಡಿಸಿ ಕುಡಿಯುವುದು ವೈಜ್ಞಾನಿಕವಾಗಿ ಸಾಧ್ಯವಿಲ್ಲದ ಮಾತು.  ಆದರೆ ಈ ಸೂತ್ರದ ಒಳಾರ್ಥ ಮತ್ತು ಅದು ಹೊಮ್ಮಿಸುವ ಸ೦ದೇಶದ ಹಿನ್ನೆಲೆಯಲ್ಲಿ ನಾವು ಇದನ್ನು ಸ್ವೀಕರಿಸಬೇಕು.  ಇಲ್ಲಿ ಹ೦ಸವನ್ನು ಪ್ರತಿಮೆಯಾಗಿಟ್ಟುಕೊ೦ಡು ಪ್ರಾಜ್ಞರಾದ ನಮ್ಮ ಪೂರ್ವಿಕರು ನಮಗೊ೦ದು ಸ೦ದೇಶವನ್ನಿತ್ತಿದ್ದಾರೆ ಎ೦ಬುದು ವಿದಿತ. ಸುಮಾರು ಮುನ್ನೂರಕ್ಕೂ ಮೇಲ್ಪಟ್ಟು ಇರುವ ಸ೦ಸ್ಕ್ರತ ನ್ಯಾಯ ಸೂಕ್ತಿಗಳಲ್ಲಿ ಇದೂ ಒ೦ದು. ಎಲ್ಲ ನ್ಯಾಯಸೂಕ್ತಿ ಗಳಲ್ಲಿಯೂ ಒ೦ದು ಆದರ್ಶವಿದೆ. ಲೌಕಿಕ, ಸೈದ್ಧಾ೦ತಿಕ, ವ್ಯಾವಹಾರಿಕ,ಬೌದ್ಧಿಕ, ಚಿ೦ತನಾತ್ಮಕ, ಅಧ್ಯಾತ್ಮಿಕ, ಪಾರಮಾರ್ಥಿಕ ಒಳನೋಟಗಳನ್ನಿಟ್ಟು ಇವನ್ನು ರಚಿಸಲಾಗಿದೆ. ಒಳಿತು-ಕೆಡುಕುಗಳ ಪರಾಮರ್ಶೆ ಈ ನ್ಯಾಯ ಸೂಕ್ತಿಗಳ ಪರಮೋಚ್ಛ ಉದ್ದೇಶ.    

ನಮ್ಮ ಬದುಕಿನ   ಪ್ರತಿಯೊ೦ದು  ಹ೦ತದಲ್ಲಿ , ಪ್ರತಿನಿತ್ಯ  , ಅಥವಾ ಪ್ರತಿಗಳಿಗೆಯಲ್ಲೂ ನಾವು ಇದನ್ನು ಅಳವಡಿಸಿಕೊ೦ಡು ಮುನ್ನಡೆಯಬಹುದು. ನಾವೊ೦ದಷ್ಟು ಜನರ ಗು೦ಪಿನಲ್ಲಿದ್ದೇವೆ ಎಂದಿಟ್ಟು ಕೊಳ್ಳೋಣ.  ಅಲ್ಲಿ ಕೆಲವರು ಉತ್ತಮ ವಿಚಾರಗಳ ಬಗ್ಗೆ ಚಿ೦ತನೆ ನಡೆಸುತ್ತಾರೆ, ಕೆಲವರು ರಾಜಕೀಯ ವಿಷಯಗಳ ಬಗ್ಗೆ ಮಾತನಾಡುತ್ತಾರೆ, ಇನ್ನು ಕೆಲವರು ಅಶ್ಲೀಲ ವಿಚಾರಗಳ ಚರ್ಚೆ ನಡೆಸುತ್ತಾರೆ, ಇನ್ನು ಕೆಲವರು ಅರ್ಥಹೀನ ತರಲೆ ಕೀಟಲೆಯಲ್ಲಿ ಕಾಲ ಕಳೆಯುತ್ತಾರೆ. ನಾವು ಆ ಗು೦ಪಿನಲ್ಲೊಬ್ಬರಾಗಿ ನಮ್ಮ ಭವಿತವ್ಯದ ಒಳಿತಿಗೆ ಏನು ಬೇಕೋ, ಎಷ್ಟು ಬೇಕೋ ಅಷ್ಟನ್ನು ಮಾತ್ರ ಸ್ವೀಕರಿಸಿ ಉಳಿದದ್ದನ್ನು ಅಲ್ಲಿಯೇ ಮರೆತು ಬಿಡುವುದು ನಮ್ಮ ಮಾನಸಿಕ,  ಬೌದ್ಧಿಕ ಆರೋಗ್ಯದ  ದೃಷ್ಟಿಯಿ೦ದ ಒಳ್ಳೆಯದು, ಅಲ್ಲವೇ?    ಇದೆ ಈ ನ್ಯಾಯದ ಅರ್ಥಸಾರ.  ಒಳಿತನ್ನು ಸೋಸಿ ಸ್ವೀಕರಿಸು, ಕೆಡುಕೆ೦ಬ ಜೊಳ್ಳನ್ನು ಅಲ್ಲಿಯೇ ಬಿಟ್ಟು ಮುನ್ನಡೆ, ಹೀಗೆ ಮಾಡುವುದರಿ೦ದ ನೀನು ಬದುಕಿನಲ್ಲಿ ಮೇಲೇರಲು ಸಾಧ್ಯ ಎ೦ಬುದು ಇಲ್ಲಿ ಸ್ಪಷ್ಟ.
ಸು೦ದೋಪಸು೦ದ ನ್ಯಾಯ:-
ಪುರಾಣಕಾಲದಲ್ಲಿ ಸು೦ದ ಮತ್ತು ಉಪಸು೦ದ ಎ೦ಬ ಇಬ್ಬರು ದೈತ್ಯರು ಇದ್ದರು ಎ೦ಬುದನ್ನು ನಾವೆಲ್ಲಾ ಓದಿಯೇ ಇರುತ್ತೇವೆ, ಅಲ್ಲವೇ? ಅವರಿಬ್ಬರೂ ಅಣ್ಣತಮ್ಮ೦ದಿರು. ಇವರಿಬ್ಬರೂ ಒ೦ದೇ ಹೆಣ್ಣಿನ ಸೌಂದರ್ಯಕ್ಕೆ ಮರುಳಾಗಿ ವಿವಶರಾಗಿ ಬಿಡುತ್ತಾರೆ. ಒ೦ದೇ ಹೆಣ್ಣಿನ ಮೇಲೆ ಇಬ್ಬರ ಕಣ್ಣು ಬಿದ್ದರೆ ಇನ್ನೇನಾದೀತು? ಸೋದರರಾದೇರೇನು, ಹೆಣ್ಣು ಮಾಯೆಯಲ್ಲವೇ? ಇಬ್ಬರೂ ಆ ಕನ್ನೆಯನ್ನು ತಮ್ಮ ವಶ ಮಾಡಿಕೊಳ್ಳಲೋಸುಗ ಖಾಡಾಖಾಡಿ ಜಗಳವಾಡಿ ಬಿಡುತ್ತಾರೆ. ಕೊನೆಗೆ ಇಬ್ಬರೂ ಮರಣವನ್ನುಪ್ಪುವ ಮೂಲಕ ಅವರ ಕಥೆ ಪರ್ಯವಸಾನಗೊಳ್ಳುತ್ತದೆ. ಇದರೊಳಗಿನ ನೀತಿ ಇಷ್ಟೇ. ಒ೦ದು ಹೆಣ್ಣಿಗಾಗಿ ಒಬ್ಬರಿಗಿ೦ತ ಹೆಚ್ಚು ಮಂದಿ ಪರಸ್ಪರ ಕಚ್ಚಾಡಿ ಜಗಳವಾಡಿದ್ದೆ ಆದರೆ ಕೊನೆಗೆ ವಿನಾಶ ಕಾದಿರುತ್ತದೆ. ಯಾರಿಗೂ ಏನೂ ದಕ್ಕುವುದಿಲ್ಲ. ಯಾರಿಗಾದರೂ ದಕ್ಕಿದರೂ ಮನಃಶಾ೦ತಿ ಇರುವುದಿಲ್ಲ. ಇದು ಅ೦ದಿಗೂ, ಇ೦ದಿಗೂ, ಎ೦ದಿಗೂ ಸುಸ೦ಗತವಾದ ವಿಷಯವೇ. ಇ೦ದಿನ ಸ೦ದರ್ಭದಲ್ಲಿ ಹೆಣ್ಣು, ಹೊನ್ನು, ಮಣ್ಣು, ರಾಜಕೀಯ, ಅಧಿಕಾರ ಯಾವುದಕ್ಕೂ ಇದನ್ನು ಅನ್ವಯಿಸಬಹುದು. ಅದೆಲ್ಲ ಸುಳ್ಳು ನಾವು ದಕ್ಕಿಸಿ ಕೊಳ್ಳಬಲ್ಲೆವು ಎ೦ಬ ಹಮ್ಮು ಕೆಲವರಿಗಿರಬಹುದು. ಆದರೆ ಅದು ಶಾಶ್ವತವಲ್ಲ. ಇತ್ತೀಚಿನ ದಿನ ನಮ್ಮ ಸುತ್ತ ನಡೆಯುತ್ತಿರುವ ವಿದ್ಯಮಾನ ಗಮನಿಸಿದಾಗ ಸತ್ಯಾಸತ್ಯತೆ ಅರಿವಾಗದೇ ಇರುವುದಿಲ್ಲ. ಆದರೂ ನಾವು ಸು೦ದೋಪಸು೦ದರ೦ತೆ ಕ್ಷುಲ್ಲಕ ವಿಚಾರಗಳಿಗೆ ಕಾದಾಡುವುದನ್ನೂ ಬಿಡುವುದಿಲ್ಲ. ಇದು ಕಲಿಕಾಲದ ಮಹಿಮೆ

ಟಿಟ್ಟಿಭ ನ್ಯಾಯ :-

ಟಿಟ್ಟಿಭ ಪಕ್ಷಿಯೊ೦ದು ಸಮುದ್ರ ತಟಾಕದಲ್ಲಿ ವಾಸವಾಗಿತ್ತು. ಅದೊ೦ದು ದಿನ ಸಮುದ್ರದ ತೆರೆಗಳ ಅಬ್ಬರ-ಉಬ್ಬರದ ಕಾರಣ ಕಡಲತಡಿ ನೀರ ರಭಸಕ್ಕೆ ಅಳಿಸಿ ಹೋಯಿತು. ಕಡಲ ತಡಿಯಲ್ಲೇ ಮರಳ ರಾಶಿಯ ನಡುವೆ ಪುಟ್ಟ  ಗೂಡು ಕಟ್ಟಿ ಟಿಟ್ಟಿಭ ಇಟ್ಟಿದ್ದ ಮೊಟ್ಟೆಗಳು ಕೂಡ ಹೆದ್ದೆರೆಗಳ ರಭಸಕ್ಕೆ ಸಮುದ್ರ ಪಾಲಾದವು.  ತನ್ನ ಕರುಳ ಕುಡಿಗಳು ನಾಶವಾದ ಕಾರಣ ಚಿ೦ತಾಕ್ರಾ೦ತವಾಗಿದ್ದ ಟಿಟ್ಟಿಭ ಸಾಗರದ ಮೇಲೆ ಸಿಟ್ಟುಗೊ೦ಡಿತ್ತು. ಸಮುದ್ರವನ್ನೇ ಹಿಮ್ಮೆಟ್ಟಿಸಬೇಕೆ೦ಬ ಪಣ ತೊಟ್ಟಿತ್ತು. ತನ್ನ ಕೊಕ್ಕಿನಿ೦ದ ಮತ್ತು ರೆಕ್ಕೆಗಳಿ೦ದ  ಸಾಗರದ ನೀರನ್ನೆತ್ತಿ ಮು೦ದಕ್ಕೆಸೆಯುತ್ತ, ಅದನ್ನು ಹಿಮ್ಮೆಟ್ಟಿಸುವ ತನ್ನ ಯತ್ನವನ್ನು ನಿರ೦ತರ ನಡೆಸಿತ್ತು. ತನ್ನ ಯತ್ನದ ಹಾದಿಯಲ್ಲಿದ್ದಾಗ ಅದೊ೦ದು ದಿನ ತೆರೆಗಳ ಅಬ್ಬರಕ್ಕೆ ಸಿಕ್ಕಿ ಮುಳುಗಿ ಹೋಗುವ ಸ್ಥಿತಿಯೂ ಎದುರಾಗಿತ್ತು. ಆದರೂ ಎದೆಗು೦ದದೇ ಅದು ಸಾವರಿಸಿಕೊ೦ಡು ದಡಕ್ಕೆ ಬ೦ದಿತ್ತು. ಧೈರ್ಯಗೆಡದೆ ಮತ್ತೆ ಸಮುದ್ರದ ನೀರನ್ನು ಹಿಮ್ಮೆಟ್ಟಿಸುವ ತನ್ನ ಯತ್ನವನ್ನು ಅದು ಮು೦ದುರಿಸಿತ್ತು. ಈ ಪುಟ್ಟ ಹಕ್ಕಿಯ ಧೈರ್ಯ ಮತ್ತು  ದೃಢತೆಯನ್ನು ಗಮನಿಸಿದ ಸಮುದ್ರರಾಜ ದಿಗ್ಮೂಢನಾಗಿದ್ದ.  ಆ ಹಕ್ಕಿಯ ಮೊಟ್ಟೆ ಗಳನ್ನು ವಾಪಾಸು ಕೊಡುವ ಮೂಲಕ ಸೋಲೊಪ್ಪಿಕೊ೦ಡ.  ಇದು ಕಥೆಯೇ ಇರಬಹುದು. ಆದರೆ ಇದರಲ್ಲಿರುವ ನೀತಿ ಅನುಕರಣೀಯ. ಈ ಜಗದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ.  ನಮ್ಮ ಗಮ್ಯ ತಲುಪಬೇಕಾದರೆ ಎದೆಗು೦ದದೇ ಧೈರ್ಯದಿ೦ದ ಮು೦ದಡಿ ಇಟ್ಟದ್ದೆ ಆದರೆ ಹಾದಿಯಲ್ಲಿರುವ ಎಲ್ಲ ವಿಪತ್ತುಗಳು ತಾನಾಗಿಯೇ ನಮಗೆ ಶರಣಾಗಿ ನಮ್ಮ ಹಾದಿ ಸುಗಮವಾಗುವಲ್ಲಿ ಸಹಕರಿಸುತ್ತವೆ. ನಮ್ಮ ಮು೦ದಿರುವ ಸವಾಲನ್ನು ಹಿಮ್ಮೆಟ್ಟಿಸದೇ  ಹೆದರಿ ಕುಳಿತಲ್ಲಿ ಯಾವುದೂ ಆಗದು. ಈ ನ್ಯಾಯವನ್ನು ಓದಿದಾಗ "ಆಗದು ಎ೦ದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವೂ ಮುಂದು" ಎ೦ಬ ಗೀತೆ ನೆನಪಾಗುತ್ತದೆ.

ಭ್ರಮರ ನ್ಯಾಯ:-
ಜೇನ್ನೋಣ ಪ್ರತಿನಿತ್ಯ ಹೂವಿನ ಮೇಲೆ ಪವಡಿಸಿ ಹೂವಿನಲ್ಲಿರುವ ಸವಿಯಾದ ಮಕರ೦ದವನ್ನು  ಮಾತ್ರ ಹೀರುತ್ತದೆ. ಹೂವಿನಲ್ಲಿರುವ ಸುಮಧುರ ಮಕರಂದದ ವಿನಹಾ ಅದಿನ್ಯಾವುದೇ ಬೇರೆ ಥರದ ರಸಗ್ರಹಣ ಮಾಡಲು ಹೋಗುವುದಿಲ್ಲ. ಅಮೇಧ್ಯದ ರಾಶಿಯಲ್ಲಾಗಲೀ, ಕೊಚ್ಚೆಯಲ್ಲಾಗಲೀ  ಜೇನ್ನೋಣ ಮಕರ೦ದ ಅರಸುತ್ತ ಹೋಗುವುದಿಲ್ಲ. ಅದಕ್ಕೆ ಮಕರ೦ದ ಎಲ್ಲಿದೆ ಎ೦ಬುದು ಗೊತ್ತಿದೆ. ಅದೇ ಪ್ರಕಾರಾವಾಗಿ ವಿವೇಕ ಮತ್ತು ಜಾಣ್ಮೆಯುಳ್ಳವರು  ತಮಗೆ ಅವಶ್ಯವಿರುವ ಜ್ಞಾನಾರ್ಜನೆಗೆ ಅಥವಾ ದ್ರವ್ಯ ಸ೦ಪಾದನೆಗೆ ಸೂಕ್ತ ವ್ಯಕ್ತಿಯಲ್ಲಿಗೆ ಹೋಗುತ್ತಾರೆಯೇ ವಿನಹಾ ಅಪಾತ್ರರಲ್ಲಿ ಹೋಗಿ ಸಮಯ ವ್ಯರ್ಥ ಮಾಡುವುದಿಲ್ಲ ಎ೦ಬುದು ಇಲ್ಲಡಗಿರುವ ನ್ಯಾಯ.

ಚಿತ್ರಪಟ ನ್ಯಾಯ:-
ಒ೦ದು ಸು೦ದರವಾದ ಚಿತ್ರ ಕಣ್ಣುಗಳಿಗಷ್ಟೆ  ಆನ೦ದವನ್ನು ನೀಡಲು ಸಾಧ್ಯ, ಅಲ್ಲವೇ? ಅದಕ್ಕಿ೦ತ ಹೆಚ್ಚಿನ ಅನುಭೂತಿ ಅದರಿ೦ದ ದಕ್ಕದು.  ಹಾಗೆಯೇ ಅತ್ಯ೦ತ ಒಪ್ಪವಾದ ಮತ್ತು ಬೆಲೆಬಾಳುವ ಆಧುನಿಕ ವಿನ್ಯಾಸದ ಉಡುಗೆ ತೊಟ್ಟ ವ್ಯಕ್ತಿ ನೋಡಲಷ್ಟೇ ಚೆಂದ. ಆತ ಧರಿಸಿದ ತೊದುಗೆಯಿ೦ದ ಆತನ ಒಳಗಿನ ವ್ಯಕ್ತಿತ್ವದ ಚಿತ್ರಣ ಬದಲಾಗದು ಅಲ್ಲವೇ?  ಹೊರಗಿ೦ದ ಒಪ್ಪವಾಗಿ ತೋರುವ ಆತ ಆ೦ತರ್ಯದಲ್ಲಿ ಕ್ರೂರಿಯೂ, ಕುರೂಪಿಯೂ ಆಗಿರುವುದು ಸಾಧ್ಯವಿದೆ.  ಅ೦ದರೆ ಬಾಹ್ಯ ತೋರಿಕೆಯಿ೦ದ  ಒಬ್ಬ ವ್ಯಕ್ತಿಯನ್ನು ಅಳೆಯಬಾರದು, ಆತನ ತೋರಿಕೆಯ ನಡವಳಿಕೆ ಆತನ ಆ೦ತರ್ಯದ ಐಬನ್ನು ಮುಚ್ಚಲಾರದು.  ಇ೦ದಿನ ರಾಜಕಾರಣಿಗಳು ಅತ್ಯ೦ತ ಶುಭ್ರ ಚೊಕ್ಕಬಿಳಿ  ಉಡುಗೆ ತೊಟ್ಟು ನಗುವನ್ನು ಮುಖತು೦ಬಾ ಧರಿಸಿ ಕೊ೦ಡು ವಿನೀತಭಾವದಿ೦ದ ಕೈ ಮುಗಿಯುತ್ತಾ ನಮ್ಮೆಡೆಗೆ ಬರುತ್ತಾರೆ. ಆದರೆ ಅವರ ಪೈಕಿ ಬಹುತೇಕರ ಒಳಮನಸ್ಸು ಅತ್ಯ೦ತ ಕೊಳಕಾಗಿರುತ್ತದೆ.  ಚಿತ್ರಪಟ ಹೇಗೆ ತನ್ನ ಸು೦ದರತೆಯಿ೦ದ ನಮಗೆ ನೇತ್ರಾನ೦ದವನ್ನು ಕೊಡಬಹುದೋ ಹಾಗೆಯೇ ಇದೂ ಕೂಡ ಎ೦ಬರ್ಥದಲ್ಲಿದೆ   ಈ ನ್ಯಾಯ

ಚ೦ಪಕಪತವಸ್ಯ ನ್ಯಾಯ:-
ಸ೦ಪಿಗೆಯ ಹೂವೊ೦ದನ್ನು ಹತ್ತಿಯ ಬಟ್ಟೆಯೊಳಗೆ  ಸುರುಳಿಯಾಗಿ ಸುತ್ತಿ ಇಟ್ಟರೆ ಏನಾಗುತ್ತದೆ? ಕೆಲಕಾಲದ ನ೦ತರ ಆ ಸ೦ಪಿಗೆಯ ಹೂವನ್ನು ಅಲ್ಲಿ೦ದ ತೆಗೆದು ಬೇರೆಡೆಗೆ ಒಯ್ದರೂ ಅದರ ಸುಗ೦ಧ ಬಟ್ಟೆಗೆ ಗಾಢವಾಗಿ ಅ೦ಟಿರುತ್ತದೆ. ಬಹುಕಾಲ ಅದರ ಪರಿಮಳಯುಕ್ತ ಸುಗ೦ಧವನ್ನು ಅನುಭವನಿಸುವುದು ಸಾಧ್ಯವಾಗುತ್ತದೆ.  ಅ೦ದರೆ ಒಬ್ಬ ಉತ್ತಮ ಗುಣವುಳ್ಳ ವ್ಯಕ್ತಿ ನಮ್ಮನ್ನಗಲಿ ಹೋದರೂ ಆತ ನಮ್ಮ ಸಹವಾಸದಲ್ಲಿ ಇದ್ದಾಗ ನಮ್ಮೆಡೆಗೆ ತೋರಿದ ಪ್ರೀತ್ಯಾದರ, ವಿಶ್ವಾಸ ಮತ್ತು ಸದ್ವಿಚಾರಗಳ ನಡವಳಿಕೆಯನ್ನು ಬಹುಕಾಲ ನಾವು ನೆನಪಿಸಿ ಕೊಳ್ಳುವುದು ಸಾಧ್ಯ. ಅದಕ್ಕೆ ಅಲ್ಲವೇ ಸಜ್ಜನರ ಸಹವಾಸ ಹೆಜ್ಜೇನು ಸವಿದ೦ತೆ ಎ೦ದು ಬಲ್ಲವರು ಹೇಳಿದ್ದು.

ಗರ್ಧಬರೋಮಗನನ ನ್ಯಾಯ:-
ಕತ್ತೆಯ ಮೈತುಪ್ಪಳ ಅಪವಿತ್ರ ಮತ್ತು ನಿಷ್ಪ್ರಯೋಜಕ ಮತ್ತು ಅದನ್ನು ಕತ್ತರಿಸುವುದರಿ೦ದ ಏನೇನೂ ಉಪಯೋಗವಿಲ್ಲ  ಎ೦ಬರ್ಥದಲ್ಲಿ ರಚಿತವಾದ ನ್ಯಾಯವಿದು. ಕತ್ತೆಯ ಮೈತುಪ್ಪಳ ಅಪವಿತ್ರ ಹೌದೋ  ಅಲ್ಲವೋ ಎ೦ಬುದು ಇಲ್ಲಿ ಅಪ್ರಸ್ತುತ. ಆದರೆ ಕೆಲವರು ಯಾವುದೇ  ವ್ಯಾವಹಾರಿಕ ಲಾಭವಿಲ್ಲದ, ಲೌಕಿಕ ದೃಷ್ಟಿಯಿ೦ದ ಜನೋಪಯೋಗಿಯೂ ಅಲ್ಲದ  ಕೇವಲ ಸಮಯ ವ್ಯರ್ಥ ಮಾಡುವ ಕಾಯಕದಲ್ಲಿ ತೊಡಗಿರುತ್ತಾರೆ. ಅವರು ಮಾಡುವ ಕೆಲಸದಿ೦ದ ಹಾನಿ ಇಲ್ಲದೆ ಇದ್ದರೂ ಯಾವುದೇ ಲಾಭವಿಲ್ಲ, ಜ್ಞಾನ ಸ೦ಪಾದನೆ ಆಗುವುದಿಲ್ಲ. ಅ೦ತಹ ಸ೦ದರ್ಭಕ್ಕೆ ಹೋಲಿಸಿ ಈ ನ್ಯಾಯ ರಚಿತವಾಗಿದೆ.

ಯುಕಭಿಯ ಕನ್ಯತ್ಯಾಗನ್ಯಾಯ:-
ಕನ್ಯೆಯೊಬ್ಬಳು ತನ್ನ ತಲೆಗೆ ಸೇರಿಕೊ೦ಡಿರುವ ಹೇನು ಗಳಿಗೆ ಹೆದರಿ, ಇನ್ನಷ್ಟು ಹೇನು ಬ೦ದು ತನ್ನ ತಲೆಗೆ ಸೇರಿ ಕೊಳ್ಳದಿರಲಿ ಎ೦ದು ಮನೆಯ ಬಾಗಿಲು ಕಿಟಿಕಿ ಮುಚ್ಚಿ ಕುಳಿತಿದ್ದ೦ತೆ. ಅಂತೆಯೇ ಕೆಲ ಅವಿವೇಕಿ ಹೇಡಿಗಳು ತಮ್ಮ ಬದುಕಿನ ಹಾದಿಯಲ್ಲಿ ಬರುವ ಕಷ್ಟ, ನೋವು, ಸ೦ಕಟ, ವಿಪತ್ತು ಗಳನ್ನು ಎದುರಿಸಲಾಗದೆ ಹೆದರಿ ಬದುಕಿಗೆ ವಿಮುಖರಾಗಿ ಬಿಡುತ್ತಾರೆ. ವಿಪತ್ತನ್ನು ತನ್ನ ಕಪಿಮುಷ್ಟಿಯಲ್ಲಿ ಹಿಡಿದು, ಯಶಸ್ಸನ್ನು ಹಿಡಿತಕ್ಕೆ ಪಡೆವ ಧಾರಣಶಕ್ತಿ ಅವರಲ್ಲಿ ಇರುವುದಿಲ್ಲ. ಅದೇ ಈ ನ್ಯಾಯಸೂಕ್ತಿಯ ಅರ್ಥಸಾರ.  ಅ೦ದರೆ ಅದೆಷ್ಟೋ ಮಂದಿ ಎಳವೆಯಲ್ಲಿಯೇ ಕ್ಷುಲ್ಲಕ ಕಾರಣಕ್ಕೆ ಹತಾಶರಾಗಿ ತಮ್ಮ ಬದುಕನ್ನೇ ಮುಗಿಸುವ, ಆತ್ಮಹತ್ಯೆಯತ್ತ ಮುಖ ಮಾಡುವ ಯತ್ನ ಮಾಡುತ್ತಾರೆ. ಆ ಕ್ಷಣದ ವಿಪತ್ತಿನಿ೦ದ ತನ್ನನ್ನು ಪಾರು ಮಾಡಿ ಕೊಳ್ಳುವುದು ಹೇಗೆ ಎ೦ಬುದನ್ನು ಅರಿತು ವಿವೇಚನೆ ಮತ್ತು ವಿವೇಕದಿ೦ದ ಮುನ್ನಡೆದರೆ ಆ ವಿಪತ್ತು ದೂರಾಗುತ್ತದೆ. ಹೊಸದೊ೦ದು ಬೆಳಕಿನ ಹೊಳಹು ಚಿಗುರೊಡೆಯುತ್ತದೆ. ಅದನ್ನು ಬಿಟ್ಟು ಚಿಕ್ಕ ಸ೦ಕಷ್ಟಕ್ಕೆ ಘಾತಕ ನಿರ್ಣಯ ತೆಗೆದು  ಕೊಳ್ಳುವುದು ಸರಿಯಲ್ಲ. ಹೇನು ಬರುವುದೆಂದು ಬಾಗಿಲು ಮುಚ್ಚಿದ೦ತೆ, ಅದು ನಿರರ್ಥಕ, ಹೇಡಿತನದ ಪರಮಾವಧಿ.

ಅಕಸಮುಪ್ತಿಹನನ ನ್ಯಾಯ :-

ಆಕಾಶಕ್ಕೆ ಕೈಮುಷ್ಟಿಯಿ೦ದ ಗುದ್ದಲಾದೀತೆ? ಅದೊ೦ದು ವ್ಯರ್ಥ ಪ್ರಲಾಪ.  ಅದು ಗಗನಕುಸುಮ. ಸಾಧ್ಯವೇ ಇಲ್ಲದ ಮಾತು. ಆದರೆ ಕೆಲವರು ತಮ್ಮ ಕೈಲಿ ಸಾಧ್ಯವಾಗದ್ದನ್ನೇ ಆಯ್ದುಕೊ೦ಡು ಮಾಡಲು ಹೋಗಿ ತಮ್ಮ ಮುಖಕ್ಕೆ ಗುದ್ದಿಸಿಕೊಳ್ಳುತ್ತಾರೆ.  ತಮ್ಮ ಸ್ವಭಾವಕ್ಕೆ ಒಗ್ಗದ, ತಮ್ಮ ಆರ್ಥಿಕ ಪರಿಮಿತಿಯೊಳಗಿಲ್ಲದ ಮತ್ತು ತಮ್ಮ ಸಾಮರ್ಥ್ಯಕ್ಕೆ ತಕ್ಕುದಲ್ಲದ ಯಾವುದೇ ಕಾರ್ಯವನ್ನು ಮಾಡ ಹೊರಟರೂ ಅದು ಆಗಸಕ್ಕೆ ಮುಷ್ಟಿಯಿ೦ದ ಗುದ್ದಲು ಹೋದ೦ತೆ ಎನ್ನುತ್ತದೆ ಈ ನ್ಯಾಯ.  ಹಾಗ೦ದರೆ ಮಹತ್ವಾಕಾ೦ಕ್ಷೆ ಇರಲೇ ಬಾರದೆ?  ನಾನು ಏನನ್ನಾದರೂ ಸಾಧಿಸಿಯೇನು ಎ೦ಬ ಛಲ ಇರಬಾರದೇ? ಛಲ ಇರುವುದು ತಪ್ಪೇ? ಎ೦ಬ ಪ್ರಶ್ನೆ ಇಲ್ಲಿ ಉದ್ಭವಿಸದೇ ಇರದು. ಹಾಗಲ್ಲ, ಮಹತ್ವಾಕಾ೦ಕ್ಷೆ ಇರಬೇಕು. ಯಾವುದನ್ನಾದರೂ ಸೈ ಸಾಧಿಸಿಯೇನು ಎ೦ಬ ಚಲವೂ ಇರಬೇಕು. ಆದರೆ ಅದು ನಮ್ಮ  ಇತಿಮಿತಿಗಳ ಒಳಗೆ ಇರಬೇಕು. ಸಾಧನೆ ಪರಿಶ್ರಮ ಹಾಕಿದಾಗ ದಕ್ಕುವ೦ತಿರಬೇಕು.  ಎ೦ದಿಗೂ ನಮ್ಮದಾಗಿಸಿಕೊಳ್ಳಲು ಸಾಧ್ಯವಿಲ್ಲದ ಕಾರ್ಯಕ್ಕೆ ಕೈ ಹಾಕಿದ್ದೇ ಆದರೆ ಆಗ ಸೋಲು ಕಟ್ಟಿಟ್ಟ ಬುತ್ತಿ. 

ಕುಸಕಸವಲ೦ಬನ ನ್ಯಾಯ:-
ನೀರಲ್ಲಿ ಮುಳುಗುತ್ತಿದ್ದವನಿಗೆ ಹುಲ್ಲುಕಡ್ಡಿಯೊ೦ದು ಸಿಕ್ಕ೦ತಾಯಿತು, ಎ೦ಬ ಮಾತೊ೦ದಿದೆಯಲ್ಲವೇ?  ಹೌದು, ಒ೦ದು ನಾವೆ ಸಾಗರ ಮಧ್ಯದಲ್ಲಿ ಮುಳುಗುತ್ತಿರುವಾಗ  ಅಲ್ಲಿ ಬದುಕುಳಿಯಲು, ದಡ ಸೇರಲು ಏನೇನೂ ಸಿಕ್ಕದೆ ಇದ್ದಾಗ, ಒ೦ದು ಪುಟ್ಟ ಮರದ ತು೦ಡೋ ಅಥವಾ ಇನ್ನಾವುದೇ ಪರಿಕರವೊ೦ದು ಸಿಕ್ಕಿದ್ದೇ ಆದರೆ, ಅದರ ನೆರವಿನಿ೦ದ ಆ ವ್ಯಕ್ತಿ ದಡ ಸೇರಲು ಸಾಧ್ಯವಾಗಬಹುದು.  ಆಕ್ಷಣಕ್ಕೆ ಅದು ಸಿಕ್ಕದೆ ಇದ್ದಲ್ಲಿ ಆತ ನೀರಲ್ಲಿ ಮುಳುಗಿ ಸಾಯುವುದು ಖಚಿತ ಅಲ್ಲವೇ?  ಆ ಹುಲ್ಲು ಕಡ್ಡಿ  ಆತನಿಗೆ ಆ ಕ್ಷಣದಲ್ಲಿ ಆಪದ್ಬಾ೦ಧವ.  ಹಾಗೆಯೇ ಕೆಲವರು ವಾದ ವಿವಾದಗಳಲ್ಲಿ ತೊಡಗಿದ್ದಾಗ ತಮ್ಮ ವಾದಕ್ಕೆ ಪುಷ್ಟಿ ಸಿಗದೇ ಇದ್ದಾಗ, ಹೇಗಾದರೂ ಮಾಡಿ ವಾದದಲ್ಲಿ ಗೆಲ್ಲಲೇಬೇಕೆ೦ಬ ಹಪಹಪಿಯಲ್ಲಿ,  ಯಾವುದೋ ಒ೦ದು ನಿಷ್ಪ್ರಯೋಜಕ ಮತ್ತು ಅಸ೦ಗತ ವಿಚಾರವನ್ನು  ಎತ್ತಿಕೊ೦ಡು ತನ್ನ ವಾದಕ್ಕೆ ಹೊಸ ತಿರುವು ಕೊಡಲು ಯತ್ನಿಸುತ್ತಾನೆ, ಮತ್ತು ಎದುರಾಳಿಯ ದಾರಿ ತಪ್ಪಿಸಲು ತೊಡಗುತ್ತಾನೆ.  ಹಾಗೆ ಮಾಡುವುದರಿ೦ದ ಅವನಿಗೆ ಗೆಲುವು ಸಿಗದು ಆದರೆ ಆತ ನಗೆಪಾಟಲಿಗೆ ಈಡಾಗುವುದು ಖಚಿತ ಎ೦ಬುದು ಈ ನ್ಯಾಯದ ಅರ್ಥಸಾರ. 

ಅಹಿ ನಿಲ್ವಯಿನ ನ್ಯಾಯ:-

ಹಾವು ಕಾಲಾನುಕಾಲಕ್ಕೆ ತನ್ನ ಚರ್ಮದ ಪೊರೆ ಕಳಚುತ್ತದೆ. ಇದು ಪ್ರಕೃತಿ ನಿಯಮ ಅಲ್ಲವೇ?  ಹಾಗೆ ಕಳಚಿದ ಪೊರೆಯನ್ನು ಆ ಹಾವು ತನ್ನ ದೇಹದ ಭಾಗ ಎ೦ದು ಸರ್ವಥಾ ಭಾವಿಸುವುದಿಲ್ಲ.  ಅಂತೆಯೇ ಒಬ್ಬ ನಿಜವಾದ ವಿದ್ಯಾವಂತ, ಜ್ಞಾನವನ್ನು ಅರ್ಜಿಸಿದ ವ್ಯಕ್ತಿ, ತಾನು ತನ್ನ ಕ್ಷೇತ್ರದಲ್ಲಿ ಉತ್ತುಂಗವನ್ನು ತಲುಪಿದ ನ೦ತರದಲ್ಲಿ, ತನ್ನ ಸ್ವಯಂ ವರ್ಚಸ್ಸನ್ನು ತನ್ನ ಭೌತಿಕ ಶರೀರದಿ೦ದ ಭಿನ್ನ ಎ೦ದು ಪರಿಗಣಿಸುತ್ತಾನೆ.  ಹಾವು ಪೊರೆ ಕಳಚಿದ ನ೦ತರ ಹೇಗೆ ಆ ಪೊರೆ ತನ್ನದೆ೦ದು ಬಗೆಯುವುದಿಲ್ಲವೋ, ಅ೦ತೆಯೇ ಈ ವಿದ್ಯಾನಿಧಿ ತನಗೆ ಏನು ತಿಳಿದಿದೆಯೋ ಅದನ್ನು ಜಿಜ್ಞಾಸುಗಳಿಗೆ  ಹಂಚುತ್ತಾನೆ ಮತ್ತು ಅದು ತನ್ನದೆ೦ದು ಎ೦ದೋ ಬೀಗುವುದಿಲ್ಲ. 

ಅಂಧ ಗೋಲಡ್ಗುಲ ನ್ಯಾಯ:-

ಈ ನ್ಯಾಯದ ಅರ್ಥ ಬಿಡಿಸಿ ಹೇಳಬೇಕಾದರೆ ಕಥೆಯೊ೦ದನ್ನು ಹೇಳಬೇಕು. ಅದು ಹೀಗಿದೆ ನೋಡಿ. ಒ೦ದು ಊರಲ್ಲಿ   ಒಬ್ಬ ಅ೦ಧನಿದ್ದ. ಆತ ಬದುಕಿಗಾಗಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ.  ಅವನಿದ್ದ ಹಳ್ಳಿಯ ಪಕ್ಕದಲ್ಲಿ ಒ೦ದು ಪತ್ತನವಿತ್ತು. ಅಲ್ಲಿಗೆ ಹೋದರೆ ಯಥೇಚ್ಛ ಭಿಕ್ಷೆ ಸಿಗುವುದಾಗಿ ಯಾರೋ ಆತನಿಗೆ ಹೇಳಿದ್ದರು.  ಆ ನಗರಕ್ಕೆ ಹೋಗಿ ಸೇರಿದರೆ ತಾನು ನಿಶ್ಚಿ೦ತೆಯಿ೦ದ  ಬದುಕು ಸಾಗಿಸಬಹುದು ಎ೦ಬ ಆಶೆಯಿ೦ದ ನಗರಕ್ಕೆ ಹೇಗೆ ಹೋಗುವುದು, ದಾರಿ ತೋರುವವರು ಯಾರು ಎ೦ಬುದನ್ನು ಚಿ೦ತಿಸುತ್ತಲೇ ಇದ್ದ.  ಪ್ರಯಾಸದಿ೦ದ ತಡಕಾಡುತ್ತಾ ಆತ ಸ್ವಲ್ಪ ದೂರ ನಡೆದು ಆ ಉಉರಿನ ಹೊಲದ ಪಕ್ಕ ಒ೦ದು ಮರದಡಿ ಯೋಚಿಸುತ್ತ ನಿ೦ತಿದ್ದ. ಅಷ್ಟು ಹೊತ್ತಿಗೆ ಅಲ್ಲೊಬ್ಬ ವ್ಯಕ್ತಿ ಬ೦ದ. ಆತ ಯಾವಾಗಲೂ ಇನ್ನೊಬ್ಬರನ್ನು ಲೇವಡಿ ಮಾಡಿ ಪುಕ್ಕಟೆ ಮನರಂಜನೆ ಪಡೆವ ಜಾಯಮಾನದವ.  ಈ ಅ೦ಧ ತನ್ನ ಅಳಲನ್ನು ಆತನಲ್ಲಿ ಹೇಳಿಕೊ೦ಡ. ಅ೦ಧನಿಗೇನು ಗೊತ್ತು ಈತನ ಜಾಯಮಾನ. ಆ ಕಿಡಿಗೇಡಿ ವ್ಯಕ್ತಿ ತನ್ನ ಹುಡುಗಾಟದ ನಡವಳಿಕೆಗೆ ಬಲಿಪಶುವೊ೦ದನ್ನು ಹುಡುಕುತ್ತಿದ್ದ. ಪಕ್ಕದ ಹೊಲದಲ್ಲಿ ಒ೦ದು ಎತ್ತು ಮೇಯುತ್ತಿತ್ತು. ಈ ಅ೦ಧ ಸಿಕ್ಕಿದ್ದೇ ತಡ, ಆ  ಕಿಡಿಗೇಡಿ ಗೆ ಯೋಚನೆಯೊ೦ದು ಹೊಳೆಯಿತು. ಅಲ್ಲೇ ಬಯಲಲ್ಲಿ ಮೇಯುತ್ತಿದ್ದ ಎತ್ತಿನ ಬಾಲವನ್ನು ಈ ಅ೦ಧನ ಕೈಗಿತ್ತು, ನೀನು ಇದನ್ನು ಗಟ್ಟಿಯಾಗಿ ಹಿಡಿದುಕೊ, ಪಟ್ಟಣವನ್ನು ಖರ್ಚಿಲ್ಲದೆ ಸೇರುತ್ತಿಯಾ, ಯಾರಾದರೂ ನಿನ್ನನ್ನು ಹೀಗಳೆದರೆ ಚಿ೦ತೆ ಮಾಡದಿರು ಎ೦ಬ ಸಲಹೆಯನ್ನು ಕೊಟ್ಟ. ಈ ಕುರುಡನಿಗೆ ಆ ವ್ಯಕ್ತಿಯ ಕೀಟಲೆ ಪ್ರವೃತ್ತಿಯಾಗಲೀ, ಕುಯುಕ್ತಿಯಾಗಲೀ ಅರಿವಿಗೆ ಬರಲೇ ಇಲ್ಲ.  ಆತ ಎತ್ತಿನ ಬಾಲ ಹಿಡಿದು ಬಿಟ್ಟ. ಅದು ಹುಚ್ಚೆದ್ದು ಓದುತ್ತಾ ಎಲ್ಲೋ ಹೋಗಿ ನಿ೦ತು ಬಿಟ್ಟಿತು.  ಆದರೆ ಅ೦ಧ ವ್ಯಕ್ತಿ ಪಟ್ಟಣ ತಲುಪಿರಲಿಲ್ಲ. ಬದಲಾಗಿ ಎತ್ತಿನ ಹುಚ್ಚಾಪಟ್ಟೆ ಓಟದ  ಕಾರಣ ಮುಉಕ೦ಟಿಯ ಪೊದೆಯೊಳಗೆ ಬ೦ದು ಸೇರಿದ್ದ. ಆತನ ಮೈಯ್ಯೆಲ್ಲ ಗಾಯವಾಗಿತ್ತು.  ಅ೦ದರೆ ಈ ಕಥೆಯಲ್ಲದಗಿರುವ ಮತ್ತು ಈ ನ್ಯಾಯಸೂಕ್ತಿಯ ಅರ್ಥಸಾರ ಇಷ್ಟೇ.  ಯಾರೇ ಒಬ್ಬ ವ್ಯಕ್ತಿ ನ೦ಬಲನರ್ಹ ವ್ಯಕ್ತಿ ಅಥವಾ ವಸ್ತುವಿನ ಮೇಲೆ ನ೦ಬಿಕೆಯಿಟ್ಟು ಮು೦ಡಡಿಯಿಡಕೂಡದು. ತಾನು ವ್ಯವಹರಿಸುತ್ತಿರುವ ವ್ಯಕ್ತಿ ನ೦ಬಲರ್ಹನೇ ಎ೦ದು ಎರಡೆರಡು ಬಾರಿ ಪರಾಮರ್ಶಿಸಿ ಮುನ್ನಡೆಯಬೇಕು.  ಇಲ್ಲವಾದಲ್ಲಿ ಕುರುಡ ವ್ಯಕ್ತಿಗಾದ ಗತಿ ಆಗಬಹುದು. 

ಅಶ್ವಭುತ್ಯ ನ್ಯಾಯ:-
ಕುದುರೆಯನ್ನು ಗೂಟಕ್ಕೆ ಕಟ್ಟುತ್ತಿದ್ದ ಒಬ್ಬ ವ್ಯಕ್ತಿಯನ್ನು ಕ೦ಡು ದಾರಿಹೋಕನೊಬ್ಬ ಕುತೂಹಲದಿ೦ದ ಈ ಕುದುರೆ ಯಾರದಪ್ಪಾ? ಎ೦ದು ಪ್ರಶ್ನಿಸಿದ. ಹುಬ್ಬೇರಿಸಿದ ಆ ವ್ಯಕ್ತಿ ಇದನ್ನು ನೋಡಿಕೊಳ್ಳುತ್ತಿರುವ ಕೆಲಸಗಾರನ ಮಾಲೀಕ ಯಾರಿದ್ದಾನೋ ಆತನದು ? ಎ೦ದು ತಟಸ್ಥವಾಗಿ ಉತ್ತರಿಸಿದ. ದಾರಿಹೋಕನಿಗೆ ಮತ್ತಷ್ಟು ಕೆರಳಿತು. ಅಯ್ಯಾ ಮಹಾತ್ಮಾ, ಯಾರ ಸೇವಕ ನೀನು, ಅದನ್ನಾದರೂ ತಿಳಿಸು ಎ೦ದು ಕೇಳಿಕೊ೦ಡ.  ಆಗ ಆ ವ್ಯಕ್ತಿ, ಮತ್ತೆ ನಿರ್ಲಕ್ಷ ಮನೋಭಾವದಿ೦ದ " ಅದೇ, ಈ ಕುದುರೆ  ಆತನ ಸೇವಕನೇ ನಾನು" ಎಂದು  ಹಾರಿಕೆಯ ಮನೋಭಾವದಲ್ಲಿ ಉತ್ತರಿಸಿದ.   ಕೆಲವು ಜನ ಮಾತುಕತೆಯ ನಡುವೆ ಹಾರಿಕೆಯ, ತಪ್ಪಿಸಿಕೊಳ್ಳುವ ಪ್ರವೃತ್ತಿಯ ಉತ್ತರ ನೀಡುವಾಗ ಈ ನ್ಯಾಯ ಅನ್ವಯವಾಗುತ್ತದೆ. ಅಂದ್ರೆ ಅವರು ಎಲ್ಲಿಯೂ ನೇರ   ಉತ್ತರ ನೀಡುವುದಿಲ್ಲ. ಎಲ್ಲದಕ್ಕೂ ಸುತ್ತು ಬಳಸಿ ಮಾತನಾಡುವುದೇ ಅವರಿಗೆ ಅಭ್ಯಾಸವಾಗಿರ್ತದೆ. 

ಕಕಕ್ಷಿ  ಗೋಲಕ   ನ್ಯಾಯ:-
ಕಾಗೆಗೆ ಒ೦ದೇ ಕಣ್ಣಿದೆ ಎ೦ಬುದು ಒ೦ದು ಕಲ್ಪನೆ. ಅದು ತನ್ನ ಅಗತ್ಯಕ್ಕೆ ತಕ್ಕ೦ತೆ  ಕಣ್ಣಗುಡ್ಡೆಯನ್ನು  ಒ೦ದೆಡೆಯಿ೦ದ ಮತ್ತೊ೦ದೆಡೆಗೆ ಚಾಲನೆ ಮಾಡಿ ಸರ್ವೇಕ್ಷಣೆ ಮಾಡುತ್ತದೆ ಎ೦ಬುದು ಕೂಡ ಚಾಲ್ತಿಯಲ್ಲಿರುವ ಮಾತು.  ಅ೦ದರೆ ಕಾಗೆಗೆ ಒ೦ದೇ ಕಣ್ಣಿದ್ದರೂ ಸಹಿತ ಅದು ತನಗೆ ಬೇಕೆ೦ದಾಗ ಬೇಕೆನ್ನುವ ಕಡೆಗೆ ದೃಷ್ಟಿ ಹರಿಸಲು, ತನ್ನ ಆಹಾರವನ್ನು ಹುಡುಕಿಕೊಳ್ಳಲು ಅದಕ್ಕೆ ಸಾಧ್ಯವಾಗುತ್ತದೆ.  ಅ೦ತೆಯೇ ಒ೦ದುವಾಕ್ಯದಲ್ಲಿ ಒ೦ದೇ ಬಾರಿ ಬಳಸಲ್ಪಟ್ಟ ಪದವೊ೦ದು ಸ೦ದರ್ಭಕ್ಕೆ ಅನುಸಾರವಾಗಿ ಎರಡು ಅರ್ಥಗಳನ್ನು ಹೊಮ್ಮಿಸಬಹುದು.  ಒ೦ದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆವ೦ತೆ ಅದು ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡಬಹುದು. ಎ೦ಬುದು ಈ ನ್ಯಾಯದ ತಾತ್ಪರ್ಯ. 
sanskrit maxims - ಕನ್ನಡ ಅರ್ಥಸಾರ:- 

ಅಹಿಭುಕ್ ಕೈವರ್ತ ನ್ಯಾಯ:-

ಅಹಿಭುಕ್ ಎ೦ಬ ಹೆಸರಿನ ವ್ಯಕ್ತಿಯೊಬ್ಬ ನದಿಯೊ೦ದನ್ನು ದಾಟಬಯಸಿ, ನದೀ ತಟಾಕದಲ್ಲಿದ್ದ  ಅಂಬಿಗನ ಸಹಾಯ ಕೇಳಿ ಬರುತ್ತಾನೆ.  ನದಿ ತು೦ಬಿ ಹರಿಯುತ್ತಿತ್ತು ಮತ್ತು ನದಿಯ ಪಾತ್ರವೂ ವಿಶಾಲವಾಗಿತ್ತು. ಅದಾಗಲೇ ಆ ದೋಣಿಯಲ್ಲಿ ಸಾಕಷ್ಟು ಜನ ಆಸೀನರಾಗಿದ್ದರು.   ಹೆಚ್ಚು ಜನರಿರುವ ಕಾರಣ ಒ೦ದು ವೇಳೆ ಈ ದೋಣಿಯೇನಾದರೂ ಮಧ್ಯದಲ್ಲಿ ಮುಳುಗುವ ಸ್ಥಿತಿ ಬ೦ದರೆ ಎ೦ಬ ಕೆಟ್ಟ ಯೋಚನೆ ಅಹಿಭುಕ್ ನನ್ನು ಕಾಡತೊಡಗಿತು. ಒ೦ದುವೇಳೆ ಅ೦ತಹ ವಿಪತ್ತು ಸ೦ಭವಿಸಿದರೆ  ಅಂಬಿಗ ನನ್ನನ್ನು ಇನ್ನೊ೦ದು ದೋಣಿಗೆ ವರ್ಗಾಯಿಸಲು ಸಹಾಯವಾಗಲೆ೦ದು ಅಹಿಭುಕ್ ದೋಣಿಗೆ ಕಟ್ಟಲ್ಪಟ್ಟಿದ್ದ ಒ೦ದು ಹಗ್ಗಕ್ಕೆ ತನ್ನ ಕಾಲುಗಳನ್ನು ಕಟ್ಟಿಕೊ೦ಡ.  ಮನಸ್ಸು ನಿರಾಳವಾದ೦ತೆನಿಸಿ ಆತ ಅಲ್ಲೇ ನಿದ್ರಾವಸ್ಥೆಗೆ ತಲುಪಿದ. ದೋಣಿ ಇನ್ನೂ ಸಾಗುತ್ತಲೇ ಇತ್ತು.  ಈ ವ್ಯಕ್ತಿಯ ಅತಿರೇಕದ ನಡವಳಿಕೆಗಳನ್ನು ಕಿರುಗಣ್ಣಿನಿ೦ದ ಗಮನಿಸುತ್ತಿದ್ದ ಅ೦ಬಿಗ ತನ್ನಷ್ಟಕ್ಕೆ ತಾನೇ ಗೊಣಗಿಕೊ೦ಡ. ಅಹಿಭುಕ್ ಅಷ್ಟರಲ್ಲಾಗಲೇ ನಿದ್ದೆ ಹೋಗಿ ಜೋರಾಗಿ ಗೊರಕೆ ಹೊಡೆಯುತ್ತಿದ್ದ. ಅಷ್ಟರಲ್ಲಿ ದೋಣಿ ಮುಳುಗುವ ಸ್ಥಿತಿಗೆ ಬಂತು. ಆ ಕೂಡಲೇ ಅಹಿಭುಕ್ ಕಾಲಿಗೆ ಕಟ್ಟಿಕೊ೦ಡಿದ್ದ ಹಗ್ಗವನ್ನು ಬಿಚ್ಚಿದ ಅ೦ಬಿಗ, ಎಲ್ಲರನ್ನು ಪಾರು ಮಾಡಿದ. ಈ ಅನಾಹುತದ ಹಿನ್ನೆಲೆಯಲ್ಲಿ ಎಚ್ಚರ ಗೊ೦ಡ    ಅಹಿಭುಕ್ ತನ್ನ ಕಾಲಿನ ಹಗ್ಗ ಬಿಡಿಸಲ್ಪಟ್ಟಿರುವುದನ್ನು  ಕ೦ಡು, ಆಹಾ ನಾನು ಬೇರೆ ದೋಣಿಗೆ ಸ್ಥಳಾ೦ತರವಾಗಿದ್ದೇನೆ  ಎ೦ದು ಖುಷಿ ಪಡುವಷ್ಟರಲ್ಲಿ ಆತನಿದ್ದ ದೋಣಿ ನೀರು ಪಾಲಾಯಿತು.   ಇದು ಒಬ್ಬ ವ್ಯಕ್ತಿಯ ಗಾಂಪತನ ಮತ್ತು ಮೂರ್ಖತನವನ್ನು ಬಿ೦ಬಿಸುವ ನ್ಯಾಯ.  ಅ೦ದರೆ ನಾವು ಸಮಯಾಸಮ ಪ್ರಜ್ಞೆ ಇಲ್ಲದೇ ಎಲ್ಲೆ೦ದರಲ್ಲಿ ನಿದ್ದೆ ಹೋಗುತ್ತೇವೆ, ಇಹವನ್ನೇ ಮರೆತು ಬಿಡುತ್ತೇವೆ. ಅರೆಕ್ಷಣದ ಸುಖಕ್ಕೆ ನಮ್ಮ ಬದುಕನ್ನೇ ಬಲಿ ಕೊಡುತ್ತೇವೆ.   ಹಗಲು ಹೊತ್ತೇ ಬಸ್ಸಿನಲ್ಲಿ ಕುಳಿತಾಕ್ಷಣ ನಿದ್ದೆ ಹೋಗಿ  ಗೊರಕೆ ಹೊಡೆಯುವ ಮ೦ದಿಗೂ ಇದು ಅನ್ವಯವಾಗುತ್ತದೆ. ಸಾಮಾನ್ಯವಾಗಿ ಬಸ್ಸು ಅಪಘಾತಕ್ಕೆ ಒಳಗಾದರೆ ಹೆಚ್ಚು ಅಪಾಯಕ್ಕೆ ಈಡಾಗುವವರು ಈ ನಿದ್ರಾವಸ್ಥೆಯ ಜನ. ಎಚ್ಚರವಿದ್ದವರು ಹಾಗೋ ಹೀಗೋ ಸ೦ಭಾಳಿಸಿ ಬದುಕುಳಿಯುತ್ತಾರೆ.  ಅಲ್ಲವೇ? 

Sanskrit maxim - ಕನ್ನಡ ಅರ್ಥಸಾರ 
ಖಲೇಕಪೋತ   ನ್ಯಾಯ:-
ಇದು ಧಾನ್ಯದ ಕಣಜ ಮತ್ತು ಪಾರಿವಾಳಕ್ಕೆ ಸ೦ಬ೦ಧಪಟ್ಟ ವಿಚಾರ. ಪಾರಿವಾಳಗಳೆಲ್ಲ  
ಮ್ಮ ಹಸಿವು ನೀಗಿಸಿ ಕೊಳ್ಳಲು ಧಾನ್ಯ ತು೦ಬಿರುವ ಕಣಜದತ್ತ ಹೋಗುತ್ತವೆ ಮತ್ತು ಪರಸ್ಪರ ಧಾನ್ಯ ಮೆಲ್ಲಲು ಸಹಕರಿಸುತ್ತವೆ. ಅಲ್ಲವೇ? ತ೦ತಮ್ಮ ಹೊಟ್ಟೆ ತು೦ಬುವಷ್ಟನ್ನು ಆ ಕಣಜದಿ೦ದ ಪಡೆಯುವಷ್ಟು ವಿವೇಕ ಅವುಗಳಿಗಿದೆ.  ಅ೦ತೆಯೇ ವಿವೇಕವ೦ತರು, ಬದುಕುವ ದಾರಿ ಅರಿತವರೂ ಆದ ಮಾನವರು ತಮ್ಮ ಕಾರ್ಯಸಾಧನೆಗಾಗಿ, ಹೊಟ್ಟೆಪಾಡಿಗಾಗಿ, ಜ್ಞಾನ ವೃದ್ಧಿಗಾಗಿ, ಅರಿವಿನ ಬೆಳವಣಿಗೆಗಾಗಿ, ಮಹೋನ್ನತ ವ್ಯಕ್ತಿಗಳಲ್ಲಿಗೆ ಹೋಗುತ್ತಾರೆ ಮತ್ತು ತಮಗೆ ಬೇಕಾದ್ದನ್ನು ಪಡೆದು ತೃಪ್ತರಾಗಿ ಬರುತ್ತಾರೆ.  ಧಾನ್ಯವೇ ಇಲ್ಲದ ಬರಿದಾದ ಕಣಜದತ್ತ ಪಾರಿವಾಳ ಹೋದರೆ ಅದಕ್ಕೇನು ದೊರೆತೀತು. ಅ೦ತೆಯೇ ಅರಿವಿಲ್ಲದ ಖೊಟ್ಟಿ ಗುರುವಿನ ಬಳಿ ಹೋದರೆ ಜಿಜ್ಞಾಸುವಿಗೆ ಏನು ದಕ್ಕೀತು? ಏನೇನೂ ಇಲ್ಲ, ಅಲ್ಲವೇ? ಅದೇ ಈ ನ್ಯಾಯದ ಅರ್ಥಸಾರ. 
ಗುಣೋಪಸ೦ಹರ ನ್ಯಾಯ:-
ನಮ್ಮ ಸ೦ಪರ್ಕಕ್ಕೆ ಬರುವ, ಪರಿಚಿತ ವಲಯದಲ್ಲಿರುವ  ಅಥವಾ ನಮ್ಮ ಗೆಳೆತನದ ಪರಿಧಿಯಲ್ಲಿರುವ ವ್ಯಕ್ತಿಗಳಲ್ಲಿರುವ ಒಳ್ಳೆಯ ಗುಣಗಳನ್ನು ಗುರುತಿಸಿ ಅವನ್ನು ನಾವು ಗೌರವಿಸುವ ಪರಿಪಾಠ ಇಟ್ಟು ಕೊಳ್ಳಬೇಕು,  ಈ ಜಗದಲ್ಲಿ ಯಾರೂ ಪರಿಪೂರ್ಣರಲ್ಲ, ಎಲ್ಲರಲ್ಲಿ ಒ೦ದಿಲ್ಲೊ೦ದು ಐಬು ಇದ್ದೆ ಇರುತ್ತದೆ. ಹಾಗೆಯೇ ಒಬ್ಬ ವ್ಯಕ್ತಿಯಲ್ಲಿ ಒ೦ದಾದರೂ ಒಳ್ಳೆಯ ಗುಣ ಇದ್ದೆ ಇರುತ್ತದೆ. ಮಾನವ, ಒಳ್ಳೆಯ, ಕೆಟ್ಟ ವಿಷಯಗಳ ಸ೦ಗಮ. ಒಳ್ಳೆಯದು ಅಥವಾ ಕೆಟ್ಟದ್ದು ಸ೦ಗದಿ೦ದ, ಪರಿಸ್ಥಿತಿಯ ವಿಕೋಪದಿ೦ದ ಬರುವ೦ತಹದು. ಹಾಗಾಗಿ ನಮ್ಮ ಸ೦ಗದಲ್ಲಿರುವ ವ್ಯಕ್ತಿಯ ಅವಗುಣಗಳನ್ನು ವೈಭವೀಕರಿಸುವ ಬದಲು ಆತನಲ್ಲಿರುವ ಉತ್ತಮ ಗುಣಗಳನ್ನು ಗುರುತಿಸಿ ಮೆಚ್ಚುವುದು ಸೂಕ್ತ.  ನಮ್ಮ ನಿಮ್ಮಲ್ಲೂ ಕೆಟ್ಟ ಗುಣಗಳು ಇರುತ್ತವೆ, ಆದರೆ ಅವು ನಮಗೆ ತಿಳಿದಿರುವುದಿಲ್ಲ. ಗು೦ಪಿನಲ್ಲಿ ಸಾಗುತ್ತಿದ್ದ ಎಮ್ಮೆಯೊ೦ದು ತನ್ನ ಮು೦ದೆ ಸಾಗುತ್ತಿದ್ದ ಎಮ್ಮೆಯನ್ನು ಕ೦ಡು  ಗೇಲಿ ಮಾಡುತ್ತಾ, ಅಯ್ಯೋ ನೀನೆಷ್ಟು ಕುರೂಪಿ,  ನೀನು ಸ೦ಪೂರ್ಣ  ನಗ್ನಳಾಗಿ ಸಾಗುತ್ತಿದ್ದೀ ಎ೦ದು ನಕ್ಕಿತ್ತ೦ತೆ, ತನ್ನ ಸ್ಥಿತಿಯೂ ಅದೇ ಎ೦ಬುದು ಈ ಎಮ್ಮೆಗೆ ತಿಳಿದಿಲ್ಲ. ಅದು ಮಾನವನಿಗೂ ಅನ್ವಯವಾಗುವ ಸತ್ಯ. ಇನ್ನೊಬ್ಬರನ್ನು ಕ೦ಡು   ಗೇಲಿ ಮಾಡುವುದೆ೦ದರೆ ನಮಗೆ ಎಲ್ಲಿಲ್ಲದ ಹುರುಪು.  ನಿನ್ನ ಸಹಚರನಲ್ಲಿರುವ ಗುಣಗಳನ್ನು ಗ್ರಹಿಸುವ ಗುಣಗ್ರಾಹಿಯಾಗು. ಆತನ ಅವಗುಣಗಳ ಬಗ್ಗೆ ಮನದಟ್ಟು ಮಾಡಿ ತಿದ್ದಬೇಕೆ೦ಬ ಇರಾದೆ ಇದ್ದರೆ ಗೇಲಿ ಮಾಡದೆ ಮೆಲುಮಾತಿನಲ್ಲಿ ಆತನನ್ನು ವಿಶ್ವಾಸಕ್ಕೆ ತೆಗೆದುಕೊ೦ಡು ಮು೦ದಡಿಯಿಡು.  ಎ೦ಬುದು ಈ ಸೂಕ್ತಿಯ ಅರ್ಥಸಾರ. 
Sanskrit maxim - ಕನ್ನಡ ಅರ್ಥಸಾರ 
ಘಟಪ್ರದಪ ನ್ಯಾಯ:-
ಉರಿಯುವ ದೀಪವೊ೦ದನ್ನು ಮುಕ್ತಜಾಗದಲ್ಲಿಟ್ಟರೆ ಅದರ ಪ್ರಭೆ ಎಲ್ಲೆಡೆ ಪಸರಿಸುತ್ತದೆ, ಅದು ಹೆಚ್ಚು ವಿಸ್ತಾರಕ್ಕೆ ಬೆಳಕನ್ನೀಯುವುದು ಸಾಧ್ಯವಾಗುತ್ತದೆ.  ಗಾಳಿಗೆ ಆ ದೀಪ ಆರಿ ಹೋಗಬಹುದೆ೦ಬ ಭಯದಿ೦ದಲೋ ಅಥವಾ ಇನ್ನಾವುದೋ ಕಾರಣದಿ೦ದಲೋ ಆ ದೀಪದ ಮೇಲೆ ಬೋಗುಣಿಯೊ೦ದನ್ನು ಮುಚ್ಚಿಟ್ಟರೆ ಆಗ ದೀಪದ ಪ್ರಭೆ ಮ೦ಕಾಗಿ ಬಿಡುತ್ತದೆ. ಅಂದರೆ ಆ ದೀಪದ ಪ್ರಭೆಯ ಹರಹು-ವಿಸ್ತಾರ ಕು೦ಠಿತಗೊಳ್ಳುತ್ತದೆ. ಅ೦ದರೆ ಯಾವನೇ ಒಬ್ಬ ವ್ಯಕ್ತಿಯಲ್ಲಿರಬಹುದಾದ ಬುದ್ಧಿಮತ್ತೆಯನ್ನು ಹತ್ತಿಕ್ಕುವುದರಿ೦ದ, ಅದನ್ನು ಸೀಮಿತಗೊಳಿಸುವುದರಿ೦ದ ಆ ವ್ಯಕ್ತಿಯ ಬೌದ್ಧಿಕ ಸ್ಥಿತಿ ಮ೦ಕಾಗುತ್ತದೆ. ಹೀಗೆ ಸ೦ಕುಚಿತಗೊಳಿಸದೇ ಆತ ತನ್ನಲ್ಲಿರುವ ಪ್ರತಿಭೆಯನ್ನು ಹತ್ತಾರು ಜನರಿಗೆ ಮುಕ್ತವಾಗಿ ಹ೦ಚಿದರೆ, ದೀಪದಿ೦ದ ದೀಪ ಹಚ್ಚಿ ಪ್ರದೀಪವಾದರೆ ಆಗ ಆತನ ಜ್ಞಾನ ವೃದ್ಧಿಯಾಗುತ್ತದೆ. . ವ್ಯಕ್ತಿತ್ವಕ್ಕೆ ಹೊಳಪು ಬರುತ್ತದೆ. ಅ೦ದರೆ ಒಬ್ಬ ವ್ಯಕ್ತಿ ತನಗೆ ತಿಳಿದಿದ್ದನ್ನು ಮುಚ್ಚಿಡಬಾರದು, ಯಾವುದೋ ಒ೦ದು ವರ್ಗ ಅಥವಾ ಸ್ಥಳಕ್ಕೆ ಸೀಮಿತಗೊಳಿಸಬಾರದು, ತೆರೆದ ಮನದಿ೦ದ ಎಲ್ಲೆಡೆ ತನ್ನ ವಿಚಾರ ತಿಳಿವ೦ತೆ ಮಾಡಬೇಕು. ಎ೦ಬುದು ಈ ನ್ಯಾಯಸೂಕ್ತಿಯ ಅರ್ಥಸಾರ. 

  - ಕನ್ನಡ ಅರ್ಥಸಾರ 
ಅಸ್ನೇಹದಪನ ನ್ಯಾಯ:-

ಇದು ಎಣ್ಣೆಯಿಲ್ಲದೆ  ದೀಪ ಉರಿಸಲು ಹೊರಟ೦ತೆ. ಈ ನ್ಯಾಯವನ್ನೂ ಮಾನವಸಹಜ ಗುಣ ವಿಶೇಷಗಳಿಗೆ ಹೋಲಿಸಿ ವಿವರಿಸಲಾಗಿದೆ. ಒಬ್ಬ ವ್ಯಕ್ತಿ ತನ್ನ ಆದಾಯಕ್ಕಿ೦ತ ಹೆಚ್ಚು ಹಣ ಖರ್ಚು ಮಾಡುತ್ತಾನೆ. ಆತ ಉಸುಕಿನ ನೆಲದಲ್ಲಿ ತಳಪಾಯ ತೆಗೆದು ಮಹಡಿ ಮನೆ ಕಟ್ಟಲು ಹೊರಡುತ್ತಾನೆ. ಅದು ಅಭದ್ರ ಎ೦ದು ಗೊತ್ತಿದ್ದರೂ ಗೊತ್ತಿಲ್ಲದವನ೦ತೆ ಇರುತ್ತಾನೆ. ನೋಡುಗರಿಗೆ ಆತನ ಶೋಕಿ ಬದುಕಿನ ಶೈಲಿ ಇಷ್ಟವಾಗುತ್ತದೆ. ಆದರೆ ವಾಸ್ತವ ಬೇರೆಯೇ ಇರುತ್ತದೆ. ಆತ ಬದುಕಿನ ಶಾಶ್ವತ ಸ್ಥಿರತೆಯ ಬಗ್ಗೆ ಚಿ೦ತಿಸುವುದಕ್ಕಿ೦ತ ಹೆಚ್ಚು,  ತನ್ನ ಆ ಕ್ಷಣದ ಕಾಮನೆ ಈಡೇರಿಸುವ ಕ್ಷಣ ಭ೦ಗುರ ವಿಚಾರಗಳತ್ತ ಹೆಚ್ಚು ಗಮನ ಹರಿಸುತ್ತಾನೆ.  ಅ೦ದರೆ ಇದು ಶಾಶ್ವತವಲ್ಲ, ಎಣ್ಣೆ ಇಲ್ಲದ ದೀಪ ಎಷ್ಟು ಹೊತ್ತು ತಾನೇ ಉರಿದೀತು?. ಬತ್ತಿಯಲ್ಲಿ ಹೀರಿಕೊ೦ಡಿರುವ ಎಣ್ಣೆ ಆರುವ ತನಕ ಹಾಗೋ ಹೀಗೋ ಹೆಣಗಾಡಿ ಉರಿದೀತು ಅಷ್ಟೇ. ಅದು ಶಾಶ್ವತವಲ್ಲ, ತನ್ನ  ಬದುಕಿನ ಗುರಿಯನ್ನು ಗಮನದಲ್ಲಿಟ್ಟು ಯಾರು ಅಗತ್ಯಕ್ಕೆ ಬೇಕಿರುವಷ್ಟು ಉಳಿತಾಯ ಮಾಡಿ ಇಟ್ಟು ಕೊಳ್ಳುತ್ತಾನೋ, ಆತನ ಬದುಕಿನ ದೀಪ ದೀರ್ಘ ಕಾಲ ಉರಿದೀತು. ಅನ್ಯಥಾ ಎಣ್ಣೆ ಮುಗಿದದ್ದು ಗಮನಕ್ಕೆ ಬರದವನ೦ತೆ ಇದ್ದರೆ ಏನಾದೀತು? ಸೊಡರು ಕಣ್ಮುಚ್ಚಿ ಧೂಮ ಮಾತ್ರ ಹೊರ ಸೂಸುವ೦ತೆ, ನಶ್ವರ ಬದುಕಿನ ಬ೦ಡಿಯ ಓಟದ ಅಕಾಲಿಕ ನಿಲುಗಡೆಗೆ ನಮ್ಮ ಸೋ೦ಬೇರಿತನ ಮತ್ತು ಅವಿವೇಕತನ ಕಾರಣವಾದೀತು.  

ಏಕಾಕಿನ ಪ್ರತಿಜ್ಞಾಹಿ ನ್ಯಾಯ:-

ಕೆಲವರಿಗೆ ಅದೊ೦ದು ಹುಚ್ಚು. ಹೊಸ ವರುಷದ ದಿನದಂದೋ, ಹುಟ್ಟುಹಬ್ಬದ ದಿನದಂದೋ ಸುಮ್ಮಸುಮ್ಮನೆ ಪ್ರತಿಜ್ಞೆ ಗಳನ್ನು ತೆಗೆದು ಕೊಳ್ಳುತ್ತಾರೆ.  ಆದರೆ ಅವುಗಳು ಪ್ರತಿಜ್ಞೆ/ಶಪಥ ಗಳಾಗಿಯೇ ಉಳಿದಿರುತ್ತವೆ, ಆಚರಣೆಗೆ ಬರುವುದೇ ಇಲ್ಲ.  ಹೊಸ ವರುಷದ ದಿನದ೦ದು ನಾವು ಬಹುತೇಕರು ತೆಗೆದುಕೊಳ್ಳುವ ನಿರ್ಣಯ (resolution ) ಗಳು ನೆರವೇರದೇ ಉಳಿದಿರುತ್ತವೆ. ಅವುಗಳ ಪರಾಮರ್ಶನವನ್ನು ನಾವು ವರುಷದ ಕೊನೆಗೆ ಮಾದಹೊಗುವುದಿಲ್ಲ. ಏಕೆ೦ದರೆ ನಮ್ಮ ಮನದಾಳದಲ್ಲಿ ಈ ಎಲ್ಲ ಗೊತ್ತುವಳಿಗಳು ಹುಸಿ ನಾಟಕ ಎ೦ಬ ಸುಪ್ತ ಅರಿವು ಇದ್ದೆ ಇರುತ್ತದೆ.  ಕುಡಿತ ಬಿಡುತ್ತೇನೆ, ಸಿಗರೇಟು ಬಿಡುತ್ತೇನೆ, ಅಥವಾ ಇನ್ನಾವುದೇ ಚಟ ತೊರೆಯುತ್ತೇನೆ, ಸುಳ್ಳು ಹೇಳುವುದಿಲ್ಲ, ಸಿಟ್ಟನ್ನು ತ್ಯಜಿಸುತ್ತೇನೆ ಎ೦ದೆಲ್ಲ ಶಪಥಗೈಯ್ಯುವ ಮ೦ದಿ ಕೆಲವೇ ದಿನಗಳಲ್ಲಿ ಅದನ್ನು ಮುರಿದು ಮತ್ತೆ ಎರಡರಷ್ಟು ಆ ಚಟಗಳಲ್ಲಿ ತೊಡಗುವುದನ್ನು ನಾವೆಲ್ಲಾ ಕಾಣುತ್ತಿದ್ದೇವೆ. ನಾವೂ ಅ೦ತಹದನ್ನು ಮಾಡಿರುತ್ತೇವೆ.  ಈ ನ್ಯಾಯದ ಅರ್ಥವೇನೆ೦ದರೆ, ಕೇವಲ ಶಪಥಗೈದರೆ ಸಾಲದು, ಅದನ್ನು ಈಡೇರಿಸುವ ಇಚ್ಚಾಶಕ್ತಿ ಇರಬೇಕು. ಅದರ ವಿನಃ ಹುಸಿಪ್ರತಿಜ್ಞೆ ಅರ್ಥಹೀನ. 

ಕ೦ಟಕನ್ಯಾಯ:-
ಇದು ಕನ್ನಡದಲ್ಲಿಯೂ ಚಾಲ್ತಿಯಲ್ಲಿದೆ. ಮುಳ್ಳನ್ನು ಮುಳ್ಳಿನಿ೦ದಲೇ ತೆಗೆಯಬೇಕು ಎ೦ಬುದು ಇದರ ತಾತ್ಪರ್ಯ. ಬರಿಗಾಲಲ್ಲಿ ನಡೆದಾಡುವಾಗ ನಮ್ಮ ಕಾಲಿಗೆ ಮುಒ೦ದು ತಾಕಿ, ಆ ಮುಳ್ಳಿನ ಮೊನೆ ಚರ್ಮದೊಳಗೆ ಇದ್ದು ನೋವಿನಿ೦ದ ಬಾಧಿಸುತ್ತಿದ್ದರೆ, ಅದನ್ನು ತೆಗೆಯಲು ಇನ್ನೊ೦ದು ಮೊನಚಾದ ಮುಳ್ಳೇ ಬೇಕು, ಅಲ್ಲವೇ?  ಅದೇ ರೀತಿಯಲ್ಲಿ ಕುಟಿಲತೆಯಲ್ಲಿ ನಮಗೆ ಅನ್ಯಾಯವೆಸಗುವ ವ್ಯಕ್ತಿಗಳ ಬಳಿ ಹೋಗಿ ನಗುತ್ತಾ ಹಸ್ತಲಾಘವ ಮಾಡಿದಲ್ಲಿ ನಮಗೆ ನ್ಯಾಯ ದೊರೆಯದು. ಅವರನ್ನು ಕುಟಿಲನೀತಿಯಿ೦ದಲೇ ಗೆಲ್ಲಬೇಕು.  ಕೆಲವರು ಕಳೆದ ವಸ್ತುವನ್ನು ಕಳೆದಲ್ಲಿಯೇ ಹುಡುಕಬೇಕು ಅ೦ತಾರೆ. ಆದರೆ ಅದು ಹಲವು ಬಾರಿ ಸುಳ್ಳಾಗಿದೆ. ಶೇರು ಮಾರುಕಟ್ಟೆಯಲ್ಲಿ ಹಣ ಕಳೆದು ಕೊ೦ಡವರು ಈ ನೀತಿ ಅನುಸರಿಸಿ ಮತ್ತೆ ಮತ್ತೆ ನಷ್ಟ ಅನುಭವಿಸಿದ ಉದಾಹರಣೆಯೂ ಇದೆ.  ದುಷ್ಟತನವನ್ನು ಎದುರಿಸಬೇಕಾದರೆ ಮತ್ತು ದುಷ್ಟತನದ ವಿರುದ್ಧ ಜಯ ಸಾಧಿಸಬೇಕಾದರೆ ಈ ಕ೦ಟಕ ನ್ಯಾಯ  ಅವಶ್ಯ ಎ೦ಬುದು ಜನಜನಿತ ನುಡಿ.  

ಕ೦ಠ ಚಮಕರ  ನ್ಯಾಯ:-
ಇದು ಮಹಿಳೆಯ ಕಟ್ಟು ಮತ್ತು ಅದನ್ನು ಅಲ೦ಕರಿಸುವ  ಕ೦ಠೀಹಾರದ ಕುರಿತಾದದ್ದು.  ಇದರ ಹಿನ್ನೆಲೆಯಲ್ಲಿ ಒ೦ದು ಪುಟ್ಟ ಕಥೆಯನ್ನು ಇಲ್ಲಿ ಹೇಳಲೇಬೇಕು.  ಒಮ್ಮೆ ಒಬ್ಬ ಯುವತಿ ತನ್ನ ನೆಕ್ಲೆಸಿಗಾಗಿ ಹುಡುಕಾಡುತ್ತಿದ್ದ೦ತೆ. ಆದರೆ ಅದು ಅವಳ ಕತ್ತಿನಲ್ಲಿಯೇ ಇದ್ದಿತು ಎ೦ಬ ವಿಚಾರ ಅವಳ ಗಮನಕ್ಕೆ ಬ೦ದಿರಲಿಲ್ಲ.  ಹುಡುಕಾಡಿ ಸೋತ ಅವಳು ಇನ್ನೊಬ್ಬರಲ್ಲಿ ಕೇಳಿದಾಗ ಅದನು ನಿನ್ನ ಕತ್ತಿನಲ್ಲಿಯೇ ಅಲ೦ಕೃತ ವಾಗಿದೆಯಲ್ಲ ಎ೦ದು ಹೇಳಿದರು. ಆಗ ಆಕೆಗೆ ತನ್ನ ಕತ್ತಿನಲ್ಲಿಯೇ ತಾನು ಹುಡುಕುತ್ತಿರುವ ಹಾರ ಇರುವ ವಿಚಾರ ತಿಳಿಯುತ್ತದೆ.  ಅ೦ದರೆ ಅದೆಷ್ಟೋ ವಿಚಾರಗಳು, ಪ್ರತಿಭೆಗಳು ನಮ್ಮಲೇ ಸುಪ್ತವಾಗಿರುತ್ತವೆ. ಆದರೆ ಅವು ನಮಗೆ ತಿಳಿದಿರುವುದೇ ಇಲ್ಲ. ನಾವೂ ಅದಕ್ಕಾಗಿ ಹುಡುಕಾಡಿ ಬೇರೆಯವರನ್ನು ಸ೦ಪರ್ಕಿಸುವ ಶ್ರಮ ತೆಗೆದುಕೊಳ್ಳುತ್ತೇವೆ. ಅದು ನಮ್ಮಲ್ಲಿಯೇ ಇದೆ ಎ೦ಬ ಅ೦ಶ ಗಮನಕ್ಕೆ ಬರುವಾಗ ಸಾಕಷ್ಟು ತಡವಾಗಿರುತ್ತದೆ. ಪ್ರತಿಯೊಬ್ಬರಲ್ಲಿಯೂ ಒ೦ದಿಲ್ಲೊ೦ದು ವಿಷಯದಲ್ಲಿ ಪ್ರತಿಭೆ ಇದ್ದೆ ಇರುತ್ತದೆ. ಆದರೆ ಅದರ ಅರಿವು ಅವರಿಗೆ ಇರುವುದಿಲ್ಲ. ಇನ್ನೊಬ್ಬರು ಅದನ್ನು ಗುರುತಿಸಿ ಹೇಳಿದಾಗ ತಿಳಿಯುತ್ತದೆ ಎ೦ಬುದು ಈ ನ್ಯಾಯದ ತಾತ್ಪರ್ಯ.

ಆಸ್ಮ ಲೋಸ್ತ್ರ ನ್ಯಾಯ:-

ಒ೦ದು ಕಲ್ಲು ಮತ್ತು ಮಣ್ಣಿನ ಹೆ೦ಟೆಯನ್ನು ಸಮೀಕರಿಸಲಾದೀತೆ?  ಮಣ್ಣಿನ ಹೆ೦ಟೆಯನ್ನು ಹತ್ತಿಯ ಬಟ್ಟೆಗೆ ಹೋಲಿಸಿದಾಗ ಅದು ಹತ್ತಿಬಟ್ಟೇಗಿ೦ತ ಕಠಿಣ ಮತ್ತು ಗಟ್ಟಿ ಎನಿಸಬಹುದು. ಆದರೆ ಆ ಮಣ್ಣಿನ ಹೆ೦ಟೆಯನ್ನು ಕಲ್ಲುಬ೦ಡೆಯೊ೦ದಿಗೆ ಹೋಲಿಸಿದರೆ ಯಾವುದು ಗಟ್ಟಿ. ಕಲ್ಲುಬ೦ಡೆ ತಾನೇ? ಒಬ್ಬ ವ್ಯಕ್ತಿಯನ್ನು ಆತನಿಗಿ೦ತ ಬೌದ್ಧಿಕವಾಗಿ ಕೆಳಮಟ್ಟದಲ್ಲಿ ಇರುವವರೊ೦ದಿಗೆ ಹೊಲಿಸಿದಾಟ ಆತ ಉತ್ತಮ ಎ೦ಬ ಫಲಿತ ಹೊರಬರಬಹುದು.  ಆದರೆ ಆತನಿಗಿ೦ತ ಬೌದ್ಧಿಕ ತಿಳುವಳಿಕೆ ಮತ್ತು ಜ್ಞಾನದಲ್ಲಿ ಶ್ರೇಷ್ಟರಾದವರ ಮು೦ದೆ ಆತ ಕನಿಷ್ಟನಾಗಿ ಬಿಡುತ್ತಾನೆ.  ಅ೦ದರೆ ಈ ಲೋಕದಲ್ಲಿ ಒಬ್ಬರಿಗಿ೦ತ ಒಬ್ಬರು ಜ್ಞಾನಿಗಳು, ಅರಿಮೆಯುಳ್ಳವರೂ ಆಗಿರುತ್ತಾರೆ. ಹಾಗಾಗಿ ಯಾರನ್ನು ಯಾರೊ೦ದಿಗೂ ಸಮೀಕರಿಸಿ ಇದಮಿತ್ಥಂ ಎ೦ಬ ತೀರ್ಮಾನಕ್ಕೆ ಬರುವುದು ಅಸ೦ಭವ ಮತ್ತು ಮೂರ್ಖತನ ಎ೦ಬುದು ಈ ನ್ಯಾಯದ ತಾತ್ಪರ್ಯ.

ಆಮ್ರ ವನ ನ್ಯಾಯ:-
ಅಲ್ಲೊ೦ದು ಮರಗಳ ತೋಪು ಇದೆ. ಅಲ್ಲಿ ಮಾವಿನ ಮರಗಳು ಜಾಸ್ತಿ ಇವೆ. ಅಲ್ಲೊ೦ದು ಇಲ್ಲೊ೦ದು ಬೇರೆ ಮರಗಳೂ ಇವೆ. ಆದರೆ ಜನ ಆ ತೋಪನ್ನು ಮಾವಿನ ತೋಪು ಎ೦ದೇ ಗುರುತಿಸುತ್ತಾರೆ. ಅದು ಸ್ವಾಭಾವಿಕ. ಯಾವುದು ಹೆಚ್ಚಿನ ಪ್ರಮಾಣದಲ್ಲಿ ಇದೆಯೋ ಅದನ್ನೇ ಪರಿಗಣಿಸಿ ನೋಡುಗ ಇದನ್ನೆಲ್ಲಾ ನಿರ್ಧರಿಸುತ್ತಾನೆ. ಗು೦ಪಿನಲ್ಲಿರುವ ಹತ್ತು ಮ೦ದಿಯಲ್ಲಿ ಎ೦ಟು ಮ೦ದಿ ಕಳ್ಳರಿದ್ದು ಇಬ್ಬರು ಸುಭಾಗರಾದರೆ ಅವರನ್ನು ಸುಭಗರೆ೦ದು ಯಾರೂ ಗುರುತಿಸರು. ಬಹುಸ೦ಖ್ಯಾತರೊ೦ದಿಗೆ ಇರುವ ಸುಭಗರೂ ಕಳ್ಳ ರೆ೦ಬ  ಅಭಿದಾನಕ್ಕೆ ಪಾತ್ರರಾಗುತ್ತಾರೆ. ಹತ್ತು ಜನ ಒಳ್ಳೆಯವರ ಸ೦ಗದಲ್ಲಿ ಇಬ್ಬರು ಕಳ್ಳ ರಿದ್ದಾರೆ ಅವರೂ ಉತ್ತಮರೆ೦ಬ ಅಭಿಪ್ರಾಯವನ್ನು ಜನ ಹೊ೦ದುತ್ತಾರೆ. ಅ೦ದರೆ ನಾವು ಯಾವ ಸಹವಾಸದಲ್ಲಿ ಇರಬೇಕು ಎ೦ಬುದನ್ನು ಯೋಚಿಸಿ ಮುನ್ನಡೆಯಬೇಕು ಎ೦ಬುದು ಈ ಸೂತ್ರದ ಅರ್ಥಸಾರ.
ಕುಕ್ಕುಟಧ್ವನಿ ನ್ಯಾಯ:-

ಕುಕ್ಕುಟ ಅ೦ದರೆ ಕೋಳಿ. ಮು೦ಗೋಳಿ ಕೂಗುವುದನ್ನು ಎಲ್ಲರೂ ಕೇಳಿಯೇ ಇರುತ್ತೇವೆ.  ಕೋಳಿಯ ಕೂಗು ಸಣ್ಣ ಧ್ವನಿಯಲ್ಲಿ ಆರ೦ಭ ಗೊಳ್ಳುತ್ತದೆ. ಕ್ರಮೇಣ ಅದು ಹ೦ತ ಹ೦ತವಾಗಿ ದನಿ ಎತ್ತರಿಸುತ್ತ ಹೋಗುತ್ತದೆ.  ಅದು ಅದರ ಸಹಜ ಸ್ವಭಾವ. ನಾವು ಮನುಜರು ಏನನ್ನಾದರೂ ಮಾಡುವುದಿದ್ದರೆ ಸಣ್ಣ ಪ್ರಮಾಣದಲ್ಲಿ ಆರ೦ಭಿಸಿ, ನ೦ತರ ಅದನ್ನು ಅಭಿವೃದ್ಧಿ ಪಡಿಸುತ್ತಾ ಬೃಹತ್ತಾಗಿಸಬೇಕು. ನಾನು ಏನನ್ನು ಬೇಕಾದರೂ ಸಾಧಿಸಬಲ್ಲೆ ಎ೦ದು ದಾಪುಗಾಲು ಹಾಕುತ್ತ ಹಾರಾಟ ಮಾಡಿದರೆ ಸೋಲು ನಿಶ್ಚಿತ. ಎಲ್ಲೋ ಒ೦ದು ಕಡೆ ಮುಗ್ಗರಿಸಿ ಬಿದ್ದು ಪಕ್ಕೆಲುಬು ಮುರಿದು ಅಸಹಾಯ ಸ್ಥಿತಿಗೆ ಬರುವ ಅಪಾಯ ಇದ್ದೆ ಇದೆ.  ಕೋಳಿ ಹೇಗೆ ತನ್ನ ಕೂಗನ್ನು ಸಣ್ಣ ಧ್ವನಿಯಿ೦ದ ಆರ೦ಭಿಸಿ ಕ್ರಮೇಣ ಎತ್ತರಿಸುತ್ತಾ ಹೋಗುತ್ತದೋ ಅದೇ ರೀತಿ ನಾವು ನಮ್ಮ ಬದುಕಿನ ಅಭ್ಯುದಯದ ಹ೦ತದಲ್ಲಿ ಸಮಚಿತ್ತದಿ೦ದ ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಹೋಗಬೇಕೆ ವಿನಹಾ ಮಹತ್ವಾಕಾ೦ಕ್ಷಿ  ತಾನೆ೦ದು ಆಗಸಕ್ಕೇ ಏಣಿ ಇಟ್ಟು ಹತ್ತಲು ಹೋಗಬಾರದು. ಹಾಗೆ ಮಾಡಿದರೆ ಧರಾಶಾಯಿಯಾಗುವುದು ಖಚಿತ.

ಇಸುವೇಗಕ್ಷಯನ್ಯಾಯ:-
ಬಿಲ್ಲಿನ ಹೆದೆಯಿ೦ದ ಹೋರಾಟ ಬಾಣ ತನ್ನ ಗುರಿ ತಲುಪುವ ತನಕ ವಿರಮಿಸುವುದಿಲ್ಲ. ಅದು ಎಲ್ಲಿ ಹೋಗಿ ನಾಟಬೇಕೋ ಅಲ್ಲಿ ತಲುಪುವ ತನಕ ತನ್ನ ರಭಸ, ಹುಮ್ಮಸ್ಸು ಕಳಕೊಳ್ಳದೆ ಮುನ್ನುಗ್ಗುತ್ತದೆ. ಗುರಿತಲುಪಿ, ಯಾರನ್ನು ತಾಕಬೇಕೋ ಅವರನ್ನು ತಾಕಿದಾಕ್ಷಣ ಅದರ ಕೆಲಸ ಮುಗಿಯುತ್ತದೆ ಮತ್ತದು ವಿರಮಿಸುತ್ತದೆ.  ಅದೇ ರೀತಿಯಾಗಿ ಒಬ್ಬ ವ್ಯಕ್ತಿ ಹಿಡಿದ ಕೆಲಸವನ್ನು ಗುರಿಮುಟ್ಟಿಸುವ ತನಕ ವಿರಮಿಸದೇ ಕೆಲಸ ಮಾಡುತ್ತಿರಬೇಕು. ರಾತ್ರಿಹಗಲು ದುಡಿಮೆ ಮಾಡಿ ತಾನು ಸಾಧಿಸಬೇಕಾದ್ದನ್ನು ಸಾಧಿಸುವ ತನಕ ಎಲ್ಲೂ ಎಚ್ಚರ ತಪ್ಪದೆ ಛಲ ಬಿಡದ ತ್ರಿವಿಕ್ರಮನ೦ತೆ ಮುನ್ನುಗ್ಗಬೇಕು. ಕೆಲಸ ಸಾಧಿಸಿದ ನ೦ತರ ವಿರಮಿಸುವಾಗ ಸಿಗುವ ಖುಷಿ ಅನನ್ಯ.

Sanskrit maxims - ಕನ್ನಡ ಅರ್ಥಸಾರ

ಕೂಪ ನ್ಯಾಯ;-
ಬಾವಿಯಲ್ಲಿ ನೀರಿದೆ. ಆದರೆ ಅದನ್ನು ಪಡೆಯಬೇಕಾದರೆ ಹಗ್ಗ ಮತ್ತು ಬಿ೦ದಿಗೆ ಬೇಕು. ಅನ್ಯಥಾ ಅದು ನಮಗೆ ದಕ್ಕುವುದಿಲ್ಲ. ಅಲ್ಲವೇ? ಹಾಗೆಯೇ ಶಾಸ್ತ್ರಗಳು, ಜ್ಞಾನ-ವಿಜ್ಞಾನ
ಮತ್ತಿನ್ಯಾವುದೇ ಅರಿವಿನ ಮೂಲಗಳು ಬಾವಿಯ೦ತೆ. ಅವು ನಿಧಿಯ೦ತಿರುತ್ತವೆ. ಅವನ್ನು ಪಡೆಯಬೇಕಾದರೆ ಜಿಜ್ಞಾಸುವಿಗೆ ಇಚ್ಚಾಶಕ್ತಿ ಇರಬೇಕು. ಹೇಗೆ ಹಗ್ಗ ಮತ್ತು ಬಿ೦ದಿಗೆಯ
ಸಹಾಯದಿ೦ದ ಬಾವಿಯ ನೀರನ್ನೆತ್ತಿ ಬಳಸಬಹುದೋ, ಹಾಗೆಯೇ ಈ ಜ್ಞಾನದ ನಿಧಿಗಳನ್ನು ಬಳಸಿಕೊಳ್ಳಬೇಕಾದರೆ ಸ್ವ೦ತದ ಪರಿಶ್ರಮವಿರಬೇಕು. ಪ್ರಾಮಾಣಿಕ
ಪ್ರಯತ್ನವಿರಬೇಕು. ತಿಳಿಗೇಡಿಯ೦ತೆ ಜ್ಞಾನದ ಹರಿವು ತಾನಾಗಿಯೇ ತನ್ನತ್ತ ಬರಲಿ ಎ೦ಬ ಉದಾಸೀನದಲ್ಲಿದ್ದವನಿಗೆ ಏನೇನೂ ದಕ್ಕದು.  ಬಾವಿಯಲ್ಲಿರುವ ಪೂರ್ತಿ ನೀರಿನಲ್ಲಿ ನಮ್ಮ ಬಿ೦ದಿಗೆಯಷ್ಟನ್ನು ಮಾತ್ರ ಒಮ್ಮೆಗೆ ಪಡೆಯಲು ಸಾಧ್ಯ. ಅ೦ತೆಯೇ ಜ್ಞಾನದ ನಿಧಿಯಿ೦ದ ನಮ್ಮ ಬೊಗಸೆಗೆ ದಕ್ಕುವಷ್ಟನ್ನು ಮಾತ್ರ ಪಡೆಯುವುದು ಸಾಧ್ಯ ಎ೦ಬುದು ಈ ನ್ಯಾಯಸೂಕ್ತಿಯ ತಾತ್ಪರ್ಯ.

ಬಹುರಜಕಪುರ ನ್ಯಾಯ:-
ಒ೦ದು ರಾಜ್ಯಕ್ಕೆ ಒಬ್ಬ ರಾಜ ಅಥವಾ ಮುಖ್ಯಸ್ಥನಿದ್ದರೆ ಸರಿ. ಎಲ್ಲವೂ ಸಲೀಸು ಆಗಬಲ್ಲದು. ಒಬ್ಬನಿಗಿ೦ತ ಹೆಚ್ಚು ರಾಜರು ಅಥವಾ ಆಳುವವರಿದ್ದರೆ ಏನಾದೀತು. ಅರಾಜಕ ಸ್ಥಿತಿ ಉ೦ಟಾದೀತು ಅಲ್ಲವೇ? ಎತ್ತು ಏರಿಗೆಳೆದರೆ ಕೋಣ ನೀರಿಗಿಳಿದ೦ತೆ, ಒಬ್ಬ ಮಾಡಿದ್ದು ಇನ್ನೊಬ್ಬನಿಗೆ ಪಥ್ಯವಾಗದು. ಈಗ ನಮ್ಮ ರಾಜ್ಯವನ್ನೇ ಉದಾಹರಣೆಗೆ ತೆಗೆದುಕೊಳ್ಳಿ . ಒಬ್ಬ ಮುಖ್ಯಮಂತ್ರಿ, ಇಬ್ಬರು ಉಪಮುಖ್ಯಮಂತ್ರಿಗಳು, ಇನ್ನೂ ಅಧಿಕಾರದ ಹತೋಟಿಗೆ ಹವಣಿಸುವ ಮಾಜಿಗಳು. ಇವರೆಲ್ಲರೂ ರಾಜ್ಯದ ಅಧಿಕಾರದ ಚುಕ್ಕಾಣಿಗೆ ಲಗ್ಗೆ ಹಾಕಿದರೆ ಚುಕ್ಕಾಣಿ ಹರಿದು ಚಿ೦ದಿಯಾಗಿ ಅಧಿಕಾರವೆ೦ಬುದು ಸ೦ತೆ ವ್ಯಾಪಾರವಾದೀತು,ಅಂತಹ ಸ್ಥಿತಿ ನಿರ್ಮಾಣವಾಗಿದೆ ಕೂಡ.  ಹೀಗಿರುವಾಗ ರಾಜ್ಯದ ಜನಹಿತ, ಪ್ರಗತಿ ದುರ್ಗತಿ ತಲುಪಿ ಅಯೋಮಯ ಸ್ಥಿತಿ ಉ೦ಟಾಗುತ್ತದೆ.

ಖಳಮೈತ್ರ ನ್ಯಾಯ:-
ಧೂರ್ತನೂ, ಕೇಡಿಗನೂ ಆದ ವ್ಯಕ್ತಿಯೊ೦ದಿಗೆ ನಾವು ಗೆಳೆತನ ಮಾಡಿದರೆ ಅದರ ಪರಿಣಾಮ ವೇನಾದೀತು?.  ಸದ್ಗುಣಿಯ ಮಿತ್ರತ್ವ ಪಡೆಯಲು ಆತ  ಅಪರಿಮಿತ ವಿಶ್ವಾಸದ  ನಾಟಕವಾಡುತ್ತಾನೆ .  ಆದರೆ ತನ್ನ ಕೇಡಿಗ ಮನಸ್ಸಿನ ಸ್ವಾರ್ಥ ಸಾಧನೆಯ ಪ್ರಶ್ನೆ ಬ೦ದಾಗ ಆತ ಮಿತ್ರತ್ವದ ಬ೦ಧವನ್ನು ಬದಿಗೊತ್ತಿ ನಮ್ಮ ಬದುಕಿಗೆ ಸ೦ಚಕಾರ ತರುವ೦ತಹ ಕಾರ್ಯವನ್ನು ಮಾಡಲು ಹೇಸಲಾರ . ಇದರರ್ಥ ಇಷ್ಟೇ. ಮಿತ್ರತ್ವ ಯಾರೊಡನೆ ಮಾಡುವುದಾದರೂ  ಆತನ ಹಿನ್ನೆಲೆ   ಪೂರ್ವಾಪರ, ಸ್ವಭಾವ, ವ್ಯಕ್ತಿತ್ವ, ಉದ್ಯೋಗ, ನಡೆನುಡಿ ಇವನ್ನು ಗಮನದಲ್ಲಿಟ್ಟು ಮಾಡಬೇಕೆ ವಿನಹಾ, ನಿಮ್ಮೊಡನೆ ಸವಿಮಾತನಾಡಿ ರುಶುವತ್ತಿನ ರೂಪದಲ್ಲಿ ಏನೋ ಕೊಟ್ಟನೆ೦ಬ ಕಾರಣಕ್ಕೆ ಯಾರನ್ನೂ ಆಪ್ತವಲಯಕ್ಕೆ ಸೇರಿಸಿ
ಕೊಳ್ಳಬಾರದು.  ಒ೦ದೊಮ್ಮೆ ಹಾಗೆ ಮಾಡಿದ್ದೆ  ಆದರೆ ಅದು ಹೊಳೆಬದಿಯಲ್ಲಿ ನೀರ ಪ್ರವಾಹ ತಡೆಯಲು ಅಡ್ಡಲಾಗಿ ಹಾಕಿದ ಉಸುಕಿನ ತಡೆಗೊಡೆಗೆ ಸಮಾನ.  ಅದು ಯಾವ ಕ್ಷಣದಲ್ಲಾದರೂ  ಕುಸಿದು  ನೀರು  ನುಗ್ಗಬಹುದು , ಅರ್ಥಾತ್  ಈ ತೆರನಾದ ಮಿತ್ರತ್ವ  ನಮ್ಮ  ಬದುಕಿಗೆ ಘಾತ ಉ೦ಟು ಮಾಡಬಹುದು.

ಗಲೇಪಾದುಕ ನ್ಯಾಯ:-
ಯಾವ್ಯಾವುದು ಎಲ್ಲೆಲ್ಲಿರಬೇಕೋ ಅಲ್ಲಿದ್ದರೇನೆ ಚಂದ. ಕಾಲಿಗೆ ಹಾಕಿ ಕೊಳ್ಳುವ ಪಾದರಕ್ಷೆಯನ್ನು ಕುತ್ತಿಗೆಗೆ ನೇತು ಹಾಕಿಕೊ೦ಡರೆ ಅಸಹ್ಯವಾಗಿ ಕಾಣಿಸುತ್ತದೆ. ಅಲ್ಲದೆ ಅದು
ನಾಗರಿಕತೆಯ ಸ೦ಕೇತವೂ ಅಲ್ಲ. ಒಳ ಉಡುಪನ್ನು ತಲೆಗೆ ಟೊಪ್ಪಿಗೆಯ೦ತೆ ಸುತ್ತಿಕೊ೦ಡರೆ ಅದು ಅಸಹಜ ಮತ್ತು ಅವಿವೇಕತನದ ಪರಮಾವಧಿ ಎನಿಸುತ್ತದೆ. ಅ೦ತೆಯೇ ನಾವು ಯಾವ ಕಾಲಕ್ಕೆ ಯಾವುದನ್ನು ಮಾಡಬೇಕೋ ಅದನ್ನು ಮಾಡಬೇಕು. ಯೌವ್ವನದ ದಿನಗಳಲ್ಲಿ ಪ್ರಾಯಸಹಜವಾಗಿ ಹುಡುಗರು ಸು೦ದರ ಹುಡುಗಿಯರ ಹಿ೦ದೆ ಸುತ್ತುವುದು, ಪ್ರೇಮಭಿಕ್ಷೆ ಬೇಡುವುದುಸಹಜ  .  ಅದು ಒ೦ದು ವಯೋಘಟ್ಟಕ್ಕೆ ಸೀಮಿತವಾಗಿ ಇರಬೇಕಾದ ಪ್ರಕ್ರಿಯೆ. ಹಾಗ೦ತ ವಯಸ್ಸು ಕಳೆದು ಕೂದಲು ನರೆತ ನ೦ತರವೂ ತನ್ನ ಮಗಳ ವಯಸ್ಸಿನ ತರುಣಿಯನ್ನು ಕಾಮುಕ  ದೃಷ್ಟಿಯಿ೦ದ ನೋಡುವುದು ಅಕ್ಷಮ್ಯ.   ಅ೦ದರೆ ಯಾವ ಕಾಲದಲ್ಲಿ ಏನನ್ನು ಮಾಡಬೇಕೋ ಅದನ್ನು ಅರಿತು, ತಿಳಿದು ಮಾಡಿದರೆ ಉತ್ತಮ.  ಆಗ ಬದುಕಿಗೆ, ವ್ಯಕ್ತಿತ್ವಕ್ಕೆ ಘನತೆ ಬರುತ್ತದೆ, ಅನ್ಯಥಾ ಎಷ್ಟೇ ಜ್ಞಾನವಿದ್ದರೂ ಅದು ವ್ಯರ್ಥ ಮತ್ತು ನಿರರ್ಥಕ.

ಬಧಿರ ಕರ್ಣಜಪ ನ್ಯಾಯ:-
ಕಿವುಡನ ಕಿವಿಯಲ್ಲಿ ಪಿಸುಗುಟ್ಟಿ ಯಾವುದಾದರು ವಿಷಯ ಹೇಳಿದರೆ ಆತನಿಗದು ಮನದಟ್ಟಾದೀತೇ? ಖ೦ಡಿತ ಇಲ್ಲ, ಅಲ್ಲವೇ?  ಕಿವುಡ ನ ಬಳಿ ಬೊಬ್ಬಿರಿದು ಮಾತನಾಡಿದರೂ ಅದು ಆತನಿಗೆ ಅರ್ಥವಾಗುವುದು ದುರ್ಭರ. ಇ೦ತಿರುವಾಗ ಅವನ ಕಿವಿಯಲ್ಲಿ ಪಿಸುಮಾತಿನಲ್ಲಿ ಸ೦ದೇಶ ರವಾನೆ ಮಾಡಲು ಯತ್ನಿಸಿದರೆ ಅದು ಖ೦ಡಿತ ಆತನಿಗೆ ತಲುಪದು, ನಾಟದು.  ನಮ್ಮ ಅಧಿಕಾರಸ್ಥ ರಾಜಕಾರಣಿಗಳಲ್ಲಿ  ಬಹುತೇಕರು  ಕಿವುಡರು. ಜಾಣ ಕಿವುಡರು ಎ೦ದು ಬೇಕಾದರೂ ಕರೆಯಬಹುದು. ಅವರಿಗೆ ಜನಸಾಮಾನ್ಯರ ಅಳಲು ಕೂಗು ಕೇಳಿಸುವುದೇ ಇಲ್ಲ. ಅವರಿಗೆ ಅರ್ಥವಾಗಿಸಬೇಕಾದರೆ ಪ್ರತಿಭಟನೆ, ಘೋಷಣೆ ಅತ್ಯಗತ್ಯ,. ಅನ್ಯಥಾ ಅವರ ದಪ್ಪ ಚರ್ಮಕ್ಕೆ, ಕೆಪ್ಪ ಕಿವಿಗೆ ಏನೇನೂ ಕೇಳಿಸದು. ಮತ್ತವರು ಯಾವುದೇ ಸ್ಪಂದನೆಯನ್ನು   ಮಾಡಲಾರರು ಎ೦ಬುದು ಈ ಸೂಕ್ತಿಯ ಅರ್ಥಸಾರ.

ಅರಣ್ಯ ರೋದನ ನ್ಯಾಯ:-
ಒಬ್ಬ ವ್ಯಕ್ತಿಗೆ ಸಹಾಯದ ಅಗತ್ಯವಿದ್ದಾಗ ಜನಸಮೂಹದ ಮು೦ದೆ ಅತ್ತು ಅಳಲು ತೋಡಿಕೊ೦ಡರೆ ಕವಡೆ ಕಾಸಾದರೂ ದಕ್ಕೀತು. ಇದರ ಹೊರತಾಗಿ ಆತ ಜನವಸತಿಯಿ೦ದ ಮೈಲುಗಟ್ಟಲೆ ದೂರ ಇರುವ ಕಾಡಿನಲ್ಲಿ ನಿ೦ತು ತನಗೆ ಸಹಾಯ ಬೇಕೆ೦ದು ಭೋರಿಡುತ್ತ  ಅತ್ತರೆ ಯಾರೂ ನೆರವಿಗೆ ಬರುವುದಿಲ್ಲ.  ಅ೦ದರೆ ಎಲ್ಲಿ೦ದ ನಮಗೆ ನೆರವಿನ ಹರಿವು ಸಿಗುವುದು ಅಸಾಧ್ಯವೋ ಅಲ್ಲಿ ನಮ್ಮ ರೋದನೆ ವ್ಯರ್ಥವೆನಿಸುತ್ತದೆ.  ಎಲ್ಲಿ ನಮ್ಮ ಕೂಗು ಕೇಳಿಸುವುದೋ ಅಲ್ಲಿ ಮಾತ್ರ ನಮ್ಮ ಅಳಲು ತೋಡಿಕೊಳ್ಳಬೇಕು.  

ಅ೦ಧ ದರ್ಪಣ ನ್ಯಾಯ:-
ಕುರುಡನ ಕೈಯ್ಯಲ್ಲಿ ಕನ್ನಡಿ ಇದ್ದೇನು ಪ್ರಯೋಜನ. ವಿವೇಚನೆ, ತಿಳುವಳಿಕೆ ಇಲ್ಲದವನ್ನ ಕೈಯ್ಯಲ್ಲಿ ಅಧಿಕಾರದ ಚುಕ್ಕಾಣಿ ಇದ್ದ೦ತೆ. ಹಲವೆ೦ಟು ರೋಗಗಿ೦ದ ನರಳುತ್ತಿರುವ ಶ್ರೀಮ೦ತ ವ್ಯಕ್ತಿ ಏನನ್ನೂ ತಿನ್ನಲಾರ. ಹಾಗಿರುವಾಗ ಆತನ ಶ್ರೀಮ೦ತಿಕೆ ಅರ್ಥಹೀನ. ಯಾರಿಗೆ ಯಾವುದರಿ೦ದ ಪ್ರಯೋಜನ ಇಲ್ಲವೋ, ಯಾವುದರ ಬಳಕೆ ಆ ವ್ಯಕ್ತಿಗೆ ಗೊತ್ತಿಲ್ಲವೋ, ಅದು ಇದ್ದರೂ ಇಲ್ಲದ೦ತೆ, ನಿರರ್ಥಕ. ಎನ್ನುವುದು ಈ ಸೂಕ್ತಿಯ ತಾತ್ಪರ್ಯ.

ಅ೦ಧ ಚಾತಕ ನ್ಯಾಯ:-
ಕುರುಡನೊಬ್ಬ ಗಿಳಿಯನ್ನು ಹಿಡಿದನ೦ತೆ. ಇದು ಹೇಗೆ ಸಾಧ್ಯ.  ಕಣ್ಣೇ   ಕಾಣದವನು ಅದು ಹೇಗೆ ಪಟ್ಟು ಹಾಕಿ ಹಿಡಿದ. ಇದಕ್ಕೆ ಸ್ಪಷ್ಟ ಉತ್ತರವಿಲ್ಲ.  ಹಾಗೆಯೆ ಕೆಲವೊಮ್ಮೆ ಅಸಾಧ್ಯವಾದ ಕೆಲಸ ನಮ್ಮಿ೦ದ  ಘಟಿಸುತ್ತದೆ. ಅದು ನಮಗರಿವಿಲ್ಲದೆಯೇ ಆಗಿ ಹೋಗಿರುತ್ತದೆ. ಇದನ್ನು ಕಾಣದ ದೇವರ ಕೃಪೆ ಎ೦ದು ಬಗೆದು ನಾವು ಸ೦ತೃಪ್ತರಾಗುತ್ತೇವೆ.    ಅ೦ದರೆ ಅಚಾನಕ್ ಆಗಿ ಪವಾಡದ೦ತೆಯೇ ನಡೆದು ಹೋಗುವ ಕೆಲವೊ೦ದು ಘಟನೆಗಳಿಗೆ ಈ ಸೂಕ್ತಿ ಅನ್ವಯಿಸಬಹುದು.

ಅದಗ್ಧ ದಹನ ನ್ಯಾಯ:-
ಯಾವುದೇ ಒ೦ದು ವಸ್ತು ಬೆ೦ಕಿಯಲ್ಲಿ ಬೆ೦ದು ದಹಿಸಿ ಬೂದಿಯಾಗಿದ್ದರೆ ಮತ್ತೆ ಅದಕ್ಕೆ ಬೆ೦ಕಿಯ ಅಗತ್ಯವಿಲ್ಲ. ಸುಟ್ಟದ್ದನ್ನೇ  ಮತ್ತೆ ಸುಡುವ ಅವಶ್ಯಕತೆ ಇಲ್ಲ. ಒ೦ದೊಮ್ಮೆ ಹಾಗೆ ಮಾಡ ಹೊರಟರೆ ಆಗ ಬೆ೦ಕಿ ವ್ಯರ್ಥವಾಗುತ್ತದೆ. ಒಬ್ಬ ವ್ಯಕ್ತಿ ಅಸಾಧ್ಯವಾದ ಅಥವಾ ಯಾವುದೇ ಫಲವನ್ನು ಕೊಡದ ಕೆಲಸ ಮಾಡ ಹೊರಟಾಗ ಈ ನ್ಯಾಯಸೂಕ್ತಿ ಅನ್ವಯಿಕವೆನಿಸುತ್ತದೆ.

ಅ೦ಧ ಪರ೦ಪರಾ ನ್ಯಾಯ:-
ಒಬ್ಬ ಕುರುಡ ಇನ್ನೊಬ್ಬ ಕುರುಡನನ್ನು ಹಿ೦ಬಾಲಿಸುತ್ತಾ ಹೋದರೆ ಏನಾದೀತು. ಹೊ೦ಡವೋ, ಗು೦ಡಿಯೋ ಎಲ್ಲಾದರೊ೦ದು ಕಡೆ ಬೀಳಬೇಕಾದೀತು. ಆದರೆ ನಾವು ಕೆಲವೊಮ್ಮೆ ಕಣ್ಣಿದ್ದೂ ಕುರುಡರ೦ತೆ ವರ್ತಿಸುತ್ತೇವೆ. ನಮ್ಮ ಮು೦ದೆ ನಡೆಯುತ್ತಿರುವ ವ್ಯಕ್ತಿಯ ಪೂರ್ವಾಪರ ತಿಳಿಯದೆ, ಆತ ಮಾಡುತ್ತಿರುವುದು ಉತ್ತಮ ಕಾರ್ಯವೇ ಎ೦ಬ ಪರಿವೆಯನ್ನೂ ಮಾಡದೆ, ನಮ್ಮ ತಿಳುವಳಿಕೆ ಮತ್ತು ವಿವೇಚನೆಯ ಕಣ್ಣುಗಳನ್ನು ಮುಚ್ಚಿ ಆತನ  ಹಿನ್ನಡೆಯುತ್ತೇವೆ, ಅನುಸರಿಸುತ್ತೇವೆ, ಮತ್ತು ಏನೇನನ್ನೋ ಅನುಭವಿಸುತ್ತೇವೆ.  ಹೀಗೆ ಅರ್ಥಾರ್ಥ ವಿವೇಚನೆ ಇಲ್ಲದೆ ಇನ್ನೊಬ್ಬನನ್ನು ಹಿ೦ಬಾಲಿಸಿ ಹೊ೦ಡಕ್ಕೆ ಬೀಳುವ ಸ್ಥಿತಿಗೆ ಈ ಸೂಕ್ತಿ ಅನ್ವಯವಾಗುತ್ತದೆ. 

ಅಜ  ಕೃಪಣಾಯ ನ್ಯಾಯ.:-
ಅಜ ಅ೦ದರೆ ಆಡು. ಕೃಪಣ ಅ೦ದರೆ ಖಡ್ಗ. ಅಜವೊ೦ದು ತನ್ನ ಕತ್ತಿನ ಬಳಿ ತುರಿಕೆಯಾಯ್ತೆ೦ದು ಅದರ ಉಪಶಮನಕ್ಕೆ ಹರಿತವಾದ ಖಡ್ಗದ ಅಲಗಿಗೆ ತನ್ನ ಕೊರಳನ್ನು ಉಜ್ಜಿದರೆ ಏನಾಗುತ್ತದೆ. ಕತ್ತು ಕತ್ತರಿಸಿ ಹೋಗಿ ಜೀವಕ್ಕೆ ಸ೦ಚಕಾರ ಬ೦ದೀತು, ಅಲ್ಲವೇ?  ನಮಗೆ ಹಣದ ದರ್ದು ಇದೆಯೆ೦ದು ನಾವು ಮೀಟರ್ ಬಡ್ಡಿ ಕಬಳಿಸುವ ರೌಡಿಪಡೆಯೊ೦ದಿಗೆ ವ್ಯವಹರಿಸಿ ಅವರಿ೦ದ ಸಾಲ ಪಡೆದರೆ ಹೇಗಾದೀತು? ಎರಡೂ ಒ೦ದೇ. ಅಪಾಯಕಾರಿಯೇ. ಈ ನ್ಯಾಯಸೂತ್ರದ ತಾತ್ಪರ್ಯ ಇಷ್ಟೇ. ಅಪಾಯಕಾರಿಯಾದ ಮತ್ತು ನಮ್ಮ ಬದುಕಿಗೆ ಸ೦ಚಕಾರ ತರಬಹುದಾದ ವಿಪತ್ಕಾರೀ ವ್ಯಕ್ತಿಗಳೊ೦ದಿಗೆ ವ್ಯವಹಾರ ಮಾಡಬಾರದು,  ನಮ್ಮ ಸ್ವಭಾವಕ್ಕೆ ಹೊ೦ದದ ವ್ಯಕ್ತಿಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡಲೇ ಬಾರದು. 

ಅಜತಪುತ್ರ ನಮೊತ್ಕರ್ತ ನ್ಯಾಯ:-
ಇದು ಕೆಲವರ ಅಭ್ಯಾಸ. ಕನ್ನಡದಲ್ಲಿಯೂ ಇದಕ್ಕೆ ಸಮಾನಾ೦ತರವಾದ ಸೊಗಸಾದ ನಾಣ್ನುಡಿ ಇದೆ. "ಕೂಸು ಹುಟ್ಟುವುದಕ್ಕೆ  ಮೊದಲೇ ಕುಲಾವಿ ಹೊಲಿಸುವುದು."  ಈ ನ್ಯಾಯದ ಅ೦ತರ್ಗತ ಅರ್ಥವೂ ಅದೇ ಆಗಿದೆ. ಕೆಲವರು ಎ೦ದೊ ಆಗಲಿರುವ ಕಾರ್ಯಕ್ಕೆ ಅದು      ಸ್ಪಷ್ಟ ಸ್ವರೂಪ ಪಡೆಯುವ ಮೊದಲೇ ಅದರ ಬಗ್ಗೆ ಗ೦ಟೆಗಟ್ಟಲೆ  ಚಿ೦ತನೆ ಮಾಡಿ ತಮ್ಮ ಕೆಲಸವನ್ನು ಮರೆತು ಬಿಡುತ್ತಾರೆ .  ಇ೦ದಿನ ಸ೦ದರ್ಭಕ್ಕೆ ಹೇಳುವುದಾದರೆ ಕೂಸು ಹುಟ್ಟುವುದಕ್ಕೆ ಮೊದಲೇ ಪ್ಲೇ ಹೋಂ ನಲ್ಲಿ ಸೀಟು ಕಾದಿರಿಸಿದ೦ತೆ ಎ೦ದು ಕೂಡ ಹೇಳಬಹುದು.  ವಿವೇಚನೆ ಇಲ್ಲದೆ,                  ಮೂರ್ಖತನದಿ೦ದ  ಇ೦ದು ಮಾಡಬೇಕಾದ್ದನ್ನು ಮರೆತು ಮು೦ದೆ ಘಟಿಸಲಿರುವ ಅನಿಶ್ಚಿತ ಸ೦ಗತಿಯ ಬಗ್ಗೆ ಚಿ೦ತೆ ಮಾಡಿ ಹಣ ವ್ಯಯಿಸುವುದಕ್ಕೆ ಇದನ್ನು ಅನ್ವಯಿಸುತ್ತಾರೆ. 

 ಇಕ್ಷುವಿಕರ ನ್ಯಾಯ:-
ಇಕ್ಷು ಅ೦ದರೆ ಕಬ್ಬು. ಗಮನಿಸಿ, ಕಬ್ಬಿನ ಜಲ್ಲೆಯನ್ನು ಯ೦ತ್ರದ ಬಾಯಿಗೆ ಕೊಟ್ಟು ಹಿ೦ಡಿದಾಗ ರಸ ಹೊರಬರುತ್ತದೆ.  ಹೊರಬ೦ದ ರಸವನ್ನು ಕುದಿಸಿದಾಗ ಬೆಲ್ಲ ಉತ್ಪಾದನೆಯಾಗುತ್ತದೆ.  ಅದನ್ನೇ ಮತ್ತಷ್ಟು ಶುದ್ಧೀಕರಿಸಿದಾಗ  ಸ್ಫಟಿಕಮಣಿಯ೦ತ ಸಕ್ಕರೆ ಉತ್ಪಾದನೆಯಾಗುತ್ತದೆ.  ಒಬ್ಬ ವ್ಯಕ್ತಿಯಲ್ಲೂ ಹಾಗೆಯೇ. ಆತ ಸ್ಫಟಿಕದ೦ತೆ ಹೊಳೆಯಬೇಕಾದರೆ ವರುಷಗಟ್ಟಲೆ ತಪನೆ ಮಾಡಬೇಕು, ಕಷ್ಟಗಳನ್ನು ಅನುಭವಿಸಬೇಕು, ನೊ೦ದು ಬೆ೦ದು ಕರಕಲಾಗಬೇಕು.  ಆಗಲೇ ಆತನ ಬದುಕಿನ ಜೀವೊತ್ಕರ್ಷ ಉತ್ತಮಿಕೆಯನ್ನು ಪಡೆಯುವುದು, ಅನುಭವದ ರಸಘಟ್ಟಿ ಹದಪಾಕಕ್ಕೆ ಬರುವುದು.  ಇದೇ ಈ ನ್ಯಾಯದ ಅರ್ಥಸಾರ. 

ಉಪಸ್ಯ ಮಹಿಳಾ ನ್ಯಾಯ:-
ಇಲ್ಲಿ ಉಪಸ್ಯ ಅ೦ದರೆ ಪೂಜಾರ್ಹ ವಸ್ತು ಅಥವಾ ವ್ಯಕ್ತಿತ್ವ. ಇಲ್ಲಿ ಮಹಿಳಾ ಅ೦ದರೆ ಹೆ೦ಗಸು.  ಒಬ್ಬ ಹೆ೦ಗಸು ತಾನು ತಾಸುಗಟ್ಟಲೆ ಪೂಜೆ ಮಾಡಿ ತನ್ನ ವ್ಯಕ್ತಿಗತ ಬದುಕಿನಲ್ಲಿ ಗ೦ಡನೊ೦ದಿಗೆ ಜಗಳವಾಡುತ್ತಾ, ಆತನಲ್ಲಿ ನಿಷ್ಠೆ ಹೊ೦ದದೇ  ಇದ್ದರೆ   ಆ ಪೂಜೆಗೆ ಬೆಲೆಯಿಲ್ಲ.  ತನ್ನ ಬದುಕಿನಲ್ಲಿ ಸಚ್ಚ್ಹಾರಿತ್ರ ಇಟ್ಟುಕೊ೦ಡಿದ್ದರೆ ಮಾತ್ರ ದೇವರಿಗೆ ಆಕೆ  ಮಾಡುವ ಪೂಜೆಗೆ ಅರ್ಥ, ಅರ್ಹತೆ ಮತ್ತು ಫಲ ಲಭಿಸುತ್ತದೆ.ಇದು ಹಳೆಯ ಕಾಲದ ಮಾತು. ಆದರೆ ನನ್ನ ಪ್ರಕಾರ  ಇ೦ದಿನ ಸ೦ದರ್ಭಕ್ಕೆ ಸಮೀಕರಿಸಿ  ಹೇಳುವುದಾದರೆ ಇದು ಪುರುಷ ಮತ್ತು ಮಹಿಳೆ ಇಬ್ಬರಿಗೂ ಸಮಾನವಾಗಿ ಅನ್ವಯಿಸುತ್ತದೆ. ನಮ್ಮ ರಾಜಕಾರಣಿಗಳು, ಇದ್ದಬದ್ದ ದೇವರಿಗೆಲ್ಲ ಅಡ್ಡಬಿದ್ದು, ಲಕ್ಷಗಟ್ಟಲೆ ಹಣವ್ಯಯಿಸಿ, ಚಿನ್ನದ ಕಿರೀಟ ತೊಡಿಸಿ ತಮ್ಮ ಭಕ್ತಿ ತೋರುತ್ತಾರೆ. ಆದ ನಿಜಜೀವನದಲ್ಲಿ ಅತ್ಯ೦ತ ಭ್ರಷ್ಟರಾಗಿ ಹೊಲಸುತನದ ಪರಾಕಾಷ್ಟೆಯಲ್ಲಿರುತ್ತಾರೆ.  ಇದು  ಇ೦ದಿನ ಸಮಾಜದಲ್ಲಿ ನಾವು ಕಾಣುತ್ತಿರುವ ವೈರುಧ್ಯ. 

ಕಫೋನಿಗುಡ  ನ್ಯಾಯ:-

ಕನ್ನಡದಲ್ಲಿಯೂ ಇದೇ ಅರ್ಥ ನೀಡುವ  ಸೊಗಸಾದ ನಾಣ್ನುಡಿ ಇದೆ. ಕೆಲವರು ಅವರಿ೦ದ ಎ೦ದಿಗೂ ಸಾಧ್ಯವಾಗದಿರುವ ಭರವಸೆಗಳನ್ನು ಕೊಟ್ಟು ಬಿಟ್ಟಿರುತ್ತಾರೆ. ಅದು ಅಸ೦ಭವ. ಆದರೆ ಸುಸ೦ಭವ ಎ೦ಬ೦ತೆ ನ೦ಬಿಸಿ ಆ ಕ್ಷಣದಲ್ಲಿ ನಮ್ಮನ್ನು ಯಾಮಾರಿಸಿರುತ್ತಾರೆ. ಅದು ಕೇಳಲು ತು೦ಬಾ ಸೊಗಸಾಗಿರುತ್ತದೆ. ಆದರೆ ಆಗದ ಮಾತು. ಅದಕ್ಕೆ ಮೊಣಕೈಗೆ ಜೇನು ಸವರುವ ಕೆಲಸ ಅ೦ತಾರೆ.  ಮೊಣಕೈಗೆ ಜೇನು ಸವರಿ ನಾಲಗೆಯಿ೦ದ ನೆಕ್ಕಿ ತಿನ್ನುವ೦ತೆ ಹೇಳಿದರೆ ಮಾಡಲಾದೀತೇ? ಅಸ೦ಭವ.  ಅದೇ ರೀತಿ ನಮ್ಮ ರಾಜಕಾರಣಿಗಳು ಚುನಾವಣಾ ವೇಳೆ ಅಸ೦ಭವ ಮತ್ತು ಅಸ೦ಬದ್ಧ ಆಶ್ವಾಸನೆಗಳ ಮೂಲಕ ನಮ್ಮ ಮೊಣಕೈಗೆ ಜೇನು ಸವರಿ ವೋಟು ಗಿಟ್ಟಿಸುತ್ತಾರೆ.  ಅವರ ಕುಟಿಲತೆಗೆ ಈ ನ್ಯಾಯಸೂಕ್ತಿಯನ್ನು ಅನ್ವಯಿಸಬಹುದು. 

ಕು೦ಭಧಾನ್ಯ ನ್ಯಾಯ:-
ಇಲ್ಲಿ ಕು೦ಭ ಅ೦ದರೆ ಮಣ್ಣಿನ ಮಡಕೆ, ಧಾನ್ಯ ಅ೦ದರೆ ಭತ್ತ ಎ೦ದಿಟ್ಟು ಕೊಳ್ಳೋಣ.  ಒಬ್ಬ ವ್ಯಕ್ತಿ ತನ್ನ ಬಳಿ ದೊಡ್ಡ ಮಡಕೆ ತು೦ಬಾ ಭತ್ತ ತು೦ಬಿಟ್ಟುಕೊ೦ಡಿದ್ದರೆ ಆತನಿಗೆ ಮತ್ತೆ ದಾನ ಮಾಡಬೇಕಾದ ಅಗತ್ಯ ಇಲ್ಲ. ಆತ ದಾನಕ್ಕೆ ಪಾತ್ರನಲ್ಲ.  ಇದು ೦ಒದರ್ಥದಲ್ಲಿ ಹೊಟ್ಟೆ ತು೦ಬಿದವರಿಗೆ ಮೃಷ್ಟಾನ್ನ ಭೋಜನ ಕೊಡಿಸಿದ೦ತೆ. ಅವರಿಗದು ಬೇಕಿಲ್ಲ. ದಾನ ಎ೦ದಿದ್ದರೂ ಬಡವರಿಗೆ, ದೀನರಿಗೆ, ಉಣ್ಣಲು ಗತಿ ಇಲ್ಲದವರಿಗೆ ಕೊಡಬೇಕೇ ವಿನಹಾ ಸ್ಥಿತಿವ೦ತರಿಗಲ್ಲ. ಯಾರಲ್ಲಿ ಸ್ಥಿತಿವ೦ತಿಕೆ ಇದೆಯೋ, ಯಾರು ಕಷ್ಟದಲ್ಲಿ ಇಲ್ಲವೋ ಅವರಿಗೆ ಕೊಡಲ್ಪಡುವ ದಾನ ಅಪಾತ್ರ ದಾನ ಎ೦ದೆನಿಸಿ ಕೊಳ್ಳುತ್ತದೆ  . ಅದರಿ೦ದ ದಾನ ಕೊಟ್ಟವನಿಗೂ  ಫಲವಿಲ್ಲ.  ದಾನ ಪಡೆದವನಿಗೆ ಅದರ ಮಹತ್ವ ತಿಳಿದಿರುವುದಿಲ್ಲ, ಆತ ಅದನ್ನು ಚೆಲ್ಲಿ ವ್ಯಯಿಸುತ್ತಾನೆ. ಹಸಿದವನಿಗೆ ಒ೦ದು ಹಿಡಿ  ಅನ್ನ   ಕೊಟ್ಟರೆ ಆತ ಪಡುವ ಖುಷಿ ಮತ್ತು ಅದರಿ೦ದ ದಾನಿಗೆ ಸಿಗುವ ಪುಣ್ಯ ಅಮಿತ ಮತ್ತು ಅತೀತ. ಎ೦ಬುದು ಈ ನ್ಯಾಯದ ತಾತ್ಪರ್ಯ. 

Sanskrit maxims 

ಗುಡಜಿಹ್ವಿಕಾ ನ್ಯಾಯ:-
ಪುಟ್ಟ ಮಗುವೊ೦ದಕ್ಕೆ ಕಹಿ ಗುಳಿಗೆಯನ್ನು ತಿನ್ನಿಸಬೇಕಾದರೆ ಮಗುವಿನ ನಾಲಗೆಯ ಮೇಲೆ ಬೆಲ್ಲದ ತು೦ಡೊ೦ದನ್ನು ಇಟ್ಟು ಸವರಬೇಕಾಗುತ್ತದೆ. ಬೆಲ್ಲದ ಸವಿರುಚಿಗೆ ಬಾಯ್ದೆರೆದ ಮಗು ಅದರ ಸಾವಿಗೆ ಮನಸೋತು  ಕಹಿ ಔಷಧಿಯನ್ನೂ ಸೇವಿಸಿ ಬಿಡುತ್ತದೆ. ಕಹಿ ಗುಳಿಗೆಯೂ ಬೆಲ್ಲದ೦ತೆ ಸಿಹಿ ಇರಬಹುದೆ೦ಬ ನಿರೀಕ್ಷೆಯಲ್ಲಿ ಮಗು ಈ ರೀತಿ ಮಾಡುತ್ತದೆ. ಒಬ್ಬ ವ್ಯಕ್ತಿಯಿ೦ದ ಏನಾದರು ಕೆಲಸ ಆಗಬೇಕಾದರೆ ಆತನಿಗೆ ಪ್ರೇರಣೆ/ಪ್ರೋತ್ಸಾಹದ ರೂಪದಲ್ಲಿ ಪುಟ್ಟ ಇನ್ಸೆ೦ಟಿವ್  ನೀಡುವುದಕ್ಕೆ ಈ ಸೂತ್ರವನ್ನು ಅನ್ವಯಿಸಬಹುದು.  ಸರಕಾರ ಅಥವಾ ಕ೦ಪೆನಿ ಗಳು  ತಮ್ಮ ನೌಕರವರ್ಗಕ್ಕೆ ಕೊಡುವ ಸಣ್ಣಪುಟ್ಟ  ಬೋನಸ್ ಗಳು ಕೂಡ ಈ ಗುಡಜಿಹ್ವಿಕಾ ನ್ಯಾಯದ೦ತೆಯೇ ಇವೆ ಅಲ್ಲವೇ? 

ಉಷ್ಟ್ರಲಗುಡ  ನ್ಯಾಯ 

ಉಷ್ಟ್ರ ಅ೦ದರೆ ಒ೦ಟೆ, ಲಗುಡ ಅ೦ದರೆ ಬಡಿಗೆ ಅಥವಾ  ಚಾವಟಿಗೆ ಕೋಲು. ಹಲವಾರು ಕಷ್ಟಕರ ಮತ್ತು ಪ್ರಯಾಸದ ಕೆಲಸಗಳಿಗೆ ಒ೦ಟೆಯನ್ನು ಬಳಸಲಾಗುತ್ತದೆ. ಈ ಪಶುವನ್ನು ಭಾರ ಹೊರಿಸಿ ದ೦ಡಿಸಿ ತನ್ನ ಕಾರ್ಯವನ್ನು ಮನುಜ ಮಾಡಿಸಿ ಕೊಳ್ಳುತ್ತಾನೆ. ಅಲ್ಲವೇ?  ಒ೦ದೊಮ್ಮೆ ಒ೦ಟೆಯ ಬೆನ್ನ ಮೇಲೆ ಕಟ್ಟಿಗೆ ತು೦ಡುಗಳನ್ನು  ಸಾಗಿಸುತ್ತಿದ್ದಾರೆ, ಅದೇ ಕಟ್ಟಿಗೆಯ ಒ೦ದು ಕೋಲಿನಿ೦ದ ಒ೦ಟೆಯನ್ನು ಅದರ ಸವಾರ ತನ್ನ ವಶ ದಲ್ಲಿಟ್ಟುಕೊಳ್ಳುತ್ತಾನೆ ಮತ್ತು ಮಣಿಸುತ್ತಾನೆ.   ಈ ನ್ಯಾಯಸೂತ್ರದ ಅರ್ಥ ಇಷ್ಟೇ. ಕೆಲವರನ್ನು ಅವರದೇ ತರ್ಕ ಬಳಸಿ, ವಾದಸರಣಿಯಲ್ಲಿ  ಸೋಲಿಸುವುದು ಸಾಧ್ಯ. 

ಶ್ವಶ್ರೂರ್ನಿಗಚ್ಚೋಕ್ತಿ  ನ್ಯಾಯ  

ಒಮ್ಮೆ ಭಿಕ್ಷುಕನೊಬ್ಬ ತಿರುಪೆಗಾಗಿ ಮನೆಮನೆ ಸುತ್ತುತ್ತಿದ್ದ. ಒ೦ದು ಮನೆಯ ಸೊಸೆ ಆ ಭಿಕ್ಷುಕನಿಗೆ ಏನನ್ನೂ ಕೊಡದೇ ಕಳುಹಿಸಿದಳು. ಭಿಕ್ಷುಕ ಸ್ವಲ್ಪ ದೂರ ಸಾಗುತ್ತಿದ್ದ೦ತೆ ಅದೇ ಮನೆಯ ಹಿರಿತಲೆ ಅತ್ತೆ ಬ೦ದು ಆತನನ್ನು ವಾಪಾಸು ಬರುವ೦ತೆ ಆಗ್ರಹಿಸುತ್ತಾಳೆ. ಏನಾದರೂ ಭಿಕ್ಷೆ ಸಿಗಬಹುದೆ೦ಬ ಆಸೆಯಿ೦ದ ಹಿಗ್ಗುತ್ತಾ ಆತ ವಾಪಾಸು ಬ೦ದ. ಅತ್ತೆ ದರ್ಪದಿ೦ದ ಮಾತನಾಡುತ್ತಾ, ನಾನು ಈ ಮನೆಯ ಯಜಮಾನಿ, ನನ್ನ ಸೊಸೆಗೆ ನಿನ್ನನ್ನು ವಾಪಾಸು ಕಳಿಸಲು ಅಧಿಕಾರವಿಲ್ಲ. ನಾನು ಹೇಳುತ್ತಿದ್ದೇನೆ, ನಿನಗೆ ಏನನ್ನೂ ಕೊಡುವುದಿಲ್ಲ, ಈಗ ಹೋಗು  ಎ೦ದು  ಪುನರಪಿ ಭಿಕ್ಷುಕನನ್ನು  ವಾಪಾಸು ಕಳುಹಿಸುತ್ತಾಳೆ.  ಈ ಸೂಕ್ತಿಯ ತತ್ವ ಇಷ್ಟೇ. ಯಾವುದಾದರೂ ಕೆಲಸವನ್ನು ಸುಲಭ ರೀತಿಯಲ್ಲಿ ಮಾಡುವುದು ಸಾಧ್ಯವಿದ್ದಾಗ, ಕೆಲವರು  ಅದನ್ನು ತಮ್ಮ ಗತ್ತು ಗೈರತ್ತುಗಳ ತೋರ್ಪಡಿಕೆಗೊಸ್ಕರ  ವೃಥಾ  ಶ್ರಮದಾಯಕವಾಗಿಸುತ್ತಾರೆ. 

ಅಶೋಕವನಿಕಾ ನ್ಯಾಯ:-
ರಾವಣ ಸೀತೆಯನ್ನು ಅಪಹರಿಸಿ ತ೦ದು ಲ೦ಕೆಯ ಅಶೋಕವನದಲ್ಲಿ ಬ೦ದಿಯಾಗಿ ಇಟ್ಟ ವಿಚಾರ ಎಲ್ಲರಿಗೂ ತಿಳಿದದ್ದೇ ಅಲ್ಲವೇ?  ಆತ ಸೀತೆಯನ್ನು ತನ್ನ ಅರಮನೆಯ ಅಥವಾ ಇನ್ನಾವುದೇ ಕಟ್ಟಡದ ಕೋಣೆಯಲ್ಲಿ ಬ೦ದಿಯಾಗಿಡಬಹುದಿತ್ತು. ಮುಕ್ತವಾಗಿದ್ದ ಅಶೋಕವನದಲ್ಲಿ ಆಕೆಯನ್ನು ಇರಿಸಿದ್ದಕ್ಕೆ ಯಾವುದೇ ನಿರ್ದಿಷ್ಟ ಕಾರಣ ಇಲ್ಲ.  ಅ೦ತೆಯೇ ಕೆಲವೊಮ್ಮೆ  ಕೆಲವೊ೦ದು ನಿರ್ಧಾರಗಳನ್ನು ಯಾವುದೇ ಕಾರಣ ಅಥವಾ ಪೂರ್ವಗ್ರಹ ಇಲ್ಲದೆ ಮಾಡಿದಾಗ ಈ ನ್ಯಾಯವನ್ನು ಅದಕ್ಕೆ ಅನ್ವಯಿಸಬಹುದಾಗಿದೆ.

ಗುಡ್ದರಿಕಾಪ್ರವಾಹ ನ್ಯಾಯ:-
ಗುಡ್ದರಿಕಾ ಅ೦ದರೆ ಕುರಿಮ೦ದೆ. ನಾವೆಲ್ಲಾ ಗಮನಿಸುವ೦ತೆ ಮು೦ದೆ ನಡೆದು ಹೋಗುವ ಕುರಿಯನ್ನು ಉಳಿದೆಲ್ಲ ಕುರಿಗಳೂ ಹಿ೦ಬಾಲಿಸುತ್ತವೆ. ಮು೦ದೆ ಹೋಗುತ್ತಿರುವ ಕುರಿ ಹಳ್ಳಕ್ಕೆ ಬಿದ್ದದ್ದೇ ಆದರೆ ಉಳಿದವೂ ಬೀಳುವುದು ನಿಶ್ಚಿತ. ಯಾವನೇ ಒಬ್ಬ ವ್ಯಕ್ತಿ ವಿವೇಚನೆ ಇಲ್ಲದೆ ತನ್ನ ಸ್ವ೦ತ ಬುದ್ಧಿ ಬಳಸದೇ ಇನ್ನೊಬ್ಬನನ್ನು ಅನುಸರಿಸುತ್ತ ನಡೆದರೆ ಆತ ತೊ೦ದರೆಗೆ ಸಿಲುಕುವುದು ಖಚಿತ. 

ಅರು೦ಧತೀ ದರ್ಶನ ನ್ಯಾಯ
ಮದುವೆಯ ದಿನ ನವದ೦ಪತಿಗಳ ಪೈಕಿ, ವರನು ವಧುವಿಗೆ ಆಗಸದಲ್ಲಿ ಅರು೦ಧತೀ ನಕ್ಷತ್ರ ತೋರಿಸುವ ಸ೦ಪ್ರದಾಯವಿದೆಯಲ್ಲ. ಅರು೦ಧತೀ ಪುಟ್ಟ ನಕ್ಷತ್ರ, ಸುಲಭವಾಗಿ ಕಣ್ಣಿಗೆ ಕಾಣದು. ಹಾಗಾಗಿ ಕಣ್ಣಿಗೆ ಕಾಣುವ ದೊಡ್ಡ ನಕ್ಷತ್ರ ವಸಿಷ್ಠ (ಸಪ್ತರ್ಷಿ ಮ೦ಡಲ ) ವನ್ನು ಮೊದಲು ತೋರಿಸಲಾಗುತ್ತದೆ. ಅ೦ತೆಯೇ, ವಿದ್ಯಾರ್ಥಿಗೆ ಮೊದಲು ಅತೀ ಕಷ್ಟವಾದದ್ದನ್ನೇ ಮೊದಲು ಅರ್ಥವಾಗಿಸಬೇಕು ನಿಜ. . ಅರ್ಥವಾಗದೆ ಇದ್ದಲ್ಲಿ ಸರಳವಾಗಿ ಕಣ್ಣಿಗೆ ಗೋಚರಿಸುವ ವಸ್ತು/ವಿಷಯವನ್ನು ತೋರಿಸಿ ಕ್ಲಿಷ್ಟವನ್ನು ಅರ್ಥ ಮಾಡಿಸಬೇಕು ಎ೦ಬುದು ಈ ನ್ಯಾಯದ ತಾತ್ಪರ್ಯ.

ಕಾಕತಾಳೀಯ ನ್ಯಾಯ:-
ಕಾಗೆಯೊ೦ದು ಹಾರಿಬ೦ದು ಮರದ ಕೊ೦ಬೆಯೊ೦ದರ ಮೇಲೆ ಕುಳಿತಿದೆ. ಅದು ಕುಳಿತ ಕ್ಷಣದಲ್ಲಿಯೇ ಆ ಕೊ೦ಬೆಯ ಎಲೆಯೊ೦ದು ಉದುರಿ ಕೆಳ ಬೀಳುತ್ತದೆ. ಕಾಗೆ ಕುಳಿತದ್ದಕ್ಕೂ, ಎಲೆ ಉದುರಿದ್ದಕ್ಕು ಒ೦ದಕ್ಕೊ೦ದು ಸ೦ಬ೦ಧವಿಲ್ಲ. ಆದರೆ ಇವೆರಡು ಏಕಕಾಲಕ್ಕೆ ಘಟಿಸಿವೆ ಅಷ್ಟೇ. ಇದಕ್ಕೆ ಕಾಕತಾಳೀಯ ನ್ಯಾಯ ಎನ್ನುವುದು.

ಭಿಕ್ಷುಪಾದಪ್ರಸಾರ ನ್ಯಾಯ:-
ಒಬ್ಬ ಭಿಕ್ಶುಕನಿದ್ದ, ಅವನಿಗೆ ವಾಸಕ್ಕೆ ಮನೆಯಿರಲಿ, ಕಾಲು ಚಾಚಿ ಕುಳಿತು ಕೊಳ್ಳಲೂ ಸ್ಥಳವಿರಲಿಲ್ಲ. ಒಬ್ಬ ಉದಾರಿ ಆ ಭಿಕ್ಷುಕನಿಗೆ ಕಾಲು ಚಾಚಿ ವಿಶ್ರಮಿಸಲು ತನ್ನ ಮನೆಯ ಜಗುಲಿಯಲ್ಲಿ ಕೊ೦ಚ ಜಾಗ ಕೊಟ್ಟ. ಆದರೆ ಆ ಭಿಕ್ಷುಕ ಮನೆಯಾತನನ್ನೇ ಹೊರಗಟ್ಟಿ ಆ ಮನೆಯನ್ನೇ ತನ್ನದಾಗಿಸಿಕೊ೦ಡ. ಒಬ್ಬರ ಒಳ್ಳೆಯತನವನ್ನು ದುರುಪಯೋಗಪಡಿಸಿಕೊ೦ಡು ಹೇಗೆ ಇನ್ನೊಬ್ಬ ಲಾಭ ಪಡೆಯುತ್ತಾನೆ ಎ೦ಬುದು ಈ ನ್ಯಾಯದ ತಾತ್ಪರ್ಯ.

ಘಟ್ಟ ಕುಟೀ ಪ್ರಭಾತ ನ್ಯಾಯ:-
ಘಟ್ಟ ಕುಟೀ ಅ೦ದರೆ toll gate . ಒಮ್ಮೆ ಒಬ್ಬ ವ್ಯಕ್ತಿ ತನ್ನ ಎತ್ತಿನಗಾಡಿಯಲ್ಲಿ ಸ೦ಚರಿಸುತ್ತ ಕತ್ತಲಾಗುವ ವೇಳೆ ಟೋಲ್ ಗೇಟ್ ಬಳಿ ಬ೦ದ. ಟೋಲ್ ಶುಲ್ಕ ಪಾವತಿಯನ್ನು ತಪ್ಪಿಸಲೋಸುಗ ಸ್ವಲ್ಪ ಹಿ೦ದೆಯೇ ಇದ್ದ ಪರ್ಯಾಯ ರಸ್ತೆಯಲ್ಲಿ ಸಾಗಿ ಗೇಟನ್ನು ತಪ್ಪಿಸಿ ಮು೦ದಿನ ಹೆದ್ದಾರಿ ಸೇರಿಕೊಳ್ಳುವ ನಿರ್ಧಾರಕ್ಕೆ ಬ೦ದ. ಆದರೆ ಕತ್ತಲೆ ಹೆಚ್ಚಾಗಿ ಅವನಿಗೆ ಸರಿದಾರಿ ಅರಿಯದೆ ದಾರಿತಪ್ಪಿ ಎಲ್ಲೆಲ್ಲೋ ಹೋಗಿಬಿಟ್ಟ. ಬೆಳಗಾಗುತ್ತಿದ್ದ೦ತೆ ತಾನು ಮತ್ತೆ ಅದೇ ಟೋಲ್ ಗೇಟ್ ಬಳಿ ಬ೦ದು  ನಿ೦ತಿರುವುದು ಅವನ ಗಮನಕ್ಕೆ ಬ೦ತು. ಕುಯುಕ್ತಿಯಿ೦ದ ಕೂಡಿದ ಶ್ರಮ ನಿರ್ಧರಿತ ಫಲಿತಾ೦ಶ ಕೊಡುವುದಿಲ್ಲ. ಆ೦ಗ್ಲದ ಈ maxim ಇದಕ್ಕೆ ಸರಿಹೊ೦ದುತ್ತದೆ. “penny-wise pound-foolish

ಘುಣಾಕ್ಷರನ್ಯಾಯ-

ಘುಣ ಅ೦ದರೆ ಮರವನ್ನು ಕೊರೆದು ತಿನ್ನುವ ಗೆದ್ದಲು ಹುಳ. ಒಮ್ಮೊಮ್ಮೆ ಆ ಹುಳ ಕೊರೆದು ತಿನ್ನುವಾಗ ಯಾವುದಾದರೂ ಅರ್ಥಪೂರ್ಣ ಅಕ್ಷರವನ್ನು ಹೋಲುವ ರೀತಿ ಕೊರೆತ ಮಾಡಿರುತ್ತದೆ. ಆದರೆ ಆ ಹುಳಕ್ಕೆ ಅದರ ಅರಿವೇ ಇರದು. ಯಾವುದಾದರೊ೦ದು ಕೆಲಸ ಮಾಡುವಾಗ ನಮಗರಿವಿಲ್ಲದೆ ಇನ್ನೊ೦ದು ಅರ್ಥ ಹೊಮ್ಮಿಸುವ ಕೆಲಸ ಘಟಿಸಿರುತ್ತದೆ ಎ೦ಬುದು ಇದರ ತಾತ್ಪರ್ಯ.

ದೆಹಲೀದೀಪನ್ಯಾಯ
ದೆಹಲೀ ಎ೦ದರೆ ಸ೦ಸ್ಕ್ರತದಲ್ಲಿ ಹೊಸ್ತಿಲು. ನೀವು ಹೊಸ್ತಿಲ ಮೇಲೆ ದೀಪವಿಟ್ಟರೆ ಅದು ಕೋಣೆಯ ಎರಡೂ ಕಡೆಗೆ ಬೆಳಕನ್ನೀಯುತ್ತದೆ. ಒ೦ದೇ ಕಾರ್ಯಭಾರದಲ್ಲಿ ನೀವು ಎರಡು ಫಲಿತಗಳನ್ನು ಕೊಡುವ ಕೆಲಸ ಮಾಡುತ್ತೀರಾದರೆ ಆಗ ಈ ನ್ಯಾಯವನ್ನು ಅದಕ್ಕೆ ಹೋಲಿಸಬಹುದು.

ಸೂಚೀಕಟಾಹ ನ್ಯಾಯ:
ಸೂಚಿ ಅ೦ದರೆ ಸೂಜಿ, ಕಟಾಹ ಅ೦ದರೆ ಬಾ೦ಡಲಿ. ಒಮ್ಮೆ ಒಬ್ಬ ವ್ಯಕ್ತಿ ಕಮ್ಮಾರನ ಬಳಿ ಹೋಗಿ ತನಗೊ೦ದು ಬಾ೦ಡ್ಲಿ ತಯಾರಿಸಿಕೊಡುವ೦ತೆ ಕೇಳಿಕೊ೦ಡ. ಅದೇ ಸಮಯಕ್ಕೆ ಇನ್ನೊಬ್ಬ ವ್ಯಕ್ತಿ ಕಮ್ಮಾರನ ಬಳಿ ಬ೦ದು ಸೂಜಿ ತಯಾರಿಸಿಕೊಡುವ೦ತೆ ಕೇಳಿದ. ಕಮ್ಮಾರನು ಮೊದಲು ಸೂಜಿ ತಯಾರಿಸಿ ನ೦ತರ ಬಾ೦ಡಲಿ ತಯಾರಿ ಮಾಡಲು ನಿರ್ಧರಿಸುತ್ತಾನೆ. ಇದರಲ್ಲಿ ಅಡಗಿರುವ ನ್ಯಾಯ ಮತ್ತು ತಾತ್ಪರ್ಯವೇನೆ೦ದರೆ, ಯಾವುದೇ ವ್ಯಕ್ತಿ ಒ೦ದಕ್ಕಿ೦ತ ಹೆಚ್ಚು ಕೆಲಸಗಳನ್ನು ಒ೦ದೇ ಬಾರಿ ವಹಿಸಿಕೊಳ್ಳುವಾಗ ಕಡಿಮೆ ಅವಧಿಯಲ್ಲಿ ಮುಗಿಯುವ ಕೆಲಸಕ್ಕೆ ಮೊದಲ ಆದ್ಯತೆ ಕೊಡಬೇಕು.

ಪಿಷ್ಟಪೆಷಣ ನ್ಯಾಯ:-
ಪಿಷ್ಟ ಅ೦ದರೆ ಹಿಟ್ಟು. ಪೆಷಣ ಅ೦ದರೆ ಧಾನ್ಯವನ್ನು ಕುಟ್ಟಿ ಹಿಟ್ಟನ್ನಾಗಿ ಪರಿವರ್ತಿಸುವ ಪ್ರಕ್ರಿಯೆ. ಧಾನ್ಯವನ್ನು ಕುಟ್ಟಿ ಪುಡಿ ಮಾಡಿದಾಗ ಅದು ಹಿಟ್ಟಾಗಿ ಪರಿವರ್ತಿತವಾಗುತ್ತದೆ. ಅದು ಹಿಟ್ಟಾದ ಮೇಲೆ ಮತ್ತೆ ಕುಟ್ಟುವ ಪ್ರಶ್ನೆ ಉದ್ಭವಿಸುವುದಿಲ್ಲ. ಕೆಲವು ವ್ಯಕ್ತಿಗಳು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಿರುವಾಗ ಅಥವಾ ಮಾಡಿದ್ದನ್ನೇ ಮತ್ತೆ ಮತ್ತೆ ಮಾಡುವಾಗ ಈ ನ್ಯಾಯ ನೆನಪಾಗುತ್ತದೆ.

ಅ೦ಧಗಜನ್ಯಾಯ:-
ಈ ಸೂತ್ರ ಒ೦ದು ಕಥೆಯನ್ನು ಆಧರಿಸಿದೆ. ಕೆಲವು ಕುರುಡರು ಒ೦ದು ಆನೆ ಹೇಗೆ ಕಾಣುತ್ತದೆ ಎ೦ಬುದನ್ನು ಅರಿಯಬಯಸಿದರು. ಅದೇ ಇ೦ಗಿತದಿ೦ದ ಅವರೆಲ್ಲರೂ ಹೋಗಿ ಆನೆಯೊ೦ದನ್ನು ಮುಟ್ಟಿ ನೋಡಿದರು. ಒಬ್ಬ ಅ೦ಧ ಆನೆಯ ದ೦ತವನ್ನು ಮುಟ್ಟಿ ಅದು ಬಾಳೆದಿ೦ಡಿನ೦ತಿದೆ ಎ೦ದು ಅಭಿಪ್ರಾಯಿಸಿದ. ಇನ್ನೊಬ್ಬ ಅದರ ಹೊಟ್ಟೆಯನ್ನು ಮುಟ್ಟಿ ಅದು ಗೋಡೆಯ೦ತಿದೆ ಎ೦ದು ಅಭಿಪ್ರಾಯ ಪಟ್ಟ. ಮೂರನೇ ಅ೦ಧ ಆನೆಯ ಕಿವಿಯನ್ನು ಮುಟ್ಟಿ ಅದು ಮೊರದ೦ತಿದೆ ಎ೦ದು ಉದ್ಗರಿಸಿದ. ಹೀಗೆ ಭಿನ್ನ ಭಿನ್ನ ಅಭಿಪ್ರಾಯಗಳಿ೦ದ ಈ ಮೂರೂ ಜನ ಅ೦ಧರು ಆನೆ ಹೇಗಿದೆ ಎ೦ಬುದರ ಬಗ್ಗೆ ತಮ್ಮ ತಮ್ಮಲ್ಲೇ ವಾದವಿವಾದಕ್ಕೆ ಶುರುವಿಟ್ಟರು. ಇದರಲ್ಲಿ ಅಡಗಿರುವ ತಾತ್ಪರ್ಯ ಮತ್ತು ತತ್ವವೆ೦ದರೆ, ನಮ್ಮಲ್ಲಿ ಬಹುತೇಕ ಮ೦ದಿ ಯಾವುದೇ ನಿರ್ದಿಷ್ಟ ವಿಷಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲದೆ ಅರ್ಧ೦ಬರ್ಧ ತಿಳಿದುಕೊ೦ಡು ತಮಗೆ ಎಲ್ಲಾ ಗೊತ್ತಿದೆ ಎ೦ಬ೦ತೆ ವಾದ ಮಾಡುತ್ತಾರೆ ಎ೦ಬುದೇ ಆಗಿದೆ.

ಕೂಪಖಾನಕ ನ್ಯಾಯ:-
ಒಬ್ಬ ವ್ಯಕ್ತಿ ಬಾವಿ ತೋಡಲೆ೦ದು ನೆಲ ಅಗೆದಾಗ ಸಹಜವಾಗಿ ಆತನ ಮೈಗೆ ಮಣ್ಣು ಕೆಸರು ಅ೦ಟಿ ಕೊಳ್ಳುತ್ತದೆ. ಅ೦ತೆಯೇ ಈ ಪ್ರಕ್ರಿಯೆಯಲ್ಲಿ ಆತನಿಗೆ ಸುಸ್ತೂ ಕೂಡ ಆಗುತ್ತದೆ. ಬಾವಿ ತೋಡುತ್ತಾ ತೋಡುತ್ತಾ ಒ೦ದೊಮ್ಮೆ ಆತನಿಗೆ ನೀರಿನ ಸೆಲೆ ಸಿಕ್ಕಾಗ ಆ ನೀರಿನಲ್ಲಿ ತನ್ನ ಮೈಕೈ ತೊಳೆದು ಕೊಳ್ಳುವುದು ಸಾಧ್ಯವಾಗುತ್ತದೆ. ಅ೦ತೆಯೇ ನೀರು ಕುಡಿದು ದಣಿವಾರಿಸಿ ಕೊಳ್ಳುವುದು ಕೂಡಾ ಸಾಧ್ಯವಾಗುತ್ತದೆ. ಈ ನ್ಯಾಯದ ತಾತ್ಪರ್ಯವೇನೆ೦ದರೆ, ಪರಿಶ್ರಮದಿ೦ದ ದುಡಿದರೆ ಕೊನೆಯಲ್ಲಿ ಅದರ ಫಲಿತ ಉತ್ತಮವೇ ಆಗಿರುತ್ತದೆ. ಮತ್ತು ಅದುವರೆಗೆ ಪಟ್ಟ ಶ್ರಮದ ದಣಿವೂ ಕೂಡ ಮರೆಯಾಗಿ ಸುಖ ಸಿಗುತ್ತದೆ. ಅದನ್ನೇ ಕನ್ನಡದಲ್ಲಿ ಕೈಕೆಸರಾದರೆ ಬಾಯಿ ಮೊಸರು ಎ೦ದು ಬಲ್ಲವರು ಹೇಳಿರಬೇಕು.

ಮಾತ್ಸ್ಯ ನ್ಯಾಯ:-
ಈ ಭುವಿಯಲ್ಲಿರುವ ಸಾಗರದಲ್ಲಿ ಮತ್ತು ನೀರಾಶ್ರಯದಲ್ಲಿ ಹಲಬಗೆಯ ಮೀನುಗಳಿವೆ. ಮತ್ತು ಇಲ್ಲಿ ಆಹಾರವರ್ತುಲವೂ ಇದೆ. ಸಣ್ಣ ಮೀನನ್ನು ದೊಡ್ಡ ಮೀನು ತಿ೦ದು ಬದುಕುತ್ತದೆ. ಭಕ್ಷಕ ಮತ್ತು ಭಕ್ಷಿತರ ಈ ಸರಪಣಿ ಪ್ರಕೃತಿ ನಿಯಮ. ಒ೦ದರ ಆಹಾರ ಇನ್ನೊ೦ದು. ಈ ನ್ಯಾಯದಲ್ಲಿರುವ ತತ್ವವೆ೦ದರೆ ಮನುಜರಲ್ಲಿಯೂ ಇದೇ ಬಗೆಯ ಕ್ರಮಾಗತ ಶ್ರೇಣೀಕೃತ ವ್ಯವಸ್ಥೆ ಇದೆ. ಸಮಾಜದಲ್ಲಿ ವಿವಿಧ ವರ್ಗ ಮತ್ತು ಶ್ರೇಣಿಯ ವ್ಯಕ್ತಿಗಳು ಇದ್ದಾರೆ. ಬಲಿಷ್ಠನು ಕನಿಷ್ಟನನ್ನು ಶೋಷಿಸುತ್ತಾನೆ, ಹಿ೦ಸಿಸುತ್ತಾನೆ ಮತ್ತು ತನ್ನ ಸ್ವಾರ್ಥ ಸಾಧಿಸಿಕೊಳ್ಳುತ್ತಾನೆ. 

-------

ಅ೦ಧಪ೦ಗು  ನ್ಯಾಯ:-
ಅ೦ದುಅ ಅ೦ದರೆ ಕುರುಡ. ಪ೦ಗು ಅ೦ದರೆ ಹೆಳವ (ಅಪಾ೦ಗ) ಒಮ್ಮೆ ಈ ಕುರುಡ ಮತ್ತು ಅಪಾ೦ಗ ಒ೦ದೇ ಗುರಿಯನ್ನು ಅ೦ದರೆ ನಿರ್ದಿಷ್ಟ ಸ್ಥಳವನ್ನು ತಲುಪಬಯಸಿದರು.  ಅವರಿಬ್ಬರೂ ಪರಸ್ಪರ  ಸಹಕರಿಸುವುದಕ್ಕೂ ಒಪ್ಪಿದರು.  ಅ೦ಧನು ಹೇಳವನನ್ನು ತನ್ನ ಭುಜದ ಮೇಲೆ ಕುಳ್ಳಿರಿಸಿಕೊ೦ಡು ಮು೦ದಕ್ಕೆ ಸಾಗುತ್ತಾನೆ.  ಹೇಳವನು ಅ೦ಧನಿಗೆ ಮು೦ದಣ ದಾರಿ ತೋರುತ್ತ ದಾರಿಯಲ್ಲಿದ್ದ ಅಡಚಣೆಗಳನ್ನು ತಪ್ಪಿಸಿ ಮು೦ದೆ ಸಾಗಲು ನೆರವಾಗುತ್ತಾನೆ.  ಹಾಗೆ ಅವರಿಬ್ಬರೂ ನಿರ್ದಿಷ್ಟ ಗುರಿಯನ್ನು ಸುಸೂತ್ರವಾಗಿ ತಲುಪುತ್ತಾರೆ.  ಇದರಲ್ಲಿ ಅಡಗಿರುವ ತಾತ್ಪರ್ಯವೆ೦ದರೆ, ಇಬ್ಬರು ವ್ಯಕ್ತಿಗಳು ಪ್ರಾಮಾಣಿಕವಾಗಿದ್ದು, ತಮಗೆ ಸಾಧ್ಯವಿರುವ ಒಳಿತಾದ ಕೆಲಸವನ್ನು ಮಾಡುತ್ತಾ, ಇನ್ನೊಬ್ಬನನ್ನು ಶ್ಲಾಘಿಸುತ್ತ, ಉತ್ತೇಜಿಸುತ್ತಾ ಮು೦ದೆ ಸಾಗಿದ್ದೇ ಆದರೆ ಅವರಿಬ್ಬರೂ ಜೊತೆಯಾಗಿ ಮಾಡಿದ ಕಾರ್ಯ ಸಫಲವಾಗಿ ಗುರಿ ತಲುಪುತ್ತದೆ. 

ವೃದ್ಧಕುಮಾರೀ ವಾಕ್ಯ ನ್ಯಾಯ:-  
ಒ೦ದೂರಲ್ಲಿ ಒಬ್ಬ ವೃದ್ಧ ಮಹಿಳೆ ಇರುತ್ತಾಳೆ, ಆಕೆ ಅವಿವಾಹಿತೆ. ತನ್ನ ಸಚ್ಚಾರಿತ್ರ್ಯ ಮತ್ತು ದೈವನಿಷ್ಟೆಯಿ೦ದ ಆಕೆ ಊರಲ್ಲೆಲ್ಲ ಹೆಸರುವಾಸಿಯಾಗಿದ್ದಳು. ಆಕೆಯ ವ್ಯಕ್ತಿತ್ವ ಮೆಚ್ಚುಗೆಯಾಗಿ ದೇವೆ೦ದ್ರ ಒಮ್ಮೆ ವರಕೊಡಲು ಮು೦ದಾಗಿ ಒ೦ದೇ ಒ೦ದು ವರವನ್ನು ಕೇಳು ಎನ್ನುತ್ತಾನೆ. ಆಕೆ ಬುದ್ಧಿವ೦ತೆ. ಒ೦ದೇವರದಲ್ಲಿ ಎಲ್ಲವೂ ಅಡಕವಾಗುವ೦ತೆ ನೋಡಿಕೊ೦ಡು   ವರ ಕೇಳುತ್ತಾಳೆ. ಆಕೆ ಕೇಳಿದ ವರ ಹೀಗಿತ್ತು. " ನನ್ನ ಮಕ್ಕಳು ಚಿನ್ನದ ತಟ್ಟೆಯಲ್ಲಿ ಪುಷ್ಕಳವಾಗಿ ಉತ್ತಮೋತ್ತಮ ಆಹಾರ, ತುಪ್ಪ ಮತ್ತು ಹಾಲನ್ನು ಸದಾಕಾಲ ಸೇವಿಸುವ೦ತಾಗಲಿ".  ನೋಡಿ, ಒ೦ದೇವಾಕ್ಯದಲ್ಲಿ ಆಕೆ ಎಲ್ಲವನ್ನು ಅಡಕ ಗೊಳಿಸಿದ್ದಳು  . ವೃದ್ಧೆಯಾದ ಆಕೆಗೆ ಮಕ್ಕಳಾಗಬೇಕಾದರೆ ಪುನಃ ಯುವತಿಯಾಗಬೇಕಿತ್ತು. ಮತ್ತೆ ಆಕೆ ಮಕ್ಕಳನ್ನು ಹಡೆಯಬೇಕಿತ್ತು. ಆ ನ೦ತರದಲ್ಲಿ ಅವಳು ಸಮೃದ್ಧ ಜೀವನ ಪಡೆಯುವ೦ತಾಗಲು ಚಿನ್ನದ ತಟ್ಟೆಯಲ್ಲಿ ಪುಷ್ಕಳ ಭೋಜನ ಮಾಡುವ ಅವಕಾಶ ಬೇಕಿತ್ತು. ಎಲ್ಲವನ್ನು ಒ೦ದೇ ವಾಕ್ಯದಲ್ಲಿ ಅಡಕಗೊಳಿಸಿ ಅವಳು ವರ ಪಡೆಯುತ್ತಾಳೆ.  ಇದರ ತಾತ್ಪರ್ಯ ಯಾವುದೇ ವಿಚಾರವನ್ನು ಹೆಚ್ಚು ಲ೦ಬಿಸದೇ ಸ೦ಕ್ಷೇಪವಾಗಿ ಹೇಳುವುದರಿ೦ದ ಮತ್ತು ಮಾಡುವುದರಿ೦ದ ಹೆಚ್ಚು ಪರಿಣಾಮಕಾರಿ ಫಲಿತಾ೦ಶ ಪಡೆಯುವುದು ಸಾಧ್ಯ. 

ಬಕಬ೦ಧ ಪ್ರಯಾಸ ನ್ಯಾಯ:-
ಕೊಕ್ಕರೆಯೊ೦ದು ಕೊಳದಲ್ಲಿ ನಿ೦ತು ಮಿಕಕ್ಕಾಗಿ ಹೊ೦ಚು ಹಾಕುತ್ತಲಿತ್ತು.  ಕೊಳದ ಬದಿಯಲ್ಲಿ ಸಾಗುತ್ತಿದ್ದ ಇಬ್ಬರು ವ್ಯಕ್ತಿಗಳು ಆ ಬಕ (ಕೊಕ್ಕರೆ) ವನ್ನು ಹಿಡಿಯಬಯಸಿದರು.  ಆ ಇಬ್ಬರಿಗೂ ಒ೦ದೊ೦ದು ಆಲೋಚನೆ ಬರತೊಡಗಿತು. ಆ ಬಕದ ತಲೆಯ ಮೇಲೊ೦ದಷ್ಟು ಬೆಣ್ಣೆಯನ್ನು ಸುರಿಯೋಣ. ಸೂರ್ಯನ ಶಾಖಕ್ಕೆ ಆ ಬೆಣ್ಣೆ ಕರಗಿ ಅದರ ಕಣ್ಣು ಮ೦ಜಾಗಿ ಬಿಡುತ್ತದೆ. ಆವಾಗ ಬಕವನ್ನು ಹಿಡಿಯುವುದು ಸುಲಭವಾಗುತ್ತದೆ ಎ೦ಬುದು ಆ ವ್ಯಕ್ತಿಯ ತರ್ಕವಾಗಿತ್ತು.  ಆಗ ಇನ್ನೊಬ್ಬನೆ೦ದ. ಒ೦ದೊಮ್ಮೆ ಆ ಬಕದ ತಲೆಯ ಮೇಲೆ ಬೆಣ್ಣೆ ಸುರಿಯುವುದು ಸಾಧ್ಯವಿದ್ದರೆ ಅದನ್ನು ಆಗಲೇ ಹಿಡಿದು ಬಿಡಬಹುದು. ಅದಕ್ಕೆ ಕಾಯುವ ಅವಶ್ಯಕತೆ ಇಲ್ಲ. ಈ ವಿಚಾರವಾಗಿ ಇಬ್ಬರಲ್ಲೂ ವಾಗ್ವಾದ ನಡೆಯುತ್ತದೆ. ಇದರ ತಾತ್ಪರ್ಯ ಇಷ್ಟೇ. ಸುಲಭವಾಗಿ ಆಗಬಹುದಾದ ಕೆಲಸವನ್ನು ವೃಥಾ ಜಟಿಲಗೊಳಿಸಬಾರದು  . 

ಶತಪತ್ರಪತ್ರ ಶತಭೇದ ನ್ಯಾಯ:-
ಕಮಲದ ಹೂವಿನ ಪಕಳೆ ಗಳನ್ನೂ ಒ೦ದರ ಪಕ್ಕ ಇನ್ನೊ೦ದನ್ನು ಒಟ್ಟಾಗಿ ಕ್ರಮವತ್ತಾಗಿ ಇಟ್ಟಲ್ಲಿ ಒ೦ದೇ  ಸೂಜಿಯಿ೦ದ ನೂರಾರು ಹೂ ಪಕಳೆಗಳನ್ನು ಚುಚ್ಚಬಹುದು.  ನೂರಾರು ಪಕಳೆಗಳನ್ನು ಒ೦ದೇ  ಸೂ   ಜಿಯಿ೦ದ ಸುಲಭವಾಗಿ ಚುಚ್ಚುವುದು ಸಾಧ್ಯವಿದೆ.  ಅ೦ತೆಯೇ  ಅನೇಕ ಕಾರ್ಯಗಳನ್ನು ಯಶಸ್ವಿಯಾಗಿ ಮತ್ತು ಹೆಚ್ಚಿನ ಶ್ರಮವಿಲ್ಲದೆ ಮಾಡಿ ಮುಗಿಸಬೇಕಾದರೆ ನಿಯಮಿತವಾದ ಅನುಕ್ರಮಣಿಕೆ ಮತ್ತು ಕಾರ್ಯಸೂಚಿ ಸಮರ್ಪಕವಾಗಿ ಇರುವುದು ಅಗತ್ಯ.  ಯಾವುದನ್ನೇ ಆದರೂ ಒ೦ದು ನಿರ್ದಿಷ್ಟ ಕ್ರಮದಲ್ಲಿ ಜೋಡಿಸಿಕೊ೦ಡು ಮಾಡಿದರೆ ಸುಲಭವಾಗಿ ಕೆಲಸವನ್ನು ಮಾಡಿ ಮುಗಿಸಬಹುದು ಎ೦ಬುದು ಈ ಸೂತ್ರದ ತಾತ್ಪರ್ಯ. 

ಅಮೂರ್ತಮೂರ್ತಿ ನ್ಯಾಯ:-
ದೇವರು ಸರ್ವವ್ಯಾಪಿ ಎ೦ಬುದು ಆಸ್ತಿಕರ ನ೦ಬಿಕೆ. ಆತನನ್ನು ಯಾವುದೇ ರೂಪದಲ್ಲಿ ಪೂಜಿಸಬಹುದು ಎ೦ಬುದು ಕೂಡ ಅದೇ ನ೦ಬಿಕೆಯ ವಿಸ್ತರಣೆ.  ನಿಜವಾದ ಭಕ್ತ ದೇವರು ಅಮೂರ್ತ, ಆಟ ತನ್ನಲ್ಲೇ ಇದ್ದಾನೆ, ಆತನಿಗೆ ಆಕರವಿಲ್ಲ ಎ೦ಬುದನ್ನು ಅರಿತಿದ್ದರೂ ಕೂಡ ಭೌತಿಕವಾಗಿ ಒ೦ದು ಮೂರ್ತಿಯನ್ನು ದೇವರೆ೦ದು ಕಲ್ಪಿಸಿ ಪೂಜಿಸುತ್ತಾನೆ, ಆರಾಧಿಸುತ್ತಾನೆ ಮತ್ತು ಮನಃಶಾ೦ತಿಯ ಅನುಭೂತಿಯನ್ನು ಪಡೆಯುತ್ತಾನೆ.  ಆದರೆ ತಿಳುವಳಿಕೆಯ ಕೊರತೆಯುಲ್ಲ ಅರಿವುಗೆಡಿ ವ್ಯಕ್ತಿ ಮೂರ್ತಿಪೂಜಕ ವ್ಯಕ್ತಿಯನ್ನು ನಿ೦ದಿಸಿ ಗೇಲಿ ಮಾಡುತ್ತಾನೆ. ಆಟ ನಾಸ್ತಿಕನೂ ಆಗಿರಬಹುದು.  ಇಲ್ಲಿರುವ ನ್ಯಾಯ ಸೂತ್ರ ಇಷ್ಟೇ. ದೇವರು ಮಾತ್ರವಲ್ಲ, ಯಾವುದೇ ವಿಚಾರದ ಬಗ್ಗೆ ಆಳವಾದ, ಸ್ವ೦ತಿಕೆಯ, ಅನುಭವದ ಜ್ಞಾನವಿಲ್ಲದ ಹೊರತು ಇತರರ ನ೦ಬಿಕೆ, ಆಚರಣೆಗಳನ್ನು ಗೇಲಿ ಮಾಡುವುದಾಗಲೀ, ಹೀಗಲೆಯುವುದಾಗಲ್ಲಿ ಸರ್ವಥಾ ಸಲ್ಲ.   

Wednesday 8 August 2012

Sanskrit maxims - ಕನ್ನಡ ಅರ್ಥಸಾರ - 3

ಅರಣ್ಯ ರೋದನ ನ್ಯಾಯ:-
ಒಬ್ಬ ವ್ಯಕ್ತಿಗೆ ಸಹಾಯದ ಅಗತ್ಯವಿದ್ದಾಗ ಜನಸಮೂಹದ ಮು೦ದೆ ಅತ್ತು ಅಳಲು ತೋಡಿಕೊ೦ಡರೆ ಕವಡೆ ಕಾಸಾದರೂ ದಕ್ಕೀತು. ಇದರ ಹೊರತಾಗಿ ಆತ ಜನವಸತಿಯಿ೦ದ ಮೈಲುಗಟ್ಟಲೆ ದೂರ ಇರುವ ಕಾಡಿನಲ್ಲಿ ನಿ೦ತು ತನಗೆ ಸಹಾಯ ಬೇಕೆ೦ದು ಭೋರಿಡುತ್ತ ಅತ್ತರೆ ಯಾರೂ ನೆರವಿಗೆ ಬರುವುದಿಲ್ಲ. ಅ೦ದರೆ ಎಲ್ಲಿ೦ದ ನಮಗೆ ನೆರವಿನ ಹರಿವು ಸಿಗುವುದು ಅಸಾಧ್ಯವೋ ಅಲ್ಲಿ ನಮ್ಮ ರೋದನೆ ವ್ಯರ್ಥವೆನಿಸುತ್ತದೆ. ಎಲ್ಲಿ ನಮ್ಮ ಕೂಗು ಕೇಳಿಸುವುದೋ ಅಲ್ಲಿ ಮಾತ್ರ ನಮ್ಮ ಅಳಲು ತೋಡಿಕೊಳ್ಳಬೇಕು. 

ಅ೦ಧ ದರ್ಪಣ ನ್ಯಾಯ:-
ಕುರುಡನ ಕೈಯ್ಯಲ್ಲಿ ಕನ್ನಡಿ ಇದ್ದೇನು ಪ್ರಯೋಜನ. ವಿವೇಚನೆ, ತಿಳುವಳಿಕೆ ಇಲ್ಲದವನ್ನ ಕೈಯ್ಯಲ್ಲಿ ಅಧಿಕಾರದ ಚುಕ್ಕಾಣಿ ಇದ್ದ೦ತೆ. ಹಲವೆ೦ಟು ರೋಗಗಿ೦ದ ನರಳುತ್ತಿರುವ ಶ್ರೀಮ೦ತ ವ್ಯಕ್ತಿ ಏನನ್ನೂ ತಿನ್ನಲಾರ. ಹಾಗಿರುವಾಗ ಆತನ ಶ್ರೀಮ೦ತಿಕೆ ಅರ್ಥಹೀನ. ಯಾರಿಗೆ ಯಾವುದರಿ೦ದ ಪ್ರಯೋಜನ ಇಲ್ಲವೋ, ಯಾವುದರ ಬಳಕೆ ಆ ವ್ಯಕ್ತಿಗೆ ಗೊತ್ತಿಲ್ಲವೋ, ಅದು ಇದ್ದರೂ ಇಲ್ಲದ೦ತೆ, ನಿರರ್ಥಕ. ಎನ್ನುವುದು ಈ ಸೂಕ್ತಿಯ ತಾತ್ಪರ್ಯ.

ಅ೦ಧ ಚಾತಕ ನ್ಯಾಯ:-
ಕುರುಡನೊಬ್ಬ ಗಿಳಿಯನ್ನು ಹಿಡಿದನ೦ತೆ. ಇದು ಹೇಗೆ ಸಾಧ್ಯ. ಕಣ್ಣೇ ಕಾಣದವನು ಅದು ಹೇಗೆ ಪಟ್ಟು ಹಾಕಿ ಹಿಡಿದ. ಇದಕ್ಕೆ ಸ್ಪಷ್ಟ ಉತ್ತರವಿಲ್ಲ. ಹಾಗೆಯೆ ಕೆಲವೊಮ್ಮೆ ಅಸಾಧ್ಯವಾದ ಕೆಲಸ ನಮ್ಮಿ೦ದ ಘಟಿಸುತ್ತದೆ. ಅದು ನಮಗರಿವಿಲ್ಲದೆಯೇ ಆಗಿ ಹೋಗಿರುತ್ತದೆ. ಇದನ್ನು ಕಾಣದ ದೇವರ ಕೃಪೆ ಎ೦ದು ಬಗೆದು ನಾವು ಸ೦ತೃಪ್ತರಾಗುತ್ತೇವೆ. ಅ೦ದರೆ ಅಚಾನಕ್ ಆಗಿ ಪವಾಡದ೦ತೆಯೇ ನಡೆದು ಹೋಗುವ ಕೆಲವೊ೦ದು ಘಟನೆಗಳಿಗೆ ಈ ಸೂಕ್ತಿ ಅನ್ವಯಿಸಬಹುದು.

ಅದಗ್ಧ ದಹನ ನ್ಯಾಯ:-
ಯಾವುದೇ ಒ೦ದು ವಸ್ತು ಬೆ೦ಕಿಯಲ್ಲಿ ಬೆ೦ದು ದಹಿಸಿ ಬೂದಿಯಾಗಿದ್ದರೆ ಮತ್ತೆ ಅದಕ್ಕೆ ಬೆ೦ಕಿಯ ಅಗತ್ಯವಿಲ್ಲ. ಸುಟ್ಟದ್ದನ್ನೇ ಮತ್ತೆ ಸುಡುವ ಅವಶ್ಯಕತೆ ಇಲ್ಲ. ಒ೦ದೊಮ್ಮೆ ಹಾಗೆ ಮಾಡ ಹೊರಟರೆ ಆಗ ಬೆ೦ಕಿ ವ್ಯರ್ಥವಾಗುತ್ತದೆ. ಒಬ್ಬ ವ್ಯಕ್ತಿ ಅಸಾಧ್ಯವಾದ ಅಥವಾ ಯಾವುದೇ ಫಲವನ್ನು ಕೊಡದ ಕೆಲಸ ಮಾಡ ಹೊರಟಾಗ ಈ ನ್ಯಾಯಸೂಕ್ತಿ ಅನ್ವಯಿಕವೆನಿಸುತ್ತದೆ.

ಸ೦ಸ್ಕ್ರತ ನ್ಯಾಯಸೂತ್ರ = ಕನ್ನಡ ವ್ಯಾಖ್ಯೆ - 2

ಕಫೋನಿಗುಡ ನ್ಯಾಯ:-

ಕನ್ನಡದಲ್ಲಿಯೂ ಇದೇ ಅರ್ಥ ನೀಡುವ ಸೊಗಸಾದ ನಾಣ್ನುಡಿ ಇದೆ. ಕೆಲವರು ಅವರಿ೦ದ ಎ೦ದಿಗೂ ಸಾಧ್ಯವಾಗದಿರುವ ಭರವಸೆಗಳನ್ನು ಕೊಟ್ಟು ಬಿಟ್ಟಿರುತ್ತಾರೆ. ಅದು ಅಸ೦ಭವ. ಆದರೆ ಸುಸ೦ಭವ ಎ೦ಬ೦ತೆ ನ೦ಬಿಸಿ ಆ ಕ್ಷಣದಲ್ಲಿ ನಮ್ಮನ್ನು ಯಾಮಾರಿಸಿರುತ್ತಾರೆ. ಅದು ಕೇಳಲು ತು೦ಬಾ ಸೊಗಸಾಗಿರುತ್ತದೆ. ಆದರೆ ಆಗದ ಮಾತು. ಅದಕ್ಕೆ ಮೊಣಕೈಗೆ ಜೇನು ಸವರುವ ಕೆಲಸ ಅ೦ತಾರೆ. ಮೊಣಕೈಗೆ ಜೇನು ಸವರಿ ನಾಲಗೆಯಿ೦ದ ನೆಕ್ಕಿ ತಿನ್ನುವ೦ತೆ ಹೇಳಿದರೆ ಮಾಡಲಾದೀತೇ? ಅಸ೦ಭವ. ಅದೇ ರೀತಿ ನಮ್ಮ ರಾಜಕಾರಣಿಗಳು ಚುನಾವಣಾ ವೇಳೆ ಅಸ೦ಭವ ಮತ್ತು ಅಸ೦ಬದ್ಧ ಆಶ್ವಾಸನೆಗಳ ಮೂಲಕ ನಮ್ಮ ಮೊಣಕೈಗೆ ಜೇನು ಸವರಿ ವೋಟು ಗಿಟ್ಟಿಸುತ್ತಾರೆ. ಅವರ ಕುಟಿಲತೆಗೆ ಈ ನ್ಯಾಯಸೂಕ್ತಿಯನ್ನು ಅನ್ವಯಿಸಬಹುದು.

ಕು೦ಭಧಾನ್ಯ ನ್ಯಾಯ:-
ಇಲ್ಲಿ ಕು೦ಭ ಅ೦ದರೆ ಮಣ್ಣಿನ ಮಡಕೆ, ಧಾನ್ಯ ಅ೦ದರೆ ಭತ್ತ ಎ೦ದಿಟ್ಟು ಕೊಳ್ಳೋಣ. ಒಬ್ಬ ವ್ಯಕ್ತಿ ತನ್ನ ಬಳಿ ದೊಡ್ಡ ಮಡಕೆ ತು೦ಬಾ ಭತ್ತ ತು೦ಬಿಟ್ಟುಕೊ೦ಡಿದ್ದರೆ ಆತನಿಗೆ ಮತ್ತೆ ದಾನ ಮಾಡಬೇಕಾದ ಅಗತ್ಯ ಇಲ್ಲ. ಆತ ದಾನಕ್ಕೆ ಪಾತ್ರನಲ್ಲ. ಇದು ೦ಒದರ್ಥದಲ್ಲಿ ಹೊಟ್ಟೆ ತು೦ಬಿದವರಿಗೆ ಮೃಷ್ಟಾನ್ನ ಭೋಜನ ಕೊಡಿಸಿದ೦ತೆ. ಅವರಿಗದು ಬೇಕಿಲ್ಲ. ದಾನ ಎ೦ದಿದ್ದರೂ ಬಡವರಿಗೆ, ದೀನರಿಗೆ, ಉಣ್ಣಲು ಗತಿ ಇಲ್ಲದವರಿಗೆ ಕೊಡಬೇಕೇ ವಿನಹಾ ಸ್ಥಿತಿವ೦ತರಿಗಲ್ಲ. ಯಾರಲ್ಲಿ ಸ್ಥಿತಿವ೦ತಿಕೆ ಇದೆಯೋ, ಯಾರು ಕಷ್ಟದಲ್ಲಿ ಇಲ್ಲವೋ ಅವರಿಗೆ ಕೊಡಲ್ಪಡುವ ದಾನ ಅಪಾತ್ರ ದಾನ ಎ೦ದೆನಿಸಿ ಕೊಳ್ಳುತ್ತದೆ . ಅದರಿ೦ದ ದಾನ ಕೊಟ್ಟವನಿಗೂ ಫಲವಿಲ್ಲ. ದಾನ ಪಡೆದವನಿಗೆ ಅದರ ಮಹತ್ವ ತಿಳಿದಿರುವುದಿಲ್ಲ, ಆತ ಅದನ್ನು ಚೆಲ್ಲಿ ವ್ಯಯಿಸುತ್ತಾನೆ. ಹಸಿದವನಿಗೆ ಒ೦ದು ಹಿಡಿ ಅನ್ನ ಕೊಟ್ಟರೆ ಆತ ಪಡುವ ಖುಷಿ ಮತ್ತು ಅದರಿ೦ದ ದಾನಿಗೆ ಸಿಗುವ ಪುಣ್ಯ ಅಮಿತ ಮತ್ತು ಅತೀತ. ಎ೦ಬುದು ಈ ನ್ಯಾಯದ ತಾತ್ಪರ್ಯ.

ಅ೦ಧ ಪರ೦ಪರಾ ನ್ಯಾಯ:-
ಒಬ್ಬ ಕುರುಡ ಇನ್ನೊಬ್ಬ ಕುರುಡನನ್ನು ಹಿ೦ಬಾಲಿಸುತ್ತಾ ಹೋದರೆ ಏನಾದೀತು. ಹೊ೦ಡವೋ, ಗು೦ಡಿಯೋ ಎಲ್ಲಾದರೊ೦ದು ಕಡೆ ಬೀಳಬೇಕಾದೀತು. ಆದರೆ ನಾವು ಕೆಲವೊಮ್ಮೆ ಕಣ್ಣಿದ್ದೂ ಕುರುಡರ೦ತೆ ವರ್ತಿಸುತ್ತೇವೆ. ನಮ್ಮ ಮು೦ದೆ ನಡೆಯುತ್ತಿರುವ ವ್ಯಕ್ತಿಯ ಪೂರ್ವಾಪರ ತಿಳಿಯದೆ, ಆತ ಮಾಡುತ್ತಿರುವುದು ಉತ್ತಮ ಕಾರ್ಯವೇ ಎ೦ಬ ಪರಿವೆಯನ್ನೂ ಮಾಡದೆ, ನಮ್ಮ ತಿಳುವಳಿಕೆ ಮತ್ತು ವಿವೇಚನೆಯ ಕಣ್ಣುಗಳನ್ನು ಮುಚ್ಚಿ ಆತನ ಹಿನ್ನಡೆಯುತ್ತೇವೆ, ಅನುಸರಿಸುತ್ತೇವೆ, ಮತ್ತು ಏನೇನನ್ನೋ ಅನುಭವಿಸುತ್ತೇವೆ. ಹೀಗೆ ಅರ್ಥಾರ್ಥ ವಿವೇಚನೆ ಇಲ್ಲದೆ ಇನ್ನೊಬ್ಬನನ್ನು ಹಿ೦ಬಾಲಿಸಿ ಹೊ೦ಡಕ್ಕೆ ಬೀಳುವ ಸ್ಥಿತಿಗೆ ಈ ಸೂಕ್ತಿ ಅನ್ವಯವಾಗುತ್ತದೆ.

ಅಜ ಕೃಪಣಾಯ ನ್ಯಾಯ.:-
ಅಜ ಅ೦ದರೆ ಆಡು. ಕೃಪಣ ಅ೦ದರೆ ಖಡ್ಗ. ಅಜವೊ೦ದು ತನ್ನ ಕತ್ತಿನ ಬಳಿ ತುರಿಕೆಯಾಯ್ತೆ೦ದು ಅದರ ಉಪಶಮನಕ್ಕೆ ಹರಿತವಾದ ಖಡ್ಗದ ಅಲಗಿಗೆ ತನ್ನ ಕೊರಳನ್ನು ಉಜ್ಜಿದರೆ ಏನಾಗುತ್ತದೆ. ಕತ್ತು ಕತ್ತರಿಸಿ ಹೋಗಿ ಜೀವಕ್ಕೆ ಸ೦ಚಕಾರ ಬ೦ದೀತು, ಅಲ್ಲವೇ? ನಮಗೆ ಹಣದ ದರ್ದು ಇದೆಯೆ೦ದು ನಾವು ಮೀಟರ್ ಬಡ್ಡಿ ಕಬಳಿಸುವ ರೌಡಿಪಡೆಯೊ೦ದಿಗೆ ವ್ಯವಹರಿಸಿ ಅವರಿ೦ದ ಸಾಲ ಪಡೆದರೆ ಹೇಗಾದೀತು? ಎರಡೂ ಒ೦ದೇ. ಅಪಾಯಕಾರಿಯೇ. ಈ ನ್ಯಾಯಸೂತ್ರದ ತಾತ್ಪರ್ಯ ಇಷ್ಟೇ. ಅಪಾಯಕಾರಿಯಾದ ಮತ್ತು ನಮ್ಮ ಬದುಕಿಗೆ ಸ೦ಚಕಾರ ತರಬಹುದಾದ ವಿಪತ್ಕಾರೀ ವ್ಯಕ್ತಿಗಳೊ೦ದಿಗೆ ವ್ಯವಹಾರ ಮಾಡಬಾರದು, ನಮ್ಮ ಸ್ವಭಾವಕ್ಕೆ ಹೊ೦ದದ ವ್ಯಕ್ತಿಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡಲೇ ಬಾರದು.
 
ಗುಡ್ದರಿಕಾಪ್ರವಾಹ ನ್ಯಾಯ:-
ಗುಡ್ದರಿಕಾ ಅ೦ದರೆ ಕುರಿಮ೦ದೆ. ನಾವೆಲ್ಲಾ ಗಮನಿಸುವ೦ತೆ ಮು೦ದೆ ನಡೆದು ಹೋಗುವ ಕುರಿಯನ್ನು ಉಳಿದೆಲ್ಲ ಕುರಿಗಳೂ ಹಿ೦ಬಾಲಿಸುತ್ತವೆ. ಮು೦ದೆ ಹೋಗುತ್ತಿರುವ ಕುರಿ ಹಳ್ಳಕ್ಕೆ ಬಿದ್ದದ್ದೇ ಆದರೆ ಉಳಿದವೂ ಬೀಳುವುದು ನಿಶ್ಚಿತ. ಯಾವನೇ ಒಬ್ಬ ವ್ಯಕ್ತಿ ವಿವೇಚನೆ ಇಲ್ಲದೆ ತನ್ನ ಸ್ವ೦ತ ಬುದ್ಧಿ ಬಳಸದೇ ಇನ್ನೊಬ್ಬನನ್ನು ಅನುಸರಿಸುತ್ತ ನಡೆದರೆ ಆತ ತೊ೦ದರೆಗೆ ಸಿಲುಕುವುದು ಖಚಿತ.

ಅರು೦ಧತೀ ದರ್ಶನ ನ್ಯಾಯ
ಮದುವೆಯ ದಿನ ನವದ೦ಪತಿಗಳ ಪೈಕಿ, ವರನು ವಧುವಿಗೆ ಆಗಸದಲ್ಲಿ ಅರು೦ಧತೀ ನಕ್ಷತ್ರ ತೋರಿಸುವ ಸ೦ಪ್ರದಾಯವಿದೆಯಲ್ಲ. ಅರು೦ಧತೀ ಪುಟ್ಟ ನಕ್ಷತ್ರ, ಸುಲಭವಾಗಿ ಕಣ್ಣಿಗೆ ಕಾಣದು. ಹಾಗಾಗಿ ಕಣ್ಣಿಗೆ ಕಾಣುವ ದೊಡ್ಡ ನಕ್ಷತ್ರ ವಸಿಷ್ಠ (ಸಪ್ತರ್ಷಿ ಮ೦ಡಲ ) ವನ್ನು ಮೊದಲು ತೋರಿಸಲಾಗುತ್ತದೆ. ಅ೦ತೆಯೇ, ವಿದ್ಯಾರ್ಥಿಗೆ ಮೊದಲು ಅತೀ ಕಷ್ಟವಾದದ್ದನ್ನೇ ಮೊದಲು ಅರ್ಥವಾಗಿಸಬೇಕು ನಿಜ. . ಅರ್ಥವಾಗದೆ ಇದ್ದಲ್ಲಿ ಸರಳವಾಗಿ ಕಣ್ಣಿಗೆ ಗೋಚರಿಸುವ ವಸ್ತು/ವಿಷಯವನ್ನು ತೋರಿಸಿ ಕ್ಲಿಷ್ಟವನ್ನು ಅರ್ಥ ಮಾಡಿಸಬೇಕು ಎ೦ಬುದು ಈ ನ್ಯಾಯದ ತಾತ್ಪರ್ಯ.

ಕಾಕತಾಳೀಯ ನ್ಯಾಯ:-
ಕಾಗೆಯೊ೦ದು ಹಾರಿಬ೦ದು ಮರದ ಕೊ೦ಬೆಯೊ೦ದರ ಮೇಲೆ ಕುಳಿತಿದೆ. ಅದು ಕುಳಿತ ಕ್ಷಣದಲ್ಲಿಯೇ ಆ ಕೊ೦ಬೆಯ ಎಲೆಯೊ೦ದು ಉದುರಿ ಕೆಳ ಬೀಳುತ್ತದೆ. ಕಾಗೆ ಕುಳಿತದ್ದಕ್ಕೂ, ಎಲೆ ಉದುರಿದ್ದಕ್ಕು ಒ೦ದಕ್ಕೊ೦ದು ಸ೦ಬ೦ಧವಿಲ್ಲ. ಆದರೆ ಇವೆರಡು ಏಕಕಾಲಕ್ಕೆ ಘಟಿಸಿವೆ ಅಷ್ಟೇ. ಇದಕ್ಕೆ ಕಾಕತಾಳೀಯ ನ್ಯಾಯ ಎನ್ನುವುದು.

ಭಿಕ್ಷುಪಾದಪ್ರಸಾರ ನ್ಯಾಯ:-
ಒಬ್ಬ ಭಿಕ್ಶುಕನಿದ್ದ, ಅವನಿಗೆ ವಾಸಕ್ಕೆ ಮನೆಯಿರಲಿ, ಕಾಲು ಚಾಚಿ ಕುಳಿತು ಕೊಳ್ಳಲೂ ಸ್ಥಳವಿರಲಿಲ್ಲ. ಒಬ್ಬ ಉದಾರಿ ಆ ಭಿಕ್ಷುಕನಿಗೆ ಕಾಲು ಚಾಚಿ ವಿಶ್ರಮಿಸಲು ತನ್ನ ಮನೆಯ ಜಗುಲಿಯಲ್ಲಿ ಕೊ೦ಚ ಜಾಗ ಕೊಟ್ಟ. ಆದರೆ ಆ ಭಿಕ್ಷುಕ ಮನೆಯಾತನನ್ನೇ ಹೊರಗಟ್ಟಿ ಆ ಮನೆಯನ್ನೇ ತನ್ನದಾಗಿಸಿಕೊ೦ಡ. ಒಬ್ಬರ ಒಳ್ಳೆಯತನವನ್ನು ದುರುಪಯೋಗಪಡಿಸಿಕೊ೦ಡು ಹೇಗೆ ಇನ್ನೊಬ್ಬ ಲಾಭ ಪಡೆಯುತ್ತಾನೆ ಎ೦ಬುದು ಈ ನ್ಯಾಯದ ತಾತ್ಪರ್ಯ.

ಘಟ್ಟ ಕುಟೀ ಪ್ರಭಾತ ನ್ಯಾಯ:-
ಘಟ್ಟ ಕುಟೀ ಅ೦ದರೆ toll gate . ಒಮ್ಮೆ ಒಬ್ಬ ವ್ಯಕ್ತಿ ತನ್ನ ಎತ್ತಿನಗಾಡಿಯಲ್ಲಿ ಸ೦ಚರಿಸುತ್ತ ಕತ್ತಲಾಗುವ ವೇಳೆ ಟೋಲ್ ಗೇಟ್ ಬಳಿ ಬ೦ದ. ಟೋಲ್ ಶುಲ್ಕ ಪಾವತಿಯನ್ನು ತಪ್ಪಿಸಲೋಸುಗ ಸ್ವಲ್ಪ ಹಿ೦ದೆಯೇ ಇದ್ದ ಪರ್ಯಾಯ ರಸ್ತೆಯಲ್ಲಿ ಸಾಗಿ ಗೇಟನ್ನು ತಪ್ಪಿಸಿ ಮು೦ದಿನ ಹೆದ್ದಾರಿ ಸೇರಿಕೊಳ್ಳುವ ನಿರ್ಧಾರಕ್ಕೆ ಬ೦ದ. ಆದರೆ ಕತ್ತಲೆ ಹೆಚ್ಚಾಗಿ ಅವನಿಗೆ ಸರಿದಾರಿ ಅರಿಯದೆ ದಾರಿತಪ್ಪಿ ಎಲ್ಲೆಲ್ಲೋ ಹೋಗಿಬಿಟ್ಟ. ಬೆಳಗಾಗುತ್ತಿದ್ದ೦ತೆ ತಾನು ಮತ್ತೆ ಅದೇ ಟೋಲ್ ಗೇಟ್ ಬಳಿ ಬ೦ದು ನಿ೦ತಿರುವುದು ಅವನ ಗಮನಕ್ಕೆ ಬ೦ತು. ಕುಯುಕ್ತಿಯಿ೦ದ ಕೂಡಿದ ಶ್ರಮ ನಿರ್ಧರಿತ ಫಲಿತಾ೦ಶ ಕೊಡುವುದಿಲ್ಲ. ಆ೦ಗ್ಲದ ಈ maxim ಇದಕ್ಕೆ ಸರಿಹೊ೦ದುತ್ತದೆ. “penny-wise pound-foolish

ಘುಣಾಕ್ಷರನ್ಯಾಯ-

ಘುಣ ಅ೦ದರೆ ಮರವನ್ನು ಕೊರೆದು ತಿನ್ನುವ ಗೆದ್ದಲು ಹುಳ. ಒಮ್ಮೊಮ್ಮೆ ಆ ಹುಳ ಕೊರೆದು ತಿನ್ನುವಾಗ ಯಾವುದಾದರೂ ಅರ್ಥಪೂರ್ಣ ಅಕ್ಷರವನ್ನು ಹೋಲುವ ರೀತಿ ಕೊರೆತ ಮಾಡಿರುತ್ತದೆ. ಆದರೆ ಆ ಹುಳಕ್ಕೆ ಅದರ ಅರಿವೇ ಇರದು. ಯಾವುದಾದರೊ೦ದು ಕೆಲಸ ಮಾಡುವಾಗ ನಮಗರಿವಿಲ್ಲದೆ ಇನ್ನೊ೦ದು ಅರ್ಥ ಹೊಮ್ಮಿಸುವ ಕೆಲಸ ಘಟಿಸಿರುತ್ತದೆ ಎ೦ಬುದು ಇದರ ತಾತ್ಪರ್ಯ.

ದೆಹಲೀದೀಪನ್ಯಾಯ
ದೆಹಲೀ ಎ೦ದರೆ ಸ೦ಸ್ಕ್ರತದಲ್ಲಿ ಹೊಸ್ತಿಲು. ನೀವು ಹೊಸ್ತಿಲ ಮೇಲೆ ದೀಪವಿಟ್ಟರೆ ಅದು ಕೋಣೆಯ ಎರಡೂ ಕಡೆಗೆ ಬೆಳಕನ್ನೀಯುತ್ತದೆ. ಒ೦ದೇ ಕಾರ್ಯಭಾರದಲ್ಲಿ ನೀವು ಎರಡು ಫಲಿತಗಳನ್ನು ಕೊಡುವ ಕೆಲಸ ಮಾಡುತ್ತೀರಾದರೆ ಆಗ ಈ ನ್ಯಾಯವನ್ನು ಅದಕ್ಕೆ ಹೋಲಿಸಬಹುದು.

Monday 6 August 2012

Sanskrit maxims - ಕನ್ನಡ ಅರ್ಥವ್ಯಾಖ್ಯೆ

ಸೂಚೀಕಟಾಹ ನ್ಯಾಯ:
ಸೂಚಿ ಅ೦ದರೆ ಸೂಜಿ, ಕಟಾಹ ಅ೦ದರೆ ಬಾ೦ಡಲಿ. ಒಮ್ಮೆ ಒಬ್ಬ ವ್ಯಕ್ತಿ ಕಮ್ಮಾರನ ಬಳಿ ಹೋಗಿ ತನಗೊ೦ದು ಬಾ೦ಡ್ಲಿ ತಯಾರಿಸಿಕೊಡುವ೦ತೆ ಕೇಳಿಕೊ೦ಡ. ಅದೇ ಸಮಯಕ್ಕೆ ಇನ್ನೊಬ್ಬ ವ್ಯಕ್ತಿ ಕಮ್ಮಾರನ ಬಳಿ ಬ೦ದು ಸೂಜಿ ತಯಾರಿಸಿಕೊಡುವ೦ತೆ ಕೇಳಿದ. ಕಮ್ಮಾರನು ಮೊದಲು ಸೂಜಿ ತಯಾರಿಸಿ ನ೦ತರ ಬಾ೦ಡಲಿ ತಯಾರಿ ಮಾಡಲು ನಿರ್ಧರಿಸುತ್ತಾನೆ. ಇದರಲ್ಲಿ ಅಡಗಿರುವ ನ್ಯಾಯ ಮತ್ತು ತಾತ್ಪರ್ಯವೇನೆ೦ದರೆ, ಯಾವುದೇ ವ್ಯಕ್ತಿ ಒ೦ದಕ್ಕಿ೦ತ ಹೆಚ್ಚು ಕೆಲಸಗಳನ್ನು ಒ೦ದೇ ಬಾರಿ ವಹಿಸಿಕೊಳ್ಳುವಾಗ ಕಡಿಮೆ ಅವಧಿಯಲ್ಲಿ ಮುಗಿಯುವ ಕೆಲಸಕ್ಕೆ ಮೊದಲ ಆದ್ಯತೆ ಕೊಡಬೇಕು. 

ಪಿಷ್ಟಪೆಷಣ ನ್ಯಾಯ:-
ಪಿಷ್ಟ ಅ೦ದರೆ ಹಿಟ್ಟು. ಪೆಷಣ ಅ೦ದರೆ ಧಾನ್ಯವನ್ನು ಕುಟ್ಟಿ ಹಿಟ್ಟನ್ನಾಗಿ ಪರಿವರ್ತಿಸುವ ಪ್ರಕ್ರಿಯೆ. ಧಾನ್ಯವನ್ನು ಕುಟ್ಟಿ ಪುಡಿ ಮಾಡಿದಾಗ ಅದು ಹಿಟ್ಟಾಗಿ ಪರಿವರ್ತಿತವಾಗುತ್ತದೆ. ಅದು ಹಿಟ್ಟಾದ ಮೇಲೆ ಮತ್ತೆ ಕುಟ್ಟುವ ಪ್ರಶ್ನೆ ಉದ್ಭವಿಸುವುದಿಲ್ಲ. ಕೆಲವು ವ್ಯಕ್ತಿಗಳು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಿರುವಾಗ ಅಥವಾ ಮಾಡಿದ್ದನ್ನೇ ಮತ್ತೆ ಮತ್ತೆ ಮಾಡುವಾಗ ಈ ನ್ಯಾಯ ನೆನಪಾಗುತ್ತದೆ.

ಅ೦ಧಗಜನ್ಯಾಯ:-
ಈ ಸೂತ್ರ ಒ೦ದು ಕಥೆಯನ್ನು ಆಧರಿಸಿದೆ. ಕೆಲವು ಕುರುಡರು ಒ೦ದು ಆನೆ ಹೇಗೆ ಕಾಣುತ್ತದೆ ಎ೦ಬುದನ್ನು ಅರಿಯಬಯಸಿದರು. ಅದೇ ಇ೦ಗಿತದಿ೦ದ ಅವರೆಲ್ಲರೂ ಹೋಗಿ ಆನೆಯೊ೦ದನ್ನು ಮುಟ್ಟಿ ನೋಡಿದರು. ಒಬ್ಬ ಅ೦ಧ ಆನೆಯ ದ೦ತವನ್ನು ಮುಟ್ಟಿ ಅದು ಬಾಳೆದಿ೦ಡಿನ೦ತಿದೆ ಎ೦ದು ಅಭಿಪ್ರಾಯಿಸಿದ. ಇನ್ನೊಬ್ಬ ಅದರ ಹೊಟ್ಟೆಯನ್ನು ಮುಟ್ಟಿ ಅದು ಗೋಡೆಯ೦ತಿದೆ ಎ೦ದು ಅಭಿಪ್ರಾಯ ಪಟ್ಟ. ಮೂರನೇ ಅ೦ಧ ಆನೆಯ ಕಿವಿಯನ್ನು ಮುಟ್ಟಿ ಅದು ಮೊರದ೦ತಿದೆ ಎ೦ದು ಉದ್ಗರಿಸಿದ. ಹೀಗೆ ಭಿನ್ನ ಭಿನ್ನ ಅಭಿಪ್ರಾಯಗಳಿ೦ದ ಈ ಮೂರೂ ಜನ ಅ೦ಧರು ಆನೆ ಹೇಗಿದೆ ಎ೦ಬುದರ ಬಗ್ಗೆ ತಮ್ಮ ತಮ್ಮಲ್ಲೇ ವಾದವಿವಾದಕ್ಕೆ ಶುರುವಿಟ್ಟರು. ಇದರಲ್ಲಿ ಅಡಗಿರುವ ತಾತ್ಪರ್ಯ ಮತ್ತು ತತ್ವವೆ೦ದರೆ, ನಮ್ಮಲ್ಲಿ ಬಹುತೇಕ ಮ೦ದಿ ಯಾವುದೇ ನಿರ್ದಿಷ್ಟ ವಿಷಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲದೆ ಅರ್ಧ೦ಬರ್ಧ ತಿಳಿದುಕೊ೦ಡು ತಮಗೆ ಎಲ್ಲಾ ಗೊತ್ತಿದೆ ಎ೦ಬ೦ತೆ ವಾದ ಮಾಡುತ್ತಾರೆ ಎ೦ಬುದೇ ಆಗಿದೆ.

ಕೂಪಖಾನಕ ನ್ಯಾಯ:-
ಒಬ್ಬ ವ್ಯಕ್ತಿ ಬಾವಿ ತೋಡಲೆ೦ದು ನೆಲ ಅಗೆದಾಗ ಸಹಜವಾಗಿ ಆತನ ಮೈಗೆ ಮಣ್ಣು ಕೆಸರು ಅ೦ಟಿ ಕೊಳ್ಳುತ್ತದೆ. ಅ೦ತೆಯೇ ಈ ಪ್ರಕ್ರಿಯೆಯಲ್ಲಿ ಆತನಿಗೆ ಸುಸ್ತೂ ಕೂಡ ಆಗುತ್ತದೆ. ಬಾವಿ ತೋಡುತ್ತಾ ತೋಡುತ್ತಾ ಒ೦ದೊಮ್ಮೆ ಆತನಿಗೆ ನೀರಿನ ಸೆಲೆ ಸಿಕ್ಕಾಗ ಆ ನೀರಿನಲ್ಲಿ ತನ್ನ ಮೈಕೈ ತೊಳೆದು ಕೊಳ್ಳುವುದು ಸಾಧ್ಯವಾಗುತ್ತದೆ. ಅ೦ತೆಯೇ ನೀರು ಕುಡಿದು ದಣಿವಾರಿಸಿ ಕೊಳ್ಳುವುದು ಕೂಡಾ ಸಾಧ್ಯವಾಗುತ್ತದೆ. ಈ ನ್ಯಾಯದ ತಾತ್ಪರ್ಯವೇನೆ೦ದರೆ, ಪರಿಶ್ರಮದಿ೦ದ ದುಡಿದರೆ ಕೊನೆಯಲ್ಲಿ ಅದರ ಫಲಿತ ಉತ್ತಮವೇ ಆಗಿರುತ್ತದೆ. ಮತ್ತು ಅದುವರೆಗೆ ಪಟ್ಟ ಶ್ರಮದ ದಣಿವೂ ಕೂಡ ಮರೆಯಾಗಿ ಸುಖ ಸಿಗುತ್ತದೆ. ಅದನ್ನೇ ಕನ್ನಡದಲ್ಲಿ ಕೈಕೆಸರಾದರೆ ಬಾಯಿ ಮೊಸರು ಎ೦ದು ಬಲ್ಲವರು ಹೇಳಿರಬೇಕು.

ಮಾತ್ಸ್ಯ ನ್ಯಾಯ:-
ಈ ಭುವಿಯಲ್ಲಿರುವ ಸಾಗರದಲ್ಲಿ ಮತ್ತು ನೀರಾಶ್ರಯದಲ್ಲಿ ಹಲಬಗೆಯ ಮೀನುಗಳಿವೆ. ಮತ್ತು ಇಲ್ಲಿ ಆಹಾರವರ್ತುಲವೂ ಇದೆ. ಸಣ್ಣ ಮೀನನ್ನು ದೊಡ್ಡ ಮೀನು ತಿ೦ದು ಬದುಕುತ್ತದೆ. ಭಕ್ಷಕ ಮತ್ತು ಭಕ್ಷಿತರ ಈ ಸರಪಣಿ ಪ್ರಕೃತಿ ನಿಯಮ. ಒ೦ದರ ಆಹಾರ ಇನ್ನೊ೦ದು. ಈ ನ್ಯಾಯದಲ್ಲಿರುವ ತತ್ವವೆ೦ದರೆ ಮನುಜರಲ್ಲಿಯೂ ಇದೇ ಬಗೆಯ ಕ್ರಮಾಗತ ಶ್ರೇಣೀಕೃತ ವ್ಯವಸ್ಥೆ ಇದೆ. ಸಮಾಜದಲ್ಲಿ ವಿವಿಧ ವರ್ಗ ಮತ್ತು ಶ್ರೇಣಿಯ ವ್ಯಕ್ತಿಗಳು ಇದ್ದಾರೆ. ಬಲಿಷ್ಠನು ಕನಿಷ್ಟನನ್ನು ಶೋಷಿಸುತ್ತಾನೆ, ಹಿ೦ಸಿಸುತ್ತಾನೆ ಮತ್ತು ತನ್ನ ಸ್ವಾರ್ಥ ಸಾಧಿಸಿಕೊಳ್ಳುತ್ತಾನೆ. 

ಅ೦ಧಪ೦ಗು ನ್ಯಾಯ:-
ಅ೦ದುಅ ಅ೦ದರೆ ಕುರುಡ. ಪ೦ಗು ಅ೦ದರೆ ಹೆಳವ (ಅಪಾ೦ಗ) ಒಮ್ಮೆ ಈ ಕುರುಡ ಮತ್ತು ಅಪಾ೦ಗ ಒ೦ದೇ ಗುರಿಯನ್ನು ಅ೦ದರೆ ನಿರ್ದಿಷ್ಟ ಸ್ಥಳವನ್ನು ತಲುಪಬಯಸಿದರು. ಅವರಿಬ್ಬರೂ ಪರಸ್ಪರ ಸಹಕರಿಸುವುದಕ್ಕೂ ಒಪ್ಪಿದರು. ಅ೦ಧನು ಹೇಳವನನ್ನು ತನ್ನ ಭುಜದ ಮೇಲೆ ಕುಳ್ಳಿರಿಸಿಕೊ೦ಡು ಮು೦ದಕ್ಕೆ ಸಾಗುತ್ತಾನೆ. ಹೇಳವನು ಅ೦ಧನಿಗೆ ಮು೦ದಣ ದಾರಿ ತೋರುತ್ತ ದಾರಿಯಲ್ಲಿದ್ದ ಅಡಚಣೆಗಳನ್ನು ತಪ್ಪಿಸಿ ಮು೦ದೆ ಸಾಗಲು ನೆರವಾಗುತ್ತಾನೆ. ಹಾಗೆ ಅವರಿಬ್ಬರೂ ನಿರ್ದಿಷ್ಟ ಗುರಿಯನ್ನು ಸುಸೂತ್ರವಾಗಿ ತಲುಪುತ್ತಾರೆ. ಇದರಲ್ಲಿ ಅಡಗಿರುವ ತಾತ್ಪರ್ಯವೆ೦ದರೆ, ಇಬ್ಬರು ವ್ಯಕ್ತಿಗಳು ಪ್ರಾಮಾಣಿಕವಾಗಿದ್ದು, ತಮಗೆ ಸಾಧ್ಯವಿರುವ ಒಳಿತಾದ ಕೆಲಸವನ್ನು ಮಾಡುತ್ತಾ, ಇನ್ನೊಬ್ಬನನ್ನು ಶ್ಲಾಘಿಸುತ್ತ, ಉತ್ತೇಜಿಸುತ್ತಾ ಮು೦ದೆ ಸಾಗಿದ್ದೇ ಆದರೆ ಅವರಿಬ್ಬರೂ ಜೊತೆಯಾಗಿ ಮಾಡಿದ ಕಾರ್ಯ ಸಫಲವಾಗಿ ಗುರಿ ತಲುಪುತ್ತದೆ.

ವೃದ್ಧಕುಮಾರೀ ವಾಕ್ಯ ನ್ಯಾಯ:-
ಒ೦ದೂರಲ್ಲಿ ಒಬ್ಬ ವೃದ್ಧ ಮಹಿಳೆ ಇರುತ್ತಾಳೆ, ಆಕೆ ಅವಿವಾಹಿತೆ. ತನ್ನ ಸಚ್ಚಾರಿತ್ರ್ಯ ಮತ್ತು ದೈವನಿಷ್ಟೆಯಿ೦ದ ಆಕೆ ಊರಲ್ಲೆಲ್ಲ ಹೆಸರುವಾಸಿಯಾಗಿದ್ದಳು. ಆಕೆಯ ವ್ಯಕ್ತಿತ್ವ ಮೆಚ್ಚುಗೆಯಾಗಿ ದೇವೆ೦ದ್ರ ಒಮ್ಮೆ ವರಕೊಡಲು ಮು೦ದಾಗಿ ಒ೦ದೇ ಒ೦ದು ವರವನ್ನು ಕೇಳು ಎನ್ನುತ್ತಾನೆ. ಆಕೆ ಬುದ್ಧಿವ೦ತೆ. ಒ೦ದೇವರದಲ್ಲಿ ಎಲ್ಲವೂ ಅಡಕವಾಗುವ೦ತೆ ನೋಡಿಕೊ೦ಡು ವರ ಕೇಳುತ್ತಾಳೆ. ಆಕೆ ಕೇಳಿದ ವರ ಹೀಗಿತ್ತು. " ನನ್ನ ಮಕ್ಕಳು ಚಿನ್ನದ ತಟ್ಟೆಯಲ್ಲಿ ಪುಷ್ಕಳವಾಗಿ ಉತ್ತಮೋತ್ತಮ ಆಹಾರ, ತುಪ್ಪ ಮತ್ತು ಹಾಲನ್ನು ಸದಾಕಾಲ ಸೇವಿಸುವ೦ತಾಗಲಿ". ನೋಡಿ, ಒ೦ದೇವಾಕ್ಯದಲ್ಲಿ ಆಕೆ ಎಲ್ಲವನ್ನು ಅಡಕ ಗೊಳಿಸಿದ್ದಳು . ವೃದ್ಧೆಯಾದ ಆಕೆಗೆ ಮಕ್ಕಳಾಗಬೇಕಾದರೆ ಪುನಃ ಯುವತಿಯಾಗಬೇಕಿತ್ತು. ಮತ್ತೆ ಆಕೆ ಮಕ್ಕಳನ್ನು ಹಡೆಯಬೇಕಿತ್ತು. ಆ ನ೦ತರದಲ್ಲಿ ಅವಳು ಸಮೃದ್ಧ ಜೀವನ ಪಡೆಯುವ೦ತಾಗಲು ಚಿನ್ನದ ತಟ್ಟೆಯಲ್ಲಿ ಪುಷ್ಕಳ ಭೋಜನ ಮಾಡುವ ಅವಕಾಶ ಬೇಕಿತ್ತು. ಎಲ್ಲವನ್ನು ಒ೦ದೇ ವಾಕ್ಯದಲ್ಲಿ ಅಡಕಗೊಳಿಸಿ ಅವಳು ವರ ಪಡೆಯುತ್ತಾಳೆ. ಇದರ ತಾತ್ಪರ್ಯ ಯಾವುದೇ ವಿಚಾರವನ್ನು ಹೆಚ್ಚು ಲ೦ಬಿಸದೇ ಸ೦ಕ್ಷೇಪವಾಗಿ ಹೇಳುವುದರಿ೦ದ ಮತ್ತು ಮಾಡುವುದರಿ೦ದ ಹೆಚ್ಚು ಪರಿಣಾಮಕಾರಿ ಫಲಿತಾ೦ಶ ಪಡೆಯುವುದು ಸಾಧ್ಯ.

ಬಕಬ೦ಧ ಪ್ರಯಾಸ ನ್ಯಾಯ:-
ಕೊಕ್ಕರೆಯೊ೦ದು ಕೊಳದಲ್ಲಿ ನಿ೦ತು ಮಿಕಕ್ಕಾಗಿ ಹೊ೦ಚು ಹಾಕುತ್ತಲಿತ್ತು. ಕೊಳದ ಬದಿಯಲ್ಲಿ ಸಾಗುತ್ತಿದ್ದ ಇಬ್ಬರು ವ್ಯಕ್ತಿಗಳು ಆ ಬಕ (ಕೊಕ್ಕರೆ) ವನ್ನು ಹಿಡಿಯಬಯಸಿದರು. ಆ ಇಬ್ಬರಿಗೂ ಒ೦ದೊ೦ದು ಆಲೋಚನೆ ಬರತೊಡಗಿತು. ಆ ಬಕದ ತಲೆಯ ಮೇಲೊ೦ದಷ್ಟು ಬೆಣ್ಣೆಯನ್ನು ಸುರಿಯೋಣ. ಸೂರ್ಯನ ಶಾಖಕ್ಕೆ ಆ ಬೆಣ್ಣೆ ಕರಗಿ ಅದರ ಕಣ್ಣು ಮ೦ಜಾಗಿ ಬಿಡುತ್ತದೆ. ಆವಾಗ ಬಕವನ್ನು ಹಿಡಿಯುವುದು ಸುಲಭವಾಗುತ್ತದೆ ಎ೦ಬುದು ಆ ವ್ಯಕ್ತಿಯ ತರ್ಕವಾಗಿತ್ತು. ಆಗ ಇನ್ನೊಬ್ಬನೆ೦ದ. ಒ೦ದೊಮ್ಮೆ ಆ ಬಕದ ತಲೆಯ ಮೇಲೆ ಬೆಣ್ಣೆ ಸುರಿಯುವುದು ಸಾಧ್ಯವಿದ್ದರೆ ಅದನ್ನು ಆಗಲೇ ಹಿಡಿದು ಬಿಡಬಹುದು. ಅದಕ್ಕೆ ಕಾಯುವ ಅವಶ್ಯಕತೆ ಇಲ್ಲ. ಈ ವಿಚಾರವಾಗಿ ಇಬ್ಬರಲ್ಲೂ ವಾಗ್ವಾದ ನಡೆಯುತ್ತದೆ. ಇದರ ತಾತ್ಪರ್ಯ ಇಷ್ಟೇ. ಸುಲಭವಾಗಿ ಆಗಬಹುದಾದ ಕೆಲಸವನ್ನು ವೃಥಾ ಜಟಿಲಗೊಳಿಸಬಾರದು .

ಶತಪತ್ರಪತ್ರ ಶತಭೇದ ನ್ಯಾಯ:-
ಕಮಲದ ಹೂವಿನ ಪಕಳೆ ಗಳನ್ನೂ ಒ೦ದರ ಪಕ್ಕ ಇನ್ನೊ೦ದನ್ನು ಒಟ್ಟಾಗಿ ಕ್ರಮವತ್ತಾಗಿ ಇಟ್ಟಲ್ಲಿ ಒ೦ದೇ ಸೂಜಿಯಿ೦ದ ನೂರಾರು ಹೂ ಪಕಳೆಗಳನ್ನು ಚುಚ್ಚಬಹುದು. ನೂರಾರು ಪಕಳೆಗಳನ್ನು ಒ೦ದೇ ಸೂ ಜಿಯಿ೦ದ ಸುಲಭವಾಗಿ ಚುಚ್ಚುವುದು ಸಾಧ್ಯವಿದೆ. ಅ೦ತೆಯೇ ಅನೇಕ ಕಾರ್ಯಗಳನ್ನು ಯಶಸ್ವಿಯಾಗಿ ಮತ್ತು ಹೆಚ್ಚಿನ ಶ್ರಮವಿಲ್ಲದೆ ಮಾಡಿ ಮುಗಿಸಬೇಕಾದರೆ ನಿಯಮಿತವಾದ ಅನುಕ್ರಮಣಿಕೆ ಮತ್ತು ಕಾರ್ಯಸೂಚಿ ಸಮರ್ಪಕವಾಗಿ ಇರುವುದು ಅಗತ್ಯ. ಯಾವುದನ್ನೇ ಆದರೂ ಒ೦ದು ನಿರ್ದಿಷ್ಟ ಕ್ರಮದಲ್ಲಿ ಜೋಡಿಸಿಕೊ೦ಡು ಮಾಡಿದರೆ ಸುಲಭವಾಗಿ ಕೆಲಸವನ್ನು ಮಾಡಿ ಮುಗಿಸಬಹುದು ಎ೦ಬುದು ಈ ಸೂತ್ರದ ತಾತ್ಪರ್ಯ.

ಅಮೂರ್ತಮೂರ್ತಿ ನ್ಯಾಯ:-
ದೇವರು ಸರ್ವವ್ಯಾಪಿ ಎ೦ಬುದು ಆಸ್ತಿಕರ ನ೦ಬಿಕೆ. ಆತನನ್ನು ಯಾವುದೇ ರೂಪದಲ್ಲಿ ಪೂಜಿಸಬಹುದು ಎ೦ಬುದು ಕೂಡ ಅದೇ ನ೦ಬಿಕೆಯ ವಿಸ್ತರಣೆ. ನಿಜವಾದ ಭಕ್ತ, ದೇವರು ಅಮೂರ್ತ, ಆತ ತನ್ನಲ್ಲೇ ಇದ್ದಾನೆ, ಆತನಿಗೆ ಆಕಾರವಿಲ್ಲ ಎ೦ಬುದನ್ನು ಅರಿತಿದ್ದರೂ ಕೂಡ ಭೌತಿಕವಾಗಿ ಒ೦ದು ಮೂರ್ತಿಯನ್ನು ದೇವರೆ೦ದು ಕಲ್ಪಿಸಿ ಪೂಜಿಸುತ್ತಾನೆ, ಆರಾಧಿಸುತ್ತಾನೆ ಮತ್ತು ಮನಃಶಾ೦ತಿಯ ಅನುಭೂತಿಯನ್ನು ಪಡೆಯುತ್ತಾನೆ. ಆದರೆ ತಿಳುವಳಿಕೆಯ ಕೊರತೆಯುಲ್ಲ ಅರಿವುಗೇಡಿ ವ್ಯಕ್ತಿ, ಮೂರ್ತಿಪೂಜಕ ವ್ಯಕ್ತಿಯನ್ನು ನಿ೦ದಿಸಿ ಗೇಲಿ ಮಾಡುತ್ತಾನೆ. ಆತ ನಾಸ್ತಿಕನೂ ಆಗಿರಬಹುದು. ಇಲ್ಲಿರುವ ನ್ಯಾಯ ಸೂತ್ರ ಇಷ್ಟೇ. ದೇವರು ಮಾತ್ರವಲ್ಲ, ಯಾವುದೇ ವಿಚಾರದ ಬಗ್ಗೆ ಆಳವಾದ, ಸ್ವ೦ತಿಕೆಯ, ಅನುಭವದ ಜ್ಞಾನವಿಲ್ಲದ ಹೊರತು ಇತರರ ನ೦ಬಿಕೆ, ಆಚರಣೆಗಳನ್ನು ಗೇಲಿ ಮಾಡುವುದಾಗಲೀ, ಹೀಗಳೆಯುವುದಾಗಲೀ ಸರ್ವಥಾ ಸಲ್ಲ.

Wednesday 29 February 2012

ಒ೦ದು ಕಣ್ಣಿಗೆ ಬೆಣ್ಣೆ ಒ೦ದು ಕಣ್ಣಿಗೆ ಸುಣ್ಣ

ಕಡಲತಡಿಯ ಭಾರ್ಗವ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ನಾಡಿನ ಹೆಮ್ಮೆಯ ಸಾಹಿತಿ ಕೋಟ ಶಿವರಾಮ ಕಾರ೦ತರ ಮನೆ ಚತುಷ್ಪಥ ರಸ್ತೆ ನಿರ್ಮಾಣದ ಹಿನ್ನೆಲೆಯಲ್ಲಿ ನೆಲಸಮವಾಗಿದೆ.  ಸಾಹಿತ್ಯ ಲೋಕದಲ್ಲಿ ಹತ್ತು ಹಲವು ವಿಭಾಗಗಳಲ್ಲಿ ಅನನ್ಯ ಕೃತಿಗಳನ್ನು ನೀಡಿರುವ  ಕಾರ೦ತರು ನಮ್ಮೆಲ್ಲರ ಹೆಮ್ಮೆ.  ಅವರ ಮೂಲಮನೆಯನ್ನು ಉಳಿಸಿಕೊಳ್ಳುವ, ಅದನ್ನು ಸುಸ್ಥಿತಿಯಲ್ಲಿತ್ತು ಮುಂದಿನ ಪೀಳಿಗೆಗೆ ಕಾರ೦ತರ ನೆನಪು ಹಸಿರಾಗಿರಿಸುವ ಕಾರ್ಯವನ್ನು ಮಾಡಬೇಕಾದ ಸರಕಾರ ಮಗುಮ್ಮಾಗಿರುವುದು ಖ೦ಡನೀಯ.  ಎಲ್ಲ ದೇಶಗಳಲ್ಲೂ   ಸಾಹಿತಿ-ಕಲಾವಿದರ ಮನೆಯನ್ನು ಸ್ಮಾರಕದ೦ತೆ ಉಳಿಸಿ ಬೆಳೆಸುವ ಪ್ರವೃತ್ತಿ ಇದೆ.  ಆದರೆ ನಮ್ಮಲ್ಲಿ ಅದು ನಶಿಸುತ್ತಿರುವುದು ನಮ್ಮ ಅಧಿಕಾರಸ್ಥರ ಅಸಡ್ಡೆ ಮತ್ತು  ಬೌದ್ಧಿಕ ದಿವಾಳಿತನದ ಪ್ರತೀಕವಾಗಿದೆ.  ನಮ್ಮ ಇನ್ನೊಬ್ಬ ಮೇರುಸಾಹಿತಿ, ರಾಷ್ಟ್ರಕವಿ ಕುವೆ೦ಪು ಅವರ ಕುಪ್ಪಳ್ಳಿಯ ಮನೆ ಮಾತ್ರ ಅತ್ಯುತ್ತಮ ಸ್ಮಾರಕವಾಗಿ ಉಳಿದಿದ್ದು, ಅದರ ಅಭಿವೃದ್ಧಿಯತ್ತ ರಾಜ್ಯಸರಕಾರ ಆದ್ಯ ಗಮನ ಹರಿಸಿರುವುದು ಶ್ಲಾಘನೀಯ. ಇತ್ತೀಚೆಗಷ್ಟೇ ಕುವೆ೦ಪು ಅವರ ಆಳೆತ್ತರದ ಕ೦ಚಿನ ಪ್ರತಿಮೆ ಬೆ೦ಗಳೂರಿನ  ಫ್ರೀಡಂ ಪಾರ್ಕ್ ಬಳಿ ಅನಾವರಣಗೊ೦ಡಿದೆ.  ಇದು ಕೂಡ ಸ್ತುತ್ಯ ಕಾರ್ಯ.  ಆದರೆ ಕುವೆ೦ಪು ಅವರಿಗೆ ನೀಡಲಾಗಿರುವ ಮನ್ನಣೆ, ಮಾನ್ಯತೆ, ಕನ್ನಡದ ಸ೦ದರ್ಭದಲ್ಲಿ ಅವರಷ್ಟೇ ಪ್ರಮುಖರೆನಿಸುವ ಕಾರಂತರಿಗೇಕಿಲ್ಲ  ?  ಇದು ನನ್ನ ಮನದಲ್ಲೆಳುತ್ತಿರುವ ಪ್ರಶ್ನೆ. ವರಕವಿ ಬೇ೦ದ್ರೆಯವರ ಮನೆ ಏನಾಗಿದೆಯೋ ಗೊತ್ತಿಲ್ಲ, ಮಾಸ್ತಿಯವರ ಮನೆ ಎಲ್ಲಿದೆಯೋ ಗೊತ್ತಿಲ್ಲ. ಅನಕೃ ಮನೆ ಚಪ್ಪಲಿ ಗೋದಾಮಾಗಿದೆ, ಕೈಲಾಸ೦ ಮನೆ ಹೋಟೆಲಾಗಿದೆ. ಮೈಸೂರು ಮಲ್ಲಿಗೆಯ ನರಸಿ೦ಹಸ್ವಾಮಿಯವರ ಮನೆ ಕೂಡ ನೆಲಸಮವಾಗಿದೆ.  ಇವರೆಲ್ಲರ ಬಗ್ಗೆ ನಮಗೆ, ನಮ್ಮ ಅಧಿಕಾರಸ್ಥ ರಾಜಕಾರನಿಗೆಗಳಿಗೆ ಯಾಕಿಷ್ಟು ಅವಜ್ಞೆ. ನಮ್ಮ ನಾಳಿನ ಪೀಳಿಗೆ ನೆನಪಿಡಬೇಕಾದ ಈ ಮಹನೀಯರ ಮನೆಗಳು ಸ್ಮಾರಕವಾಗಿದ್ದಲ್ಲಿ ಅದೆಷ್ಟು ಚೆನ್ನಿರುತ್ತಿತ್ತು.   ಕುವೆ೦ಪು ಅವರಿಗೆ ಸಿಕ್ಕ ಸ್ಥಾನಮಾನ ಉಳಿದವರಿಗೆ ಯಾಕಿಲ್ಲ? ಇದು ನನ್ನ ಮನದಾಳದಲ್ಲಿ ಏಳುತ್ತಿರುವ ಪ್ರಶ್ನೆ. ನಿಮ್ಮ ಅಭಿಪ್ರಾಯ ತಿಳಿಸಿ. 

ಚಿತ್ರಕೃಪೆ: ಪ್ರಜಾವಾಣಿ 

Thursday 22 December 2011

ಬನ್ನಿ, ಓದಿ, ಪ್ರತಿಕ್ರಿಯಿಸಿ

ನಮಸ್ಕಾರ. ನಾನು  ಕನ್ನಡ ಸಾಹಿತ್ಯ ಲೋಕದ ನಿಕಟ ಪರಿಚಯವುಳ್ಳವನು.  ಬ್ಲಾಗ್ ಕ್ಷೇತ್ರಕ್ಕೆ ಹೊಸಬ. ಸುತ್ತಲ ಪ್ರಪ೦ಚದ ಹತ್ತು ಹಲವು ವಿದ್ಯಮಾನಗಳನ್ನು  ಸ್ಥೂಲವಾಗಿ ಅವಲೋಕನ ಮಾಡುತ್ತಾ ಬ೦ದಿದ್ದೇನೆ.  ರಾಜಕೀಯ, ಸಾಹಿತ್ಯ, ಸಾಮಾಜಿಕ, ಧಾರ್ಮಿಕ, ಮಾಧ್ಯಮ ಹೀಗೆ ಅನೇಕ ರ೦ಗಗಳಲ್ಲಿ ನನ್ನ ಆಸಕ್ತಿ. ಕನ್ನಡದ ಅನೇಕ ಬ್ಲಾಗುಗಳನ್ನು ಓದಿದ್ದೇನೆ, ಓದುತ್ತಿದ್ದೇನೆ.  ಆದ್ದರಿ೦ದ ಎಲ್ಲ ರ೦ಗಗಳ ಕುರಿತಾದ ವಸ್ತುನಿಷ್ಟ, ತೌಲನಿಕ ಮತ್ತು ವಿಮರ್ಶಾತ್ಮಕ ಟೀಕೆ-ಟಿಪ್ಪಣಿ ಮಾಡುತ್ತಾ, ಹೊಸ ಹೊಳಹನ್ನು ಕ೦ಡು ಕೊಳ್ಳಲು, ಸಾರ್ವಜನಿಕ ಅಭಿಪ್ರಾಯವನ್ನು ಅರಿಯುವ ಕಿರುಪ್ರಯತ್ನ ಈ ಬ್ಲಾಗ್ ಮೂಲಕ ಆಗಲಿದೆ. ಬನ್ನಿ, ಓದಿ, ಭಾಗವಹಿಸಿ, ಅಭಿಪ್ರಾಯಿಸಿ.