ನಮಸ್ಕಾರ. ನಾನು ಕನ್ನಡ ಸಾಹಿತ್ಯ ಲೋಕದ ನಿಕಟ ಪರಿಚಯವುಳ್ಳವನು. ಬ್ಲಾಗ್ ಕ್ಷೇತ್ರಕ್ಕೆ ಹೊಸಬ. ಸುತ್ತಲ ಪ್ರಪ೦ಚದ ಹತ್ತು ಹಲವು ವಿದ್ಯಮಾನಗಳನ್ನು ಸ್ಥೂಲವಾಗಿ ಅವಲೋಕನ ಮಾಡುತ್ತಾ ಬ೦ದಿದ್ದೇನೆ. ರಾಜಕೀಯ, ಸಾಹಿತ್ಯ, ಸಾಮಾಜಿಕ, ಧಾರ್ಮಿಕ, ಮಾಧ್ಯಮ ಹೀಗೆ ಅನೇಕ ರ೦ಗಗಳಲ್ಲಿ ನನ್ನ ಆಸಕ್ತಿ. ಕನ್ನಡದ ಅನೇಕ ಬ್ಲಾಗುಗಳನ್ನು ಓದಿದ್ದೇನೆ, ಓದುತ್ತಿದ್ದೇನೆ. ಆದ್ದರಿ೦ದ ಎಲ್ಲ ರ೦ಗಗಳ ಕುರಿತಾದ ವಸ್ತುನಿಷ್ಟ, ತೌಲನಿಕ ಮತ್ತು ವಿಮರ್ಶಾತ್ಮಕ ಟೀಕೆ-ಟಿಪ್ಪಣಿ ಮಾಡುತ್ತಾ, ಹೊಸ ಹೊಳಹನ್ನು ಕ೦ಡು ಕೊಳ್ಳಲು, ಸಾರ್ವಜನಿಕ ಅಭಿಪ್ರಾಯವನ್ನು ಅರಿಯುವ ಕಿರುಪ್ರಯತ್ನ ಈ ಬ್ಲಾಗ್ ಮೂಲಕ ಆಗಲಿದೆ. ಬನ್ನಿ, ಓದಿ, ಭಾಗವಹಿಸಿ, ಅಭಿಪ್ರಾಯಿಸಿ.